Balayya Death | ಟಾಲಿವುಡ್ ಹಿರಿಯ ನಟ ಬಾಲಯ್ಯ ವಿಧಿವಶ
1 min read
Balayya Death | ಟಾಲಿವುಡ್ ಹಿರಿಯ ನಟ ಬಾಲಯ್ಯ ವಿಧಿವಶ
ತೆಲುಗು ಚಿತ್ರರಂಗದ ಹಿರಿಯ ನಟ ಬಾಲಯ್ಯ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ ಬೆಳಗ್ಗೆ ಯೂಸುಫ್‌ಗುಡಾದಲ್ಲಿರುವ ತಮ್ಮ ನಿವಾಸದಲ್ಲಿ ಇಹಲೋಕ ತ್ಯೆಜಿಸಿದ್ದಾರೆ.
ಬಾಲಯ್ಯ ಅವರ ಪೂರ್ಣ ಹೆಸರು ಮನ್ನವ ಬಾಲಯ್ಯ. ಅವರು ಏಪ್ರಿಲ್ 9, 1930 ರಂದು ಗುಂಟೂರು ಜಿಲ್ಲೆಯ ಅಮರಾವತಿ ಬಳಿಯ ವೈಕುಂಠಪುರದಲ್ಲಿ ಜನಿಸಿದರು.
ಬಾಲಯ್ಯ ಅವರು ತಮ್ಮ ಬಹುಮುಖ ಪ್ರತಿಭೆಯಾಗಿದ್ದು, ನಟ, ನಿರ್ಮಾಪಕ, ನಿರ್ದೇಶಕ ಮತ್ತು ಬರಹಗಾರರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಅವರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಬಾಲಯ್ಯ ಅವರ ನಿಧನಕ್ಕೆ ಟಾಲಿವುಡ್ ಗಣ್ಯರು ಕಂಬನಿ ಮಿಡಿದಿದ್ದಾರೆ. telugu senior-actor-balayya-passed-away