ಸೌತ್ ಐಸ್ ಲ್ಯಾಂಡ್: ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋಲುಂಡಿದ್ದ ಭಾರತ, ಎರಡನೇ ಟೆಸ್ಟ್ ದಲ್ಲೂ ಚೇತರಿಸಿಕೊಳ್ಳುವ ಲಕ್ಷಣಗಳೇ ಕಾಣುತ್ತಿಲ್ಲ. ಟೆಸ್ಟ್ ನ ಮೊದಲ ದಿನವೇ ಭಾರತ ನೀರಸ ಪ್ರದರ್ಶನ ತೋರಿದ್ದು, 242 ರನ್ ಗಳಿಗೆ ಆಲೌಟ್ ಆಗಿದೆ. ಟಾಸ್ ಸೋಲು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭದಿಂದಲೇ ಕಿವೀಸ್ ಬೌಲರ್ ಗಳ ದಾಳಿಗೆ ತತ್ತರಿಸಿ ಪೆವಿಲಿಯನ್ ಪರೇಡ್ ನಡೆಸಿತು. ಭಾರತದ ಪರ ಪೃಥ್ವಿ ಶಾ (54)ರನ್, ಚೇತೇಶ್ವರ್ ಪೂಜಾರ(54)ರನ್, ಹನುಮ ವಿಹಾರಿ(55) ರನ್ ಗಳಿಸಿದ್ದು, ಬಿಟ್ಟರೇ ಉಳಿದ್ಯಾವ ಆಟಗಾರರು ಮಿಂಚಲೇ ಇಲ್ಲ. ಅದರಲ್ಲೂ ಕಿವೀಸ್ ನೆಲದಲ್ಲಿ ರನ್ ಬರ ಅನುಭವಿಸುತ್ತಿರುವ ವಿರಾಟ್, ಈ ಇನ್ನಿಂಗ್ಸ್ ನಲ್ಲೂ ಮಂಕಾಗಿದ್ದು, ಮೂರು ರನ್ ಮಾತ್ರ ಗಳಿಸಿದರು.
ನ್ಯೂಜಿಲೆಂಡ್ ಪರ ಜೆಮೀಸನ್ 5 ವಿಕೆಟ್ ಪಡೆದು ಮಿಂಚಿದರೆ, ಸೌಥಿ ಹಾಗೂ ಬೋಲ್ಟ್ ತಲಾ ಎರಡು ವಿಕೆಟ್ ಪಡೆದ್ರು.
ಸದ್ಯ ಬ್ಯಾಟಿಂಗ್ ನಡೆಸುತ್ತಿರುವ ನ್ಯೂಜಿಲೆಂಡ್ ಯಾವುದೆ ವಿಕೆಟ್ ನಷ್ಟವಿಲ್ಲದೆ 14 ರನ್ ಗಳಿಸಿದೆ.
ಬೆಂಗಳೂರು ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಬಿಎಂಟಿಸಿ ದರ ಏರಿಕೆ ಬಗ್ಗೆ ಸಚಿವ ಬೈರತಿ ಸುರೇಶ್ ನೀಡಿದ್ರು ಶಾಕಿಂಗ್ ಸುದ್ದಿ
ಬೆಂಗಳೂರು: ರಾಜಧಾನಿಯ ಜನಸಾಮಾನ್ಯರ ಸಾರಿಗೆಯಾದ ಬಿಎಂಟಿಸಿ ಬಸ್ ಪ್ರಯಾಣ ಇನ್ನು ಮುಂದೆ ದುಬಾರಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ಹಲವು ದಿನಗಳಿಂದ ಕೇಳಿಬರುತ್ತಿದ್ದ ಬಸ್ ಟಿಕೆಟ್ ದರ...








