ಆಸ್ಟ್ರೇಲಿಯಾ – ಇಂಗ್ಲೆಂಡ್ ನಡುವಿನ ಆಶಷ್ ಸರಣಿ ನಡೆಯುವುದು ಖಚಿತ..! Ashes saaksha tv
2021ರ ವರ್ಷಾಂತ್ಯಕ್ಕೆ ಆಶಷ್ ಟೆಸ್ಟ್ ಸರಣಿ ನಡೆಯುವುದು ಖಚಿತವಾಗಿದೆ. ಕೋವಿಡ್ ಮಾರ್ಗಸೂಚಿಯಿಂದಾಗಿ ಇಂಗ್ಲೆಂಡ್ ತಂಡದ ಕೆಲವು ಆಟಗಾರರು ಈ ಬಾರಿಯ ಆಶಷ್ ಸರಣಿಯಲ್ಲಿ ಆಡುವುದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು.
ಇದೀಗ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮತ್ತು ಇಂಗ್ಲೆAಡ್ ಕ್ರಿಕೆಟ್ ತಂಡದ ನಾಯಕ ಜಾಯ್ ರೂಟ್ ಅವರ ಜೊತೆ ಸಭೆಯನ್ನು ನಡೆಸಿತ್ತು. ಈ ಸಭೆಯಲ್ಲಿ ಸರಣಿಯ ಬಗ್ಗೆ ಚರ್ಚೆ ನಡೆಸಲಾಗಿತ್ತು.
ಅಂತಿಮವಾಗಿ ಇಂಗ್ಲೆಂಡ್ ನಾಯಕ ಜಾಯ್ ರೂಟ್ ಅವರು ಆಶಷ್ ಸರಣಿಯಲ್ಲಿ ಆಡುವುದಾಗಿ ಹೇಳಿದ್ದಾರೆ. ಇದ್ರಿಂದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಆಶಷ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ಆಡುವುದನ್ನು ಖಚಿತ ಪಡಿಸಿದೆ. ಆದ್ರೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಇನ್ನೂ ಈ ಕುರಿತು ಹೇಳಿಕೆ ನೀಡಿಲ್ಲ.
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಸೇರಿದಂತೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಕೋವಿಡ್ ಮಾರ್ಗಸೂಚಿಯಂತೆ ಪ್ರವಾಸಿ ತಂಡ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿರಬೇಕಾಗುತ್ತದೆ. ಡಿಸೆಂಬರ್ 8ರಿಂದ ಮೊದಲ ಟೆಸ್ಟ್ ಪಂದ್ಯ ಬ್ರಿಸ್ಟೇನ್ ನಲ್ಲಿ ಆರಂಭವಾಗಲಿದೆ.
ಡಿಸೆಂಬರ್ 26ರಿಂದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ನಡೆಯಲಿದೆ. ಈ ವೇಳೆಯಲ್ಲಿ ಇಂಗ್ಲೆಂಡ್ ಆಟಗಾರರ ಕುಟುಂಬದರಿಗೆ ಆಸ್ಟ್ರೇಲಿಯಾಗೆ ಬರಲು ಅನುಮತಿ ನೀಡಲಾಗಿದೆ.