ಕರ್ನಾಟಕದಲ್ಲಿ ನಿನ್ನೆ ಒಂದೇ ದಿನ 10 ಒಮಿಕ್ರಾನ್ ಕೇಸ್ ಪತ್ತೆ…
ಒಮಿಕ್ರಾನ್ ಸೋಂಕು ನಿಧಾನವಾಗಿ ತನ್ನ ಕದಂಬ ಬಾಹುಗಳನ್ನ ದೇಶಾದ್ಯಂತ ಹರಡುತ್ತಿದೆ. ಒಮಿಕ್ರಾನ್ ಕರೋನಾ ಮೂರನೆ ಅಲೆಯ ರೂಪದಲ್ಲಿ ಹರಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಈಗಾಗಲೇ ಹಲವು ರಾಜ್ಯಗಳು ಭಾಗಶಃ ಲಾಕ್ಡೌನ್ ವಿಧಿಸಿ ಬಿಗಿ ಕ್ರಮಗಳನ್ನ ಕೈಗೊಳ್ಳುತ್ತಿವೆ.
ಕರ್ನಾಟಕದಲ್ಲೂ ನಿನ್ನೆ ಒಂದೇ ದಿನ 10 ಒಮಿಕ್ರಾನ್ ಕೇಸ್ ಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ 8 ಕೇಸ್ ಮತ್ತು ಧಾರವಾಢದಲ್ಲಿ ಎರಡು ಕೇಸ್ ಗಳು ಪತ್ತೆಯಾಗಿವೆ. ಈ ಕುರಿತು ಆರೋಗ್ಯ ಸಚಿವ ಕೆ ಸುಧಾಕರ್ ಟ್ವೀಟ್ ಮಾಡುವ ಮುಲಕ ಮಾಹಿತಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಒಟ್ಟು ಒಮಿಕ್ರಾನ್ ಸೋಂಕಿತರ ಸಂಖ್ಯೆ 76 ಕ್ಕೆ ಏರಿಕೆಯಾಗಿದೆ.
Ten new cases of Omicron have been confirmed in Karnataka on Jan 2nd taking the tally to 76:
🔹 Bengaluru: 8 cases (of which 5 are international travellers)
🔹Dharwad: 2 cases#OmicronInIndia #Omicronindia #COVID19 #Karnataka @BSBommai @mansukhmandviya— Dr Sudhakar K (@DrSudhakar_) January 3, 2022








