ಕಾಶ್ಮೀರದ ಎರಡು ಕಡೆ ಉಗ್ರರ ಅಡಗುತಾಣ ಪತ್ತೆ | ಸ್ಪೋಟಕ ವಶ
ಜಮ್ಮು-ಕಾಶ್ಮೀರ : ಕಾಶ್ಮೀರ ಪುಲ್ವಾಮಾ ಜಿಲ್ಲೆಯಲ್ಲಿ ಮಧುರಾದಲ್ಲಿ ಸೇನೆ ಶೋಧನೆ ನಡೆಸಿದಾಗ ಉಗ್ರರ ಅಡಗುತಾಣಗಳು ಪತ್ತೆಯಾಗಿವೆ.
ಈ ಶೋಧ ಕಾರ್ಯದಲ್ಲಿ ಯಾವುದೇ ಮದ್ದುಗುಂಡುಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಅಡುಗುತಾಣದಲ್ಲಿ ಶೂ ಮತ್ತು ಸಾಕ್ಸ್ಗಳು ಸೇರಿದಂತೆ ಕೆಲವು ತುಕ್ಕು ಹಿಡಿದ ಅಡುಗೆ ಪಾತ್ರೆಗಳು ಸ್ಥಳದಲ್ಲಿ ಪತ್ತೆಯಾಗಿದ್ದು, ಭದ್ರತಾ ಪಡೆ ವಶಪಡಿಸಿಕೊಂಡಿದೆ.
J&K | Kishtwar Police launched a cordon & search operation along with 11RR in general area of Tillar Forest of Marwah in which a hideout was busted & a cache of arms & ammunition, incl one Chinese grenade, three UBGL grenades, recovered. FIR registered, further investigation on. pic.twitter.com/lgM9WJWV2X
— ANI (@ANI) March 25, 2022
ಅಲ್ಲದೇ ಕಾಶ್ಮೀರದ ಮಾರ್ವಾಹ್ನ ತಿಲ್ಲಾರ್ ಫಾರೆಸ್ಟ್ನ ಸಾಮಾನ್ಯ ಪ್ರದೇಶದಲ್ಲಿ ಪೊಲೀಸರು ಮತ್ತು ಸೇನೆ ನಡೆಸಿದ ಜಂಟಿ ಕಾರ್ಯಚಾರಣೆಯಲ್ಲಿ. ಮತ್ತೊಂದು ಅಡಗುತಾಣ ಪತ್ತೆಯಾಗಿದ್ದು, ಇಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಂಗ್ರಹ, ಒಂದು ಚೈನೀಸ್ ಗ್ರೆನೇಡ್, ಮೂರು UBGL ಗ್ರೆನೇಡ್ಗಳು ಪತ್ತೆಯಾಗಿವೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಕೆ ಮುಂದುವರೆಸಿದ್ದಾರೆ.