ಬೆಂಗಳೂರು: ಚಾಲಕನೊಬ್ಬ ಕಾರಿನಿಂದ ಸ್ವಲ್ಪ ದೂರದವರೆಗೆ ನೂಕಿಕೊಂಡು ಹೋಗಿದ್ದ ಭಯಾನಕ ಘಟನೆ ನಡೆದಿದೆ.
ಈ ಘಟನೆ ಹೆಬ್ಬಾಳ (Hebbal) ಫ್ಲೈ ಓವರ್ ಮೇಲೆ ನಡೆದಿದೆ. ಇಟಿಯಾಸ್ ವಾಹನವನ್ನು ನಿಲ್ಲಿಸಲಾಗಿತ್ತು. ಇಟಿಯಾಸ್ ವಾಹನದ ಚಾಲಕ ಇದೇ ಫ್ಲೈ ಓವರ್ ಮೇಲೆ ಬರುತ್ತಿದ್ದ ಇನ್ನೋವಾ ಕಾರಿಗೆ ಅಡ್ಡ ತೆರಳಿದ್ದಾನೆ. ಈ ಸಂದರ್ಭದಲ್ಲಿ ಚಾಲಕ ಕಾರು ನಿಲ್ಲಿಸಿದ್ದಾನೆ. ಆದರೂ ಇಟಿಯಾಸ್ ವಾಹನ ಚಾಲಕ ಪಕ್ಕಕ್ಕೆ ಹೋಗಿಲ್ಲ. ಆಗ ಚಾಲಕ ಇನ್ನೋವಾ ಕಾರಿನಿಂದ, ಇಟಿಯಾಸ್ ಚಾಲಕನನ್ನು ಸ್ವಲ್ಪ ದೂರದವರೆಗೆ ನೂಕಿಕೊಂಡು ಹೋಗಿದ್ದಾನೆ ಎನ್ನಲಾಗಿದೆ.
ಆಗ ಕಾರು ನಿಲ್ಲಿಸಿ ಇಟಿಯಾಸ್ ವಾಹನ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ಈ ದೃಶ್ಯಾವಳಿಗಳು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.