ಚಿಕ್ಕಮಗಳೂರು: ಮಧುಮಗಳೊಬ್ಬರು ಅಲಂಕಾರ ಮಾಡಿಕೊಂಡೇ ಬೂತ್ ಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಸುಮಿಕ್ಷಾ ಹೀಗೆ ಮತದಾನ ಮಾಡಿದ ವಧು. ಸುಮಿಕ್ಷಾಗೆ ಇದು ಮೊದಲ ಮತದಾನ. ಅವರು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸುವ ಸಂತಸದಲ್ಲಿದ್ದರು. ಆದರೆ, ಅವರಿಗೆ ಇಂದೇ ಮದುವೆ ನಿಶ್ಚಯವಾಗಿದೆ. ಆದರೂ ಮತದಾನ ಮರೆಯದ ಅವರು, ಅಲಂಕಾರಗೊಂಡಿದ್ದರೂ ಬೂತ್ ಗೆ ಆಗಮಿಸಿ ಮತದಾನ ಮಾಡಿದ್ದಾರೆ.
ಮದುಮಗಳಾಗಿ (Bride) ಅಲಂಕಾರಗೊಂಡು ಯುವತಿ ತನ್ನ ಬೂತ್ನಲ್ಲಿ ಮೊದಲ ಮತದಾನ (Voting) ಮಾಡಿರುವ ವಿಡಿಯೋ ವೈರಲ್ ಆಗಿದೆ. ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ (Mudigere) ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ.
ಕುಂದೂರು ಸಮೀಪದ ತಳವಾರ ಗ್ರಾಮದ ಸುಮಿಕ್ಷಾ ಎಂಬ ಯುವತಿಯ ಮದುವೆ (Marriage) ಕೊಪ್ಪ ಮೂಲದ ಸಂಜಯ್ ಎಂಬ ವ್ಯಕ್ತಿಯೊಂದಿಗೆ ವಿವಾಹ ನಿಶ್ಚಯವಾಗಿತ್ತು. ಮದುವೆ ನಿಗದಿಯಾಗಿದ್ದ ಕಾರಣ ಮದುವೆ ಮಂಟಪಕ್ಕೆ ತೆರಳುವ ಮುನ್ನ ಮದುಮಗಳಾಗಿ ಅಲಂಕಾರಗೊಂಡ ಯುವತಿ ಮೊದಲ ಮತದಾನ ಮಾಡಿದ್ದಾರೆ.
ಯುವತಿ ಕುಂದೂರು ಗ್ರಾಮದಲ್ಲಿ ಮತದಾನ ಮಾಡಿದ್ದಾರೆ. ದೇಶದ ಭದ್ರತೆಗಾಗಿ ಮತದಾನ ಮಾಡುವುದು ಅತ್ಯಂತ ಮುಖ್ಯ. ಸುಭದ್ರತೆಯ ಸರ್ಕಾರ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಹೇಳಿದ್ದಾರೆ. ಅಲ್ಲದೇ, ಈ ವೇಳೆ ಯುವತಿಯ 11 ಜನ ಕುಟುಂಬಸ್ಥರು ಕೂಡ ಮತದಾನ ಮಾಡಿದ್ದಾರೆ.