ದೇಶದಲ್ಲಿ ಗರಿಷ್ಠ ಕೊರೋನಾ ಸೋಂಕು ಪ್ರಕರಣ ದಾಖಲಾದ 10 ರಾಜ್ಯಗಳು
ಹೊಸದಿಲ್ಲಿ, ಸೆಪ್ಟೆಂಬರ್28: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 88,600 ಕೋವಿಡ್-19 ಹೊಸ ಪ್ರಕರಣಗಳು ದಾಖಲಾದ ನಂತರ ರಾಷ್ಟ್ರವ್ಯಾಪಿ ಪ್ರಕರಣಗಳ ಸಂಖ್ಯೆ ಭಾನುವಾರ ಆರು ಮಿಲಿಯನ್ ತಲುಪಿದೆ. ಕೊರೋನಾ ಸೋಂಕು 1,124 ಜನರ ಸಾವಿಗೆ ಕಾರಣವಾಗಿದ್ದು ಈ ಮೂಲಕ ಸಾವಿನ ಸಂಖ್ಯೆ 94,503 ಕ್ಕೆ ತಲುಪಿದೆ. ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಅಂಕಿ ಅಂಶಗಳ ಪ್ರಕಾರ ಭಾನುವಾರ ಬೆಳಗ್ಗಿನ ಅವಧಿಯವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 5,992,532 ಆಗಿದೆ.
ಆರೋಗ್ಯ ಸಚಿವಾಲಯವು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಗರಿಷ್ಠ ಸಂಖ್ಯೆಯ ಪ್ರಕರಣಗಳು ದಾಖಲಾಗಿದೆ ಎಂದು ಹೇಳಿದೆ .ಈ ರಾಜ್ಯಗಳು ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ಉತ್ತರ ಪ್ರದೇಶ, ಒಡಿಶಾ, ದೆಹಲಿ, ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢ.
ಮಹಾರಾಷ್ಟ್ರ
13,21,176 ಸೋಂಕಿನ ಪ್ರಕರಣಗಳೊಂದಿಗೆ ಮಹಾರಾಷ್ಟ್ರವು ಕೋವಿಡ್ 1-9 ರಿಂದ ಹೆಚ್ಚು ಪೀಡಿತ ರಾಜ್ಯವಾಗಿ ಮುಂದುವರೆದಿದೆ. ಶನಿವಾರ, ರಾಜ್ಯದಲ್ಲಿ ಕೋವಿಡ್ -19 ರ ಹೊಸ 20,419 ಪ್ರಕರಣಗಳು ದಾಖಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ಆಂಧ್ರಪ್ರದೇಶ
ಮಹಾರಾಷ್ಟ್ರದ ನಂತರ, ಕೋವಿಡ್ -19 ನಿಂದ ಹೆಚ್ಚು ಹಾನಿಗೊಳಗಾದ ಎರಡನೇ ರಾಜ್ಯ ಆಂಧ್ರಪ್ರದೇಶ. ಶನಿವಾರ ಸಂಜೆಯ ಹೊತ್ತಿಗೆ, ರಾಜ್ಯದಲ್ಲಿ 5,97, 294 ಚೇತರಿಕೆ ಕಂಡಿದೆ. ರಾಜ್ಯದಲ್ಲಿ 5,97, 294 ಸಕ್ರಿಯ ಪ್ರಕರಣಗಳು ಸೇರಿದಂತೆ ಒಟ್ಟು 6,68,751 ಕೋವಿಡ್ -19 ಸೋಂಕು ಪ್ರಕರಣಗಳಿವೆ. ಕೊರೋನಾಗೆ ಬಲಿಯಾದವರ ಸಂಖ್ಯೆ 5,663 ಆಗಿದೆ.
ತಮಿಳುನಾಡು
ತಮಿಳುನಾಡಿನಲ್ಲಿ ಶನಿವಾರ 5,647 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 5,75,017 ಕ್ಕೆ ತಲುಪಿದೆ.
ಕೋವಿಡ್ -19 ನಿಂದ ಚೇತರಿಕೆಕಂಡವರ ಪ್ರಮಾಣ 5,612 ರಷ್ಟಿದ್ದು, ಒಟ್ಟು 5,19,448 ಜನರು ಈವರೆಗೆ ಗುಣಮುಖರಾಗಿದ್ದಾರೆ.
ಕರ್ನಾಟಕ
ಕರ್ನಾಟಕವು ಶನಿವಾರ 8,811 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 86 ಸಂಬಂಧಿತ ಸಾವುನೋವುಗಳನ್ನು ವರದಿ ಮಾಡಿದೆ. ಒಟ್ಟು ಸೋಂಕಿತರ ಸಂಖ್ಯೆ 5,66,023 ಕ್ಕೆ ತಲುಪಿದೆ ಮತ್ತು ಸಾವಿನ ಸಂಖ್ಯೆ 8,503 ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕೇರಳ
ಮೊದಲ ಕೋವಿಡ್ -19 ಪ್ರಕರಣ ಕಾಣಿಸಿಕೊಂಡ ರಾಜ್ಯ ಕೇರಳದಲ್ಲಿ ಈಗ 1,66,939 ಪ್ರಕರಣಗಳಿವೆ. ರಾಜ್ಯ ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಶನಿವಾರ 7,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ.
ರಾಜ್ಯದಲ್ಲಿ ಕೋವಿಡ್ -19 ನಿಂದ 14,500 ಕ್ಕೂ ಹೆಚ್ಚು ರೋಗಿಗಳು ಈಗ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 52,678 ಆಗಿದೆ. 50,000 ಕ್ಕೂ ಹೆಚ್ಚು ಜನರು ಪ್ರಸ್ತುತ ಚಿಕಿತ್ಸೆಯಲ್ಲಿದ್ದಾರೆ.
ಉತ್ತರ ಪ್ರದೇಶ
ರಾಜ್ಯ ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಶನಿವಾರ 4,412 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, ಉತ್ತರ ಪ್ರದೇಶದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ 3,82,835 ಕ್ಕೆ ತಲುಪಿದೆ.
ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 57,086 ಆಗಿದ್ದರೆ, 5,517 ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ
ಒಡಿಶಾ
ಕಳೆದ ಕೆಲವು ದಿನಗಳಿಂದ ಅತಿ ಹೆಚ್ಚು ಕೋವಿಡ್ -19 ಸೋಂಕುಗಳನ್ನು ದಾಖಲಿಸುತ್ತಿರುವ ಒಡಿಶಾದಲ್ಲಿ ಒಟ್ಟು 2,05,452 ಸೋಂಕು ಪ್ರಕರಣಗಳಿವೆ. ಶನಿವಾರ 4,356 ಸೋಂಕು ಪ್ರಕರಣಗಳು ವರದಿಯಾಗಿದ್ದು ಮತ್ತೊಮ್ಮೆ ಹೆಚ್ಚಳವನ್ನು ದಾಖಲಿಸಿದೆ.
ಮಾರಣಾಂತಿಕ ವೈರಸ್‌ನಿಂದ 4,761 ಸೋಂಕಿತರು ಯಶಸ್ವಿಯಾಗಿ ಚೇತರಿಕೆ ಕಂಡಿದ್ದಾರೆ ಎಂದು ರಾಜ್ಯವು ವರದಿ ಮಾಡಿದೆ. ಸಾವಿನ ಸಂಖ್ಯೆ 783 ಆಗಿದೆ.
ದೆಹಲಿ
ರಾಷ್ಟ್ರ ರಾಜಧಾನಿಯಲ್ಲಿ ದೈನಂದಿನ ಸೋಂಕಿನ ಸಂಖ್ಯೆ 4,000 ಕ್ಕಿಂತಲೂ ಕಡಿಮೆಯಾಗಿತ್ತು. ಇದು ನಗರದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುವ ಹಾದಿಯಲ್ಲಿದೆ ಎಂದು ಸೂಚಿಸುತ್ತದೆ.
ಶನಿವಾರ ಸಂಜೆಯವರೆಗೆ, ನಗರದಲ್ಲಿ ಒಟ್ಟು 2,67,822 ಕೋವಿಡ್ -19 ಸೋಂಕಿನ ಪ್ರಕರಣಗಳು ದಾಖಲಾಗಿದೆ. ಸಾವಿನ ಸಂಖ್ಯೆ 5,193 ತಲುಪಿದೆ.
ಪಶ್ಚಿಮ ಬಂಗಾಳ
3,181 ಜನರಿಗೆ ಕೊರೋನಾ ಸೋಂಕು ಧೃಡಪಟ್ಟಿದ್ದು ಈ ಮೂಲಕ ಪಶ್ಚಿಮ ಬಂಗಾಳದಲ್ಲಿ ಕೋವಿಡ್ -19 ಮೊತ್ತವು 2,44,240 ಕ್ಕೆ ಏರಿದೆ. ಸಾವಿನ ಸಂಖ್ಯೆ 4,721 ಎಂದು ರಾಜ್ಯ ಆರೋಗ್ಯ ಇಲಾಖೆ ಶನಿವಾರ ತಿಳಿಸಿದೆ.
ಛತ್ತೀಸ್‌ಗಢ
24 ಗಂಟೆಗಳಲ್ಲಿ 3,896 ಹೊಸ ಪ್ರಕರಣಗಳು ದಾಖಲಾಗಿರುವುದರಿಂದ ಛತ್ತೀಸ್‌ಗಢದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ ಶನಿವಾರ 1 ಲಕ್ಷ ದಾಟಿದೆ. ಇದು ರಾಜ್ಯದಲ್ಲಿ ಇದುವರೆಗಿನ ಅತಿ ಹೆಚ್ಚು ಏಕದಿನ ಸ್ಪೈಕ್ ಆಗಿದೆ.
ಕೋವಿಡ್ -19 ಸೋಂಕುಗಳ ಒಟ್ಟು ಸಂಖ್ಯೆ ಈಗ 1,02,461 ಆಗಿದೆ. ಸಾವಿನ ಸಂಖ್ಯೆ 817 ಕ್ಕೆ ತಲುಪಿದೆ.