ಈರುಳ್ಳಿ ಭಾರತದಲ್ಲಿ ಅನೇಕರಿಗೆ ನಿತ್ಯದ ಆಹಾರ ವಸ್ತುವಾಗಿದೆ. ಭಾರತೀಯರು ಕೆಲವು ರೋಗಗಳಿಗೆ ಈರುಳ್ಳಿಯನ್ನು ಮನೆ ಮದ್ದಾಗಿಯೂ ಬಳಸುತ್ತಾರೆ. ಈ ಕ್ರಮ ಇಂದು ನಿನ್ನೆಯದಲ್ಲ. ಪುರಾತನ ಕಾಲದಿಂದಲೂ ಈರುಳ್ಳಿ ಆಹಾರವಾಗಿ ಮಾತ್ರವಲ್ಲ ಔಷಧಿಯಾಗಿ ಬಳಕೆಯಲ್ಲಿದೆ.
ಈರುಳ್ಳಿಯನ್ನು ಭಾರತದಲ್ಲಿ ಮಾತ್ರವಲ್ಲ, ಈಜಿಪ್ಟಿನಲ್ಲೂ ಪುರಾತನಕಾಲದಿಂದ ಮಹತ್ವ ಪಡೆದಿದೆ. ಕೆಮ್ಮು, ಮಲಬದ್ಧತೆ ನಿವಾರಿಸುವ ಈರುಳ್ಳಿ ಕ್ರಿಮಿನಾಶಕ ಗುಣಗಳನ್ನು ಹೊಂದಿದೆ. ಈರುಳ್ಳಿ ಸೇವಿಸಿದರೆ ಅದ್ಭುತವಾದ ನಿದ್ರೆ ಬರುತ್ತದೆ ಎಂದೂ ಹೇಳುತ್ತಾರೆ ಅಷ್ಟಿಷ್ಟು ಆಯುರ್ವೇದ ಗೊತ್ತಿರುವ ಪಂಡಿತರು. ಈರುಳ್ಳಿ ಬಳಕೆಯಿಂದ ಶ್ವಾಸಕೋಶ, ಜೀರ್ಣಶಕ್ತಿ, ಜ್ವರದಂತಹ ಮಹಾರೋಗಗಳನ್ನು ಗುಣಪಡಿಸಿಕೊಳ್ಳಬಹುದು. ಬೆಲ್ಲದೊಂದಿಗೆ ಹಸಿ ಈರುಳ್ಳಿ ತಿಂದರೆ ಮಕ್ಕಳ ಬೆಳವಣಿಗೆಗೆ ಒಳ್ಳೆಯದು ಎಂಬ ಮಾತು ಈಗಲೂ ಹಳಬರು ಹೇಳುತ್ತಲೇ ಇರುತ್ತಾರೆ.
ಈರುಳ್ಳಿಯಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಲೋಹ, ವಿಟಮಿನ್ ಎ,ಬಿ,ಸಿ ಇರುತ್ತವೆ. ಈರುಳ್ಳಿಯನ್ನು ಪಿತ್ತ ಪ್ರಕೃತಿ ಇರುವವರು, ಮೆದುಳಿನ ವಿಕಾರ ಇರುವವರು ಸೇವಿಸುವುದು ಒಳ್ಳೆಯದಲ್ಲ. ಇದರ ದುಷ್ಪರಿಣಾಮ ತಡೆಯಬೇಕೆಂದರೆ ದಾಳಿಂಬೆ ರಸ ಕುಡಿಯಬೇಕು.
ಈರುಳ್ಳಿಯನ್ನು ಸಂಸ್ಕೃತದಲ್ಲಿ ಪಲಾಂಡು, ಹಿಂದಿಯಲ್ಲಿ ಪ್ಯಾಜ್, ಇಂಗ್ಲೀಷ್ ನಲ್ಲಿ ಆನಿಯನ್ ಎಂದು ಕರೆಯುತ್ತಾರೆ. ಇದಕ್ಕಿರುವ ಇನ್ನಿತರ ಹೆಸರುಗಳೆಂದರೆ ಮುಖದೂಷಕ, ಯುವನೇಷ್ಟ, ದೀಪನ, ಕ್ರಿಮಿಘ್ನ, ಮುಖಗಂಧಕ, ವಿಶ್ವಗಂಧಕ, ರೋಚನ ಇತ್ಯಾದಿಗಳು. ಈರುಳ್ಳಿ ಒಂದು ಕುರುಚಲ ಗಿಡ. ಇದು ಸುಮಾರು 60 ರಿಂದ 90 ಸೆಂಟಿಮೀಟರ್ನಷ್ಟು ಎತ್ತರಕ್ಕೆ ಬೆಳೆಯುತ್ತದೆ. ಎಲೆಯು ದಪ್ಪವಾಗಿ, ಮೃದುವಾಗಿ ವೃತ್ತವಾಗಿ ಹಸಿರುಬಣ್ಣದಿಂದ ಕೂಡಿದೆ. ಈ ದ್ರವ್ಯವು ಬಿಳಿ ಬಣ್ಣದ ಹೂಗಳನ್ನು ಬಿಡುತ್ತದೆ. ಈ ದ್ರವ್ಯವು ಹೂವು ಹಣ್ಣನ್ನು ಚಳಿಗಾಲದಲ್ಲಿ ಬಿಡುತ್ತದೆ. ಈರುಳ್ಳಿ ಗಡ್ಡೆಯನ್ನು ಔಷಧ ತಯಾರಿಕೆಗೆ ಉಪಯೋಗಿಸುತ್ತಾರೆ. ಭಾರತದ ಎಲ್ಲಾ ರಾಜ್ಯಗಳಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯುವ ಈರುಳ್ಳಿಯನ್ನು ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ.
ಈರುಳ್ಳಿಯಲ್ಲಿ ಬಿಳಿ ಈರುಳ್ಳಿ ಮತ್ತು ಕೆಂಪು ಈರುಳ್ಳಿ ಎಂಬ ಎರಡು ವಿಧಗಳಿವೆ. ಬಿಳಿ ಈರುಳ್ಳಿಯನ್ನು ಔಷಧಗಳಿಗೆ ಹೆಚ್ಚಾಗಿ ಬಳಸುತ್ತಾರೆ. ಈರುಳ್ಳಿ ಗಡ್ಡೆ ಮತ್ತು ಬೀಜಗಳು ಉಪಯುಕ್ತ ಅಂಶಗಳಾಗಿವೆ. ಈರುಳ್ಳಿಯ ರಸವನ್ನು ಮೂಗಿಗೆ ಬಿಡುವುದರಿಂದ ಮೂಗಿನಿಂದ ಬರುವ ರಕ್ತಸ್ರಾವವು ನಿವಾರಣೆಯಾಗುತ್ತದೆ. ಈರುಳ್ಳಿ ಸೇವನೆಯಿಂದ ರಕ್ತದ ಮೂಲವ್ಯಾಧಿಗೆ ಒಳ್ಳೆಯದು. ಈರುಳ್ಳಿಯ ರಸವನ್ನು ತಾಯಿಯ ಎದೆಹಾಲಿನಲ್ಲಿ ಬೆರೆಸಿ ಮೂಗಿಗೆ ಬಿಡುವುದರಿಂದ ಉಬ್ಬಸ, ಕೆಮ್ಮು ರೋಗವು ನಿವಾರಣೆಯಾಗುತ್ತದೆ. ಕಾಲಿನ ಹಿಮ್ಮಡಿಯ ಸೀಳಿದರೆ, ಹಸಿ ಈರುಳ್ಳಿಯನ್ನು ಸೀಳಿರುವ ಜಾಗಕ್ಕೆ ತಿಕ್ಕಬೇಕು. ಕಾಲರಾ ರೋಗದಿಂದ ಬಳಲುತ್ತಿರುವವರು ಈರುಳ್ಳಿ ರಸವನ್ನು ಗಂಟೆ ಗಂಟೆಗೆ ಸ್ವಲ್ಪ ಸ್ವಲ್ಪ ಕುಡಿಯಬೇಕು. ಹೀಗೆ ಮಾಡುವುದರಿಂದ ರೋಗವು ಬೇಗ ನಿವಾರಣೆಯಾಗಿ ಹೊಟ್ಟೆಯಲ್ಲಿರುವ ಹುಳಗಳು ಬೇಗ ಸಾಯುತ್ತದೆ.
ಈರುಳ್ಳಿಯನ್ನು ಚೇಳು ಕಚ್ಚಿದ ಸ್ಥಳಕ್ಕೆ ತಿಕ್ಕುವುದರಿಂದ ವಿಷ ಇಳಿಯುತ್ತದೆ. ಈರುಳ್ಳಿ ರಸ, ತುಪ್ಪ ಮತ್ತು ಸಕ್ಕರೆ ಬೆರೆಸಿ ಸೇವಿಸುವುದರಿಂದ ಮೂಲವ್ಯಾಧಿಯು ನಿವಾರಣೆಯಾಗುತ್ತದೆ. ಬಿಳಿ ಈರುಳ್ಳಿ ರಸ, ಬೆಲ್ಲ, ಅರಿಸಿನವನ್ನು ಬೆರೆಸಿ ಮೂಗಿಗೆ ನಶ್ಯದಂತೆ ಏರಿಸಿದರೆ ಕಾಮಾಲೆ ರೋಗದಿಂದ ಗುಣವನ್ನು ಕಾಣಬಹುದು. ಈರುಳ್ಳಿ ರಸವನ್ನು ಸ್ವಲ್ಪ ಕಾಯಿಸಿ, ಅದು ತಣ್ಣಗಾದ ಮೇಲೆ ಕಿವಿಗೆ ಬಿಡುವುದರಿಂದ ಕಿವಿನೋವು, ಕಿವಿಯಲ್ಲಿ ಶಬ್ದ, ಕಿವಿ ಸೋರುವುದು ಮುಂತಾದ ತೊಂದರೆಯಿಂದ ಮುಕ್ತಿ ದೊರಕುತ್ತದೆ. ಬಿಳಿ ಈರುಳ್ಳಿ ರಸವನ್ನು ಮೂಗಿಗೆ ಬಿಡುವುದರಿಂದ ಮತ್ತು ಕಣ್ಣಿಗೆ ಹಚ್ಚುವುದರಿಂದ ಮೂರ್ಛೆರೋಗವು ಗುಣವಾಗುತ್ತದೆ. ಈರುಳ್ಳಿ ರಸಕ್ಕೆ ಉಪ್ಪು, ಕರಿಮೆಣಸಿನ ಪುಡಿ, ನಿಂಬೆರಸ ಬೆರೆಸಿ ಸೇವಿಸುವುದರಿಂದ ವಿಟಮಿನ್ ಗಳು ದೇಹಕ್ಕೆ ದೊರಕುತ್ತದೆ.
ಈರುಳ್ಳಿರಸ ಅಥವಾ ಲೇಪವನ್ನು ಚರ್ಮಕ್ಕೆ ಹಚ್ಚುವುದರಿಂದ ಚರ್ಮರೋಗವು ನಿವಾರಣೆಯಾಗುತ್ತದೆ. ಈರುಳ್ಳಿರಸವನ್ನು ಅಂಜನ ಮಾಡಿ ಕಣ್ಣಿಗೆ ಹಚ್ಚುವುದರಿಂದ ದೃಷ್ಟಿಯ ಸಮಸ್ಯೆಗಳು ನಿವಾರಣೆಯಾಗುತ್ತದೆ. 2 ರಿಂದ 3 ಹನಿ ಈರುಳ್ಳಿ ರಸವನ್ನು ಜೇನಿನಲ್ಲಿ ಕಲಸಿ ಮಕ್ಕಳಿಗೆ ತಿನ್ನಿಸಿದರೆ ಮಕ್ಕಳ ಹೊಟ್ಟೆನೋವು ಗುಣವಾಗಿ ಹೊಟ್ಟೆಹುಳಗಳ ಸಮಸ್ಯೆ ಮಾಯವಾಗುತ್ತದೆ. ಪ್ರತಿನಿತ್ಯ ಹಸಿ ಈರುಳ್ಳಿಯನ್ನು ಸೇವಿಸಿದರೆ ಹೃದಯಕ್ಕೆ ಒಳ್ಳೆಯದು. ಸುಟ್ಟ ಈರುಳ್ಳಿ ಸೇವಿಸುವುದರಿಂದ ಅಜೀರ್ಣ ಸಮಸ್ಯೆ ಇಲ್ಲವಾಗುತ್ತದೆ.
ಇಷ್ಟೆಲ್ಲಾ ಉಪಯೋಗಗಳಿರುವ ಈರುಳ್ಳಿಯನ್ನು ಬರೀ ಬಾಯಿ ವಾಸನೆ ಬರುತ್ತದೆ ಎಂಬ ಕಾರಣಕ್ಕೆ ತಿನ್ನದೇ ಹೋದರೆ ನಷ್ಟ ನಿಮ್ಮ ಆರೋಗ್ಯಕ್ಕೆ.. ಹೀಗಾಗಿ ಈರುಳ್ಳಿ ಸೇವಿಸಿ, ಆರೋಗ್ಯ ಕಾಪಾಡಿಕೊಳ್ಳಿ.
ಮಾಹಿತಿ ಮತ್ತು ಲೇಖನ:- ಅಂಬಿಕಾ ಸೀತೂರು
ಶ್ರೀ ಅನ್ನಪೂರ್ಣೆಶ್ವರಿ ಜ್ಯೋತಿಷ್ಯ ಪೀಠಂ
ಶ್ರೀ ಮಹಾ ಕಾಲ ಭೈರವ
ದೈವಜ್ಞ ಪಂಡಿತ್ ಗಜೇಂದ್ರ ಅವಧಾನಿಗಳು
ವಿಳಾಸ – ಡಿವಿಜಿ ರೋಡ್, ಬಸವನಗುಡಿ ಬೆಂಗಳೂರು
ಸರ್ವ ಸಮಸ್ಯೆಗಳಿಗೆ ಗುರುಗಳನ್ನು ಒಮ್ಮೆ ಭೇಟಿ ಕೊಡಿ
ಸಂಪರ್ಕಿಸಿ – 9538175275