ADVERTISEMENT
Saturday, October 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports CPL 2020

ಕೆರೆಬಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಅಂಕಿ ಅಂಶಗಳು ಏನು ಹೇಳ್ತಾವೆ..?

admin by admin
August 10, 2020
in CPL 2020, Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಕೆರೆಬಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಅಂಕಿ ಅಂಶಗಳು ಏನು ಹೇಳ್ತಾವೆ..?

ಕೆರೆಬಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ. ವೆಸ್ಟ್ ಕ್ರಿಕೆಟ್‍ನ ಪ್ರತಿಷ್ಠಿತ ದೇಸಿ ಟೂರ್ನಿ. ಐಪಿಎಲ್ ಟೂರ್ನಿಯಂತೆ ನಡೆಯುವ ಸಿಪಿಎಲ್ ಕ್ರಿಕೆಟ್ ಟೂರ್ನಿ ವಿಶ್ವ ಕ್ರಿಕೆಟ್ ನಲ್ಲಿ ತನ್ನದೇ ಆದ ಸ್ಥಾನಮಾನ ಪಡೆದುಕೊಂಡಿದೆ. ಆದ್ರೆ ಈ ಸಿಪಿಎಲ್ ಟೂರ್ನಿಯಲ್ಲಿ ಭಾರತೀಯ ಆಟಗಾರರು ಭಾಗವಹಿಸುತ್ತಿಲ್ಲ.
2013ರಿಂದ ಆರಂಭವಾಗಿರುವ ಸಿಪಿಎಲ್ ಟೂರ್ನಿಯಲ್ಲಿ ಒಟ್ಟು ಏಳು ತಂಡಗಳಿದ್ದವು. ಆದ್ರೆ ಈಗ ಆರು ತಂಡಗಳು ಭಾಗವಹಿಸುತ್ತಿವೆ. ಆಂಟಿಗುವಾ ಹಾಕ್ವಾಸ್‍ಬಿಲ್ಸ್ ತಂಡ ಟೂರ್ನಿಯಲ್ಲಿ ಆಡುತ್ತಿಲ್ಲ. ಕೋವಿಡ್-19ನಿಂದಾಗಿ ಈ ಬಾರಿ ದಕ್ಷಿಣ ಆಫ್ರಿಕಾ ಸೇರಿದಂತೆ ವಿವಿಧ ದೇಶಗಳ ಆಟಗಾರರು ಭಾಗವಹಿಸುತ್ತಿಲ್ಲ. ಈ ಬಾರಿಯ ಟೂರ್ನಿ ಆಗಸ್ಟ್ 18ರಿಂದ ಸೆಪ್ಟಂಬರ್ 10ರವರೆಗೆ ನಡೆಯಲಿದೆ.
ಇದೀಗ ಎಂಟನೇ ಆವೃತ್ತಿಯ ಟೂರ್ನಿ ನಡೆಯುತ್ತಿದೆ. ಈ ಹಿಂದಿನ ಏಳು ಆವೃತ್ತಿಗಳಲ್ಲಿ ಮೂರು ತಂಡಗಳು ತಲಾ ಎರಡು ಬಾರಿ ಚಾಂಪಿಯನ್‍ಪಟ್ಟಕ್ಕೇರಿವೆ. ಒಂದು ತಂಡ ಒಂದು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ.
2013ರ ಸಿಪಿಎಲ್ ನಲ್ಲಿ ಜಮೈಕಾ ತಲ್ಲಾವಾಹ್ಸ್ ತಂಡ ಪ್ರಶಸ್ತಿ ಗೆದ್ದುಕೊಂಡಿದೆ. ಫೈನಲ್ ನಲ್ಲಿ ಗಯಾನಾ ಅಮೇಜಾನ್ ವಾರಿಯರ್ಸ್ ತಂಡವನ್ನು ಸೋಲು ವಿಕೆಟ್‍ಗಳಿಂದ ಪರಾಭವಗೊಳಿಸಿತ್ತು.
2014ರ ಸಿಪಿಎಲ್ ನಲ್ಲಿ ಬಾರ್ಬಡೋಸ್ ಟ್ರಿಡೆಂಟ್ಸ್ ತಂಡ ಪ್ರಶಸ್ತಿ ಗೆದ್ದುಕೊಂಡಿತ್ತು. ಫೈನಲ್ ನಲ್ಲಿ ಟ್ರಿಡೆಂಟ್ಸ್ ತಂಡ ಎಂಟು ರನ್ ಗಳಿಂದ ಗಯಾನ ಅಮೇಜಾನ್ ವಾರಿಯರ್ಸ್ ತಂಡವನ್ನು ಸೋಲಿಸಿತ್ತು.
2015ರ ಸಿಪಿಎಲ್ ನಲ್ಲಿ ಟ್ರಿನಿಡಾಡ್ ಟೊಬಾಗೊ ರೆಡ್ ಸ್ಟೀಲ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿತ್ತು. ಫೈನಲ್ ನಲ್ಲಿ ಟ್ರಿನಿಡಾಡ್ ತಂಡ 9 ವಿಕೆಟ್‍ಗಳಿಂದ ಸೇಂಟ್ ಕಿಟ್ಸ್ ನೇವಿಸ್ ಪೆಟ್ರಿಯೋಟ್ಸ್ ತಂಡವನ್ನು ಮಣಿಸಿತ್ತು.
2016ರ ಸಿಪಿಎಲ್ ನಲ್ಲಿ ಜಮೈಕಾ ತಲ್ಲಾವಾಹ್ಸ್ ತಂಡ ಎರಡನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತ್ತು. ಫೈನಲ್ ನಲ್ಲಿ ಜಮೈಕಾ 9 ವಿಕೆಟ್ ಗಳಿಂದ ಸೇಂಟ್ ಕಿಟ್ಸ್ ನೇವಿಸ್ ಪೆಟ್ರಿಯೋಟ್ಸ್ ತಂಡವನ್ನು ಸೋಲಿಸಿತ್ತು.
ಇನ್ನು 2017 ಮತ್ತು 2018ರ ಸಿಪಿಎಲ್ ನಲ್ಲಿ ಟ್ರಿನ್‍ಬಾಗೊ ನೈಟ್ ರೈಡರ್ಸ್ ತಂಡ ಸತತ ಎರಡು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. 2017ರ ಫೈನಲ್ ನಲ್ಲಿ ನೈಟ್ ರೈಡರ್ಸ್ ತಂಡ ಮೂರು ವಿಕೆಟ್ ಗಳಿಂದ ಗಯಾನ ಅಮೇಜಾನ್ ವಾರಿಯರ್ಸ್ ತಂಡವನ್ನು ಮಣಿಸಿದ್ರೆ, 2018ರ ಫೈನಲ್ ನಲ್ಲಿ ನೈಟ್ ರೈಡರ್ಸ್ ತಂಡ ಗಯಾನ ಅಮೇಜಾನ್ ವಾರಿಯರ್ಸ್ ತಂಡವನ್ನು ಎಂಟು ವಿಕೆಟ್‍ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು.
2019ರ ಸಿಪಿಎಲ್ ಫೈನಲ್ ನಲ್ಲಿ ಬಾರ್ಬಡೋಸ್ ಟ್ರಿಡೆಂಟ್ಸ್ ತಂಡ ಎರಡನೇ ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. ಫೈನಲ್ ನಲ್ಲಿ ಗಯಾನ ಅಮೇಜಾನ್ ವಾರಿಯರ್ಸ್ ತಂಡವನ್ನು 27 ರನ್‍ಗಳಿಂದ ಮಣಿಸಿತು.
ಒಟ್ಟಾರೆ, ಬಾರ್ಬಡೋಸ್ ಟ್ರಿಡೆಂಟ್ಸ್ ತಂಡ ಎರಡು ಬಾರಿ, ಟ್ರಿನ್ ಬಾಗೋ ನೈಟ್ ರೈಡರ್ಸ್ ಎರಡು ಬಾರಿ ಹಾಗೂ ಜಮೈಕಾ ತಲ್ಲಾವಾಹ್ಸ್ ತಂಡ ಎರಡು ಬಾರಿ ಪ್ರಶಸ್ತಿ ಗೆದ್ರೆ, ಟ್ರಿನಿಡಾಡ್ ಟೊಬಾಗೊ ರೆಡ್ ಸ್ಟೀಲ್ ತಂಡ ಒಂದು ಬಾರಿ ಪ್ರಶಸ್ತಿ ಗೆದ್ದಿದೆ.
ಇನ್ನು ಟೂರ್ನಿಯಲ್ಲಿ ಐದು ಬಾರಿ ಫೈನಲ್ ಪ್ರವೇಶ ಮಾಡಿರುವ ಗಯಾನ ಅಮೇಜಾನ್ ವಾರಿಯರ್ಸ್ ತಂಡಕ್ಕೆ ಇಲ್ಲಿಯವರೆಗೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಐದು ಬಾರಿ ರನ್ನರ್ ಅಪ್‍ಗೆ ಸಮಾಧಾನಪಟ್ಟುಕೊಂಡಿರುವ ಗಯಾನ ಅಮೇಜಾನ್ ವಾರಿಯರ್ಸ್ ಸಿಪಿಎಲ್‍ನ ನತದೃಷ್ಟ ತಂಡವಾಗಿದೆ.

Related posts

‘ಪ್ರೇಮದ ಊರಲಿ’ ಬ್ಲಾಕ್‌ಬಸ್ಟರ್ ಓಟಕ್ಕೆ ‘ರಾಕಿಂಗ್ ಸ್ಟಾರ್’ ಫಿದಾ: ಚಿತ್ರತಂಡವನ್ನು ಖುದ್ದಾಗಿ ಭೇಟಿಯಾಗಿ ಅಭಿನಂದಿಸಿದ ಯಶ್!

October 16, 2026
saakshatv-r-ashoka-congress-government-disability-pension-salary-hike-demand

ವಿಕಲಚೇತನರ ಹಣಕ್ಕೆ ಕೈ ಹಾಕಿದ ಕಾಂಗ್ರೆಸ್‌ ಸರ್ಕಾರ, ವೇತನ ಹೆಚ್ಚಳ ಮಾಡಬೇಕು, ಪಿಂಚಣಿ ನೀಡಬೇಕು: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

October 16, 2026
Tags: #cpl 2015#cpl 2016#cpl 2017#cpl 2018#cpl 2019#cpl-2103#cpl2014#St Kitts & Nevis PatriotsBarbados Tridents.Caribbean Premier LeagueCPL 2020Guyana Amazon WarriorsJamaica TallawahsSt Lucia ZouksTrinbago Knight Riders
ShareTweetSendShare
Join us on:

Related Posts

‘ಪ್ರೇಮದ ಊರಲಿ’ ಬ್ಲಾಕ್‌ಬಸ್ಟರ್ ಓಟಕ್ಕೆ ‘ರಾಕಿಂಗ್ ಸ್ಟಾರ್’ ಫಿದಾ: ಚಿತ್ರತಂಡವನ್ನು ಖುದ್ದಾಗಿ ಭೇಟಿಯಾಗಿ ಅಭಿನಂದಿಸಿದ ಯಶ್!

by admin
October 16, 2026
0

​ ಬೆಂಗಳೂರು : ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಸಂಚಲನ ಮೂಡಿಸಿರುವ ‘ಪ್ರೇಮದ ಊರಲಿ’ ಚಿತ್ರದ ಅಭೂತಪೂರ್ವ ಯಶಸ್ಸಿಗೆ ರಾಕಿಂಗ್ ಸ್ಟಾರ್ ಯಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್‌ನಲ್ಲಿ...

