ನಟಿ ಕಂಗನಾ ಜೀವಕ್ಕಿದ್ಯಾ ಕುತ್ತು: ಕಂಗನಾ ಮನೆ ಆವರಣದಲ್ಲಿ ಮೊಳಗಿದ ಗುಂಡಿನ ಸದ್ದು..!

ಸುಶಾಂತ್ ಸಾವಿನ ಬಳಿಕ ಹಲವರ ವಿರುದ್ಧ ಗಂಭೀರವಾಗಿ ಆರೋಪ ಮಾಡುತ್ತಲೇ ಸುದ್ದಿಯಲ್ಲಿರುವ ಕಂಗನಾ ರಣಾವತ್ ನಿವಾಸದ ಬಳಿ ಗುಂಡಿನ ಸದ್ದು ಕೇಳಿಬಂದಿದೆ. ಮನಾಲಿಯ ನಿವಾಸದ ಬಳಿ ಗುಂಡಿನ ಸದ್ದು ಕೇಳಿಬಂದಿದ್ದು ಈ ಬಗ್ಗೆ ಕಂಗನಾ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಅಲ್ದೇ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನಿಡಿರುವ ಕಂಗನಾ ಶುಕ್ರವಾರ ತಡರಾತ್ರಿ 11.30ರ ಸಮಯಕ್ಕೆ ಮನಯ ಆವರಣದಲ್ಲಿ ಗುಂಡಿನ ಸದ್ದು ಕೇಳಿಬಂದಿರುವುದಾಗಿ ತಿಳಿಸಿದ್ದಾರೆ. ಅಲ್ದೇ ಇತ್ತೀಚೆಗೆ ನಾನು ರಾಜಕೀಯವಾಗಿ ಹಾಗೂ ದೊಡ್ಡ ದೊಡ್ಡ ಕುಳಗಳ ವಿರುದ್ಧವೂ ಹೇಳಿಕೆಗಳನ್ನು ನೀಡ್ತಿದ್ದು, ಯಾರೋ ನನಗೆ ವಾರ್ನಿಂಗ್ ಕೊಡಲೆಂದೇ ಈ ರೀತಿ ಮಾಡಿದ್ದಾರೆ. ಆದ್ರೆ ನಾನು ಇದಕ್ಕೆಲ್ಲ ತಲೆ ಕೆಡಿಸಿಕೊಮಡು ಸುಮ್ಮನೆ ಕೂರುವುದಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲ ಕಂಗನಾ ಟೀಂ ಬೇರೆಯದ್ದೇ ರೀತಿಯಾದ ಚರ್ಚೆಗಳಲ್ಲಿ ತೊಡಗಿದೆ. ಇತ್ತೀಚೆಗೆ ಆದಿತ್ಯ ಠಾಕ್ರೆ ಅವರ ಬಗ್ಗೆಯೂ ಕಂಗನಾ ಮಾತನಾಡಿದ್ದು, ಆ ಕಾರಣದಿಂದಲೇ ದಾಳಿ ಯತ್ನ ನಡೆದಿದೆ ಎಂದು ಆರೋಪಗಳನ್ನು ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This