Temba Bavuma : ಎರಡು ಇನ್ನಿಂಗ್ಸ್ನಲ್ಲಿ ಡಕೌಟ್ ಆಗಿ ಬೇಡದ ದಾಖಲೆ ಬರೆದ ಬವುಮಾ
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ದೊರೆತ ಗೆಲುವಿನ ಸಂಭ್ರಮದ ನಡುವೆ ಸೌತ್ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಅನಗತ್ಯ ದಾಖಲೆಯೊಂದನ್ನ ಬರೆದಿದ್ದಾರೆ.
ಸೆಂಚುರಿಯನ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಕಗೀಸೋ ರಬಾಡ ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಸೌತ್ ಆಫ್ರಿಕಾ 87 ರನ್ಗಳಿಂದ ಗೆದ್ದುಬೀಗಿತು.
ಆದರೆ ಇತ್ತೀಚೆಗಷ್ಟೇ ಸೌತ್ ಆಫ್ರಿಕಾ ತಂಡದ ಕ್ಯಾಪ್ಟನ್ ಜವಾಬ್ದಾರಿ ಹೊತ್ತುಕೊಂಡಿರುವ ತೆಂಬಾ ಬವುಮಾ, ಪಂದ್ಯದ ಎರಡು ಇನ್ನಿಂಗ್ಸ್ಗಳಲ್ಲೂ ಡಕೌಟ್ ಆಗುವ ಮೂಲಕ ಬೇಡದ ದಾಖಲೆ ಬರೆದಿದ್ದಾರೆ. ಆ ಮೂಲಕ ಈ ದಾಖಲೆ ಬರೆದ 4ನೇ ಕ್ಯಾಪ್ಟನ್ ಎನಿಸಿದ್ದಾರೆ.
ತೆಂಬಾ ಬವುಮಾ ಅವರಿಗೂ ಮುನ್ನ ಆಸ್ಟ್ರೇಲಿಯಾದ ಮಾರ್ಕ್ ಟೇಲರ್, ಪಾಕಿಸ್ತಾನದ ರಶೀದ್ ಲತೀಫ್ ಹಾಗೂ ಬಾಂಗ್ಲಾದೇಶದ ಹಬೀಬುಲ್ ಬಷರ್ ಅವರುಗಳು ಎರಡು ಇನ್ನಿಂಗ್ಸ್ಗಳಲ್ಲೂ ಡಕೌಟ್ ಆಗಿರುವ ದಾಖಲೆ ಹೊಂದಿದ್ದರು. ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 2ನೇ ಬಾಲ್ನಲ್ಲೇ ವಿಕೆಟ್ ಒಪ್ಪಿಸಿದ್ದ ಬವುಮಾ, ದ್ವಿತೀಯ ಇನ್ನಿಂಗ್ಸ್ನಲ್ಲಿ ಮೊದಲ ಬಾಲ್ನಲ್ಲೇ ಔಟಾಗಿ ನಿರಾಸೆ ಅನುಭವಿಸಿದರು.
32 ವರ್ಷದ ತೆಂಬಾ ಬವುಮಾ ಕೆಲವೇ ವಾರಗಳ ಹಿಂದಷ್ಟೇ ಸೌತ್ ಆಫ್ರಿಕಾ ತಂಡದ ಕ್ಯಾಪ್ಟನ್ ಜವಾಬ್ದಾರಿವಹಿಸಿಕೊಂಡಿದ್ದರು. ಆದರೆ 95 ಟೆಸ್ಟ್ ಇನ್ನಿಂಗ್ಸ್ಗಳಲ್ಲಿ ಏಕೈಕ ಶತಕ ಬಾರಿಸಿರುವ ಬವುಮಾ ಅವರನ್ನ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿದ ಬಗ್ಗೆ ಸಾಕಷ್ಟು ಆಕ್ಷೇಪ ವ್ಯಕ್ತವಾಗಿತ್ತು.
Temba Bavuma : Bavuma recorded an unwanted duckout in two innings