Uttarakhand Cloudburst: ಭಾರತ ನೇಪಾಳ ಗಡಿಯಲ್ಲಿ ಮೇಘಸ್ಪೋಟ – 30 ಮನೆಗಳ ನಾಶ…
ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ ಮೇಘಸ್ಫೋಟದಿಂದಾಗಿ ಕನಿಷ್ಠ 30 ಮನೆಗಳು ಧ್ವಂಸಗೊಂಡಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಭಾರತ ಮತ್ತು ನೇಪಾಳದ ಗಡಿಗೆ ಸಮೀಪದಲ್ಲಿ ಹರಿಯುವ ಲಾಸ್ಕೋ ನದಿ ಪ್ರವಾಹ ಮಟ್ಟವನ್ನ ಮೀರಿ ಹರಿಯುತ್ತಿದ್ದು, ಭೂ ಕುಸಿತದಲ್ಲಿ ಕಟ್ಟಡವೊಂದು ಕೊಚ್ಚಿ ಹೋದ ವಿಡಿಯೋವನ್ನ ಉತ್ತರಾಖಂಡದ ಅಗ್ನಿಶಾಮಕ ಸೇವೆ ಇಲಾಖೆಯು ಹಂಚಿಕೊಂಡಿದೆ.
ಪಿಥೋರಗಢ್ ಜಿಲ್ಲೆಯ ಧಾರ್ಚುಲಾ ಪಟ್ಟಣದಲ್ಲಿ ಭಾರೀ ಪ್ರವಾಹದಲ್ಲಿ ಕೊಚ್ಚಿಹೋದ ಕಟ್ಟಡದ ವಿಡಿಯೋ ವೈರಲ್ ಆಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ ಎಂದು ಉತ್ತರಾಖಂಡದ ಅಗ್ನಿಶಾಮಕ ಇಲಾಖೆ ತಿಳಿಸಿದೆ.
https://twitter.com/i/status/1568491269999198208
ನಿನ್ನೆ ರಾತ್ರಿ ಧಾರ್ಚುಲಾದಲ್ಲಿ ಕಾಳಿ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ಧಾರ್ಚುಲಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಹಾನಿಯಾಗಿದೆ. “ಮೋಡ ಸ್ಫೋಟದ ಘಟನೆಯಲ್ಲಿ ಸುಮಾರು 30 ಮನೆಗಳು ನಾಶವಾಗಿವೆ ಮತ್ತು ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ” ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಆಶಿಶ್ ಚೌಹಾನ್ ಎಎನ್‌ಐಗೆ ತಿಳಿಸಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್‌ಡಿಆರ್‌ಎಫ್) ತಂಡಗಳು ಸ್ಥಳದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿವೆ ಎಂದು ಡಿಎಂ ಹೇಳಿದರು. ಕಾಳಿ ನದಿಯ ಪ್ರವಾಹದಿಂದ ಉಂಟಾದ ಹಾನಿ ಭಾರತ ಮತ್ತು ನೇಪಾಳ ಎರಡೂ ಹಳ್ಳಿಗಳಲ್ಲಿ ಸಂಭವಿಸಿದೆ.