saakshatv-r-ashoka-congress-government-disability-pension-salary-hike-demand

ವಿಕಲಚೇತನರ ಹಣಕ್ಕೆ ಕೈ ಹಾಕಿದ ಕಾಂಗ್ರೆಸ್‌ ಸರ್ಕಾರ, ವೇತನ ಹೆಚ್ಚಳ ಮಾಡಬೇಕು, ಪಿಂಚಣಿ ನೀಡಬೇಕು: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

by admin
October 16, 2026
0

ರಾಮನಗರ, ಗ್ಯಾರಂಟಿಗಳಿಗಾಗಿ ಎಲ್ಲ ಸೌಲಭ್ಯಗಳನ್ನು ಕಡಿತ ಮಾಡಿರುವ ಕಾಂಗ್ರೆಸ್‌ ಸರ್ಕಾರ, ಈಗ ಅಂಗವಿಕಲರ ಪಿಂಚಣಿ ಹಣಕ್ಕೂ ಕೈ ಹಾಕಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು....

saakshatv-instamart-qim-sale-2026-beauty-products-festival-discounts

ಇನ್‌ಸ್ಟಾಮಾರ್ಟ್ QIM ಸೇಲ್ 2026: ಹಬ್ಬದ ಸೀಸನ್‌ಗೆ ಬ್ಯೂಟಿ ಪ್ರಾಡಕ್ಟ್‌ಗಳ ಮೇಲೆ ಬಂಪರ್‌ ರಿಯಾಯಿತಿ

by admin
October 16, 2026
0

ಬೆಂಗಳೂರು: ದಸರಾ ಸಂಭ್ರಮ, ದೀಪಾವಳಿ ಪಾರ್ಟಿ, ಹಬ್ಬದ ಭೋಜನ ಹಾಗೂ ಸಂಭ್ರಮಕ್ಕೆ ತಯಾರಾಗಲು ಇನ್‌ಸ್ಟಾಮಾರ್ಟ್ ತನ್ನ 'ಕ್ವಿಕ್ ಇಂಡಿಯಾ ಮೂವ್ಮೆಂಟ್' (ಕ್ಯೂಐಎಂ) ಸೇಲ್ 2026 ಅನ್ನು ಆರಂಭಿಸಿದೆ....

ಜಿಯೋ ಐಪಿಒ ಬಗ್ಗೆ ವಿಶ್ಲೇಷಕರು ಪಾಸಿಟಿವ್; ಲಿಸ್ಟಿಂಗ್‌ನಲ್ಲಿ ಶೇ 15-20ರಷ್ಟು ಲಾಭದ ನಿರೀಕ್ಷೆ

by admin
October 16, 2026
0

ಮುಂಬೈ,: ಜಿಯೋ ಪ್ಲಾಟ್‌ಫಾರ್ಮ್ಸ್‌ನ ಪ್ರೈಸ್ ಬ್ಯಾಂಡ್ (ಬೆಲೆ ಶ್ರೇಣಿ) ಪ್ರಕಟವಾದ ನಂತರ ವಿಶ್ಲೇಷಕರ ಅಭಿಪ್ರಾಯಗಳು ಬಹುತೇಕ ಉತ್ಸಾಹದಿಂದ ಕೂಡಿದೆ. ಹಲವು ವರದಿಗಳು ಐಪಿಒಗೆ ಧನಾತ್ಮಕ ಮೌಲ್ಯಮಾಪನ ನೀಡಿವೆ....

saakshatv-bengaluru-vancouver-airports-sister-airport-agreement-direct-flights

ಕೆನಡಾದ ವ್ಯಾಂಕೋವರ್ – ಬೆಂಗಳೂರು ಏರ್‌ಪೋರ್ಟ್‌ಗಳ ನಡುವೆ ಐತಿಹಾಸಿಕ ಒಪ್ಪಂದ, ನೇರ ವಿಮಾನ ಸೇವೆಗೆ ಭದ್ರ ಬುನಾದಿ!

by admin
October 16, 2026
0

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬಿಎಲ್‌ಆರ್‌) ಮತ್ತು ಕೆನಡಾದ ವ್ಯಾಂಕೋವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ವೈವಿಆರ್‌) ನಡುವೆ ಐತಿಹಾಸಿಕ 'ಸಿಸ್ಟರ್ ಏರ್‌ಪೋರ್ಟ್' ಒಪ್ಪಂದಕ್ಕೆ ಸಹಿ ಹಾಕಲಾಗಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram