ತೆಲುಗಿನ ಹಿಟ್ ಸಿನೆಮಾ ಬಾಲಿವುಡ್ ಗೆ ರಿಮೇಕ್ ಆಗ್ತಾಯಿದ್ದು ಹಿಟ್ ಚಿತ್ರದಲ್ಲಿ ನಟ ರಾಜ್ ಕುಮಾರ್ ರಾವ್ ಅವರು ಅಭಿನಯಿಸಲಿದ್ದಾರೆ. ತೆಲುಗಿನಲ್ಲಿ ಶೈಲೇಶ್ ಕೋಲನು ಅವರು ಆಕ್ಷನ್ ಕಟ್ ಹೇಳಿದ್ದ ಚಿತ್ರದಲ್ಲಿ ವಿಶ್ವಾಕ್ ಸೇನ್ ಮತ್ತು ರುಹಾನಿ ಶರ್ಮಾ ಅವರು ಮುಖ್ಯ ಭೂಮಿಕೆಯನ್ನು ನಿಭಾಯಿಸಿದ್ದರು. ಇದೀಗ ಹಿಂದಿಯಲ್ಲಿ ವಿಶ್ವಾಕ್ ಅವರ ಪಾತ್ರಕ್ಕೆ ರಾಜ್ ಕುಮಾರ್ ಅವರೇ ಸೂಕ್ತ ಎಂಬುದು ಶೈಲೇಶ್ ಅವರ ಅಭಿಪ್ರಾಯವಾಗಿದೆ.
ಭೂತಕಾಲ ಹಾಗೂ ವರ್ತಮಾನದ ಜೊತೆಗೆ ನಿರಂತರ ಸಂಘರ್ಷದ ನಡುವಿನ ಕಥಾ ಹಂದರ ಈ ಚಿತ್ರದಲ್ಲಿದೆ. ಹಿಂದಿಯ ಅವತರಣಿಕೆಗೂ ಶೈಲೇಶ್ ಅವರೇ ಆಕ್ಷನ್ ಕಟ್ ಹೇಳಲಿದ್ದು, ಹಿಟ್ ಚಿತ್ರ ಸದ್ಯಕ್ಕೆ ಪ್ರೀಪ್ರೊಡಕ್ಷನ್ ಹಂತದಲ್ಲಿದೆ. 2021ರ ವೇಳೆಗೆ ಚಿತ್ರ ತೆರೆಗಪ್ಪಳಿಸುವ ನಿರೀಕ್ಷೆಯಿದ್ದು, ಸಿನಿಮಾದ ಬಗ್ಗೆ ರಾಜ್ ಕುಮಾರ್ ಅಭಿಮಾನಿಳ ಕ್ಯೂರಿಯಾಸಿಟಿಯನ್ನ ಹೆಚ್ಚಿಸಿದೆ.