ಬಂಗಾಳದಲ್ಲಿ ಬಾಂಗ್ಲಾದೇಶದ ಶಂಕಿತ ಉಗ್ರನ ಬಂಧನ  

1 min read

ಬಂಗಾಳದಲ್ಲಿ ಬಾಂಗ್ಲಾದೇಶದ ಶಂಕಿತ ಉಗ್ರನ ಬಂಧನ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಬಾಂಗ್ಲಾದೇಶದ JMBಯ ಶಂಕಿತ ಉಗ್ರನನ್ನ ಬಂಧಿಸಲಾಗಿದೆ. ಉಗ್ರನನ್ನ ಬಂಧಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಆತನನ್ನ ವಿಚಾರಣೆಗೊಳಪಡಿಸಿರೋದಾಗಿ ವರದಿಯಾಗಿದೆ. ಸುಭಾಷ್‌ ಗ್ರಾಮದಲ್ಲಿ NIA ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಾಂಗ್ಲಾದೇಶ ಮೂಲದ ಶಂಕಿತ ಉಗ್ರನನ್ನ ಬಂಧಿಸಿದ್ದಾರೆ.

ಬಂಧಿತನಿಂದ ನಕಲಿ ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ. ಉಗ್ರ ಸಂಘಟನೆಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು  ತಿಳಿದುಬಂದಿದೆ. ಇನ್ನೂ ಬಂಧಿತನ ವಿಚಾರಣೆ ನಡೆಯುತ್ತಿದ್ದು, ಆತ ಯಾವಾಗ ಮತ್ತು ಹೇಗೆ ಭಾರತ ಗಡಿ ಪ್ರವೇಶಿಸಿದ ಎಂಬುದನ್ನು ತಿಳಿದುಕೊಳ್ಳಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ಕೆನಡಾದಿಂದ ಹಿಂಪಡೆದ ಅನ್ನಪೂರ್ಣೇಶ್ವರಿ ವಿಗ್ರಹ ವಾರಣಾಸಿಯ ಕಾಶಿವಿಶ್ವನಾಥ ದೇವಾಲಯಕ್ಕೆ…..  

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd