ಫೋನ್ ಕಸಿದುಕೊಂಡಿದ್ದಕ್ಕೆ ಕೋಪಗೊಂಡ ಬಾಲಕನೊಬ್ಬ ಪೋಷಕರು ಹಾಗೂ ಅಕ್ಕನನ್ನು ಗುಂಡಿಕ್ಕಿ ಕೊಲೆ ಮಾಡಿ ವಾರಗಳ ಕಾಲ ಮೃತದೇಹಗಳ ಜತೆ ಇದ್ದ ಆಘಾತಕಾರಿ ಘಟನೆಯೊಂದು ನಡೆದಿದೆ.
ಆನಂತರ ಆತನೇ ಪೋಷಕರಿಗೆ ಕರೆ ಮಾಡಿ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ಅಕ್ಕ ಹಾಗೂ ಬಾಲಕ ಫೋನ್ ಗಾಗಿ ಕಿತ್ತಾಡಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ಬಾಲಕ ಪೋಷಕರು ಹಾಗೂ ಸಹೋದರಿಯನ್ನು ಹತ್ಯೆ ಮಾಡಿದ್ದಾನೆ. ಮುನ್ಸಿಪಲ್ ಪೊಲೀಸ್ ಆಗಿದ್ದ ತಂದೆಯ ಸರ್ವೀಸ್ ಗನ್ ಹಿಡಿದು ಮನಬಂದಂತೆ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.
ಹೊರಗೆ ಹೋಗಿದ್ದ ತಾಯಿ ಹಲವು ಗಂಟೆಗಳ ನಂತರ ಮನೆಗೆ ಬಂದಾಗ, ಅವರ ಮೇಲೆಯೂ ಗುಂಡಿನಿಂದ ದಾಳಿ ನಡೆಸಿದ್ದಾನೆ. ತಾಯಿಯ ಶವವನ್ನು ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.