ಪಿಯುಸಿ ಪರೀಕ್ಷೆಯಲ್ಲಿ ಬದಲಾವಣೆ ಮಧ್ಯವಾರ್ಷಿಕಕ್ಕೆ ಪಬ್ಲಿಕ್ ಎಕ್ಸಾಮ್

1 min read
puc exam

ಪಿಯುಸಿ ಪರೀಕ್ಷೆಯಲ್ಲಿ ಬದಲಾವಣೆ ಮಧ್ಯವಾರ್ಷಿಕಕ್ಕೆ ಪಬ್ಲಿಕ್ ಎಕ್ಸಾಮ್

ಕರೋನ ಮುರನೆ ಅಲೆ ಭೀತಿಯ ಹಿನ್ನಲೆಯಲ್ಲಿ ಈ ಭಾರಿಯ ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ಭಾರಿ ಬದಲಾವಣೆ ತರಲು ಪಿಯು ಬೋರ್ಡ್ ನಿರ್ಧರಿಸಿದೆ. ಕಳೆದ ಎರಡು ವರ್ಷಗಳಲ್ಲಿ ಕರೋನಾ ಕಾರಣದಿಂದಾಗಿ ವಿದ್ಯಾರ್ಥಿಗಳಿ ಪರೀಕ್ಷೆ ಬರೆಯುವಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿತ್ತು.

ಈ ಕಾರಣದಿಂದಾಗಿ ಸಿಬಿಎಸ್ಇ ಮತ್ತು ಇಸಿಎಸ್ ಇ ರೀತಿಯಲ್ಲಿ ಪರೀಕ್ಷೆ ನಡೆಸಲು ಪಿಯು ಬೋರ್ಡ್ ಮುಂದಾಗಿದೆ. ವಾರ್ಷಿಕ ಪರೀಕ್ಷೆಯ ರೀತಿ ಮಧ್ಯವಾರ್ಷಿಕ ಪರೀಕ್ಷೆಯನ್ನು ಪಬ್ಲಿಕ್ ಪರೀಕ್ಷೆಯ ರೀತಿಯಲ್ಲಿ ನಡೆಸಲು ಬೋರ್ಡ್ ಮುಂದಾಗಿದೆ. ನವೆಂಬರ್ 29 ರಿಂದ ಡಿಸೆಂಬರ್ 10 ರ ವರೆಗೂ  ಮಧ್ಯವಾರ್ಷಿಕ ಪರೀಕ್ಷೆಗಳು ನಡೆಯಲಿವೆ.

ಮಧ್ಯವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಜಿಲ್ಲಾ ಮಟ್ಟದಲ್ಲಿ ತಯಾರಾಗುತ್ತಿದ್ದವು ಕಾಲೇಜು ಮಟ್ಟದಲ್ಲಿ ಮೌಲ್ಯಮಾಪನ ನಡೆಸಲಾಗುತ್ತಿತ್ತು. ಆದರೆ ಈ ಭಾರಿ ಪಿಯು ಬೋರ್ಡ್ ಮಧ್ಯವಾರ್ಷಿಕ ಪ್ರಶ್ನೆ ಪತ್ರಿಕೆಯನ್ನ ರಚಿಸಲಿದೆ. ಮತ್ತು ಕೇಂದ್ರೀಕೃತ ಮೌಲ್ಯಮಾಪನ ವ್ಯವಸ್ಥೆಯನ್ನ ಮಾಡಲಿದೆ.

ಕಳೆದ ಎರಡು ವರ್ಷಗಳಲ್ಲಿ ಪರೀಕ್ಷೆ ಮೌಲ್ಯಮಾಪನ ಮತ್ತು ಅಂಕಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಸಾಕಷ್ಟು ಗೊಂದಲಗಳು ಏರ್ಪಟ್ಟಿದ್ದವು. ಈ ಭಾರಿ ಅದಕ್ಕೆ ತೆರೆ ಎಳೆಯಲಿ ಪಿ ಯು ಬೋರ್ಡ್ ಮುಂಚಿತವಾಗಿಯೇ ಯೋಜನೆ ಹಾಕಿಕೊಳ್ಳುತ್ತಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd