ಅಕ್ಟೋಬರ್ 1 ರಿಂದ ಬದಲಾಗಲಿದೆ ಕೇಂದ್ರ ಸರಕಾರದ ನಿಯಮಗಳು – ಇಲ್ಲಿದೆ ಹೊಸ ನಿಯಮಗಳ ಒಂದಿಷ್ಟು ಮಾಹಿತಿ
ಹೊಸದಿಲ್ಲಿ, ಸೆಪ್ಟೆಂಬರ್28: ಅಕ್ಟೋಬರ್ 1ರಿಂದ ನಮ್ಮ ದಿನನಿತ್ಯದ ಜೀವನಕ್ಕೆ ಸಂಬಂಧಿಸಿದ ಅನೇಕ ನಿಯಮಗಳಲ್ಲಿ ಬದಲಾವಣೆಗಳಾಗಲಿದೆ. ಈ ನಿಯಮಗಳು ನಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲಿರುವುದರಿಂದ, ಈ ಬದಲಾವಣೆಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯ.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇತ್ತೀಚೆಗೆ ದೇಶದಲ್ಲಿ ವಾಹನ ನೋಂದಣಿ ಕಾರ್ಡ್‌ಗಳು (ಆರ್‌ಸಿ) ಮತ್ತು ಚಾಲನಾ ಪರವಾನಗಿ (ಡಿಎಲ್) ನೀಡುವಲ್ಲಿ ಬದಲಾವಣೆ ತಂದಿದೆ. ಹಾಗಾಗಿ ನಿಮ್ಮ ಚಾಲನಾ ಪರವಾನಗಿಗಳನ್ನು ನೀವು ನವೀಕರಿಸಬೇಕಾದ ಸಾಧ್ಯತೆಯಿದೆ.
ಅಲ್ಲದೆ, ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ಖರೀದಿಸಲು ಮಾಡಿದ ಕ್ರೆಡಿಟ್ ಕಾರ್ಡ್ ಪಾವತಿಗಳಿಗೆ ಅಕ್ಟೋಬರ್ 1 ರಿಂದ ಯಾವುದೇ ರಿಯಾಯಿತಿ ದೊರೆಯುವುದಿಲ್ಲ. ದೊಡ್ಡ ಉದ್ಯಮಗಳಿಗೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಹಿಂದೆ ಘೋಷಿಸಿದ ಕಾರ್ಪೊರೇಟ್ ತೆರಿಗೆ ಕಡಿತವು ಅಕ್ಟೋಬರ್‌ನಿಂದ ಜಾರಿಗೆ ಬರಲಿದೆ.
1.ಡಿಎಲ್ ಮತ್ತು ಆರ್ ಸಿ ನಿಯಮಗಳಲ್ಲಿ ನವೀಕರಣ
ಅಕ್ಟೋಬರ್ 1 ರಿಂದ ಭಾರತದಾದ್ಯಂತ ಏಕರೂಪದ ವಾಹನ ನೋಂದಣಿ ಕಾರ್ಡ್‌ಗಳು (ಆರ್‌ಸಿಗಳು) ಮತ್ತು ಚಾಲನಾ ಪರವಾನಗಿಗಳನ್ನು (ಡಿಎಲ್‌ಗಳು) ನೀಡಲಾಗುವುದು. ಹೊಸ ಚಾಲನಾ ಪರವಾನಗಿಯು ಕ್ವಿಕ್ ರೆಸ್ಪಾನ್ಸ್ (ಕ್ಯೂಆರ್) ಕೋಡ್ ಮತ್ತು ನಿಯರ್ ಫೀಲ್ಡ್ ಕಮ್ಯುನಿಕೇಷನ್ (ಎನ್‌ಎಫ್‌ಸಿ) ನಂತಹ ವೈಶಿಷ್ಟ್ಯಗಳೊಂದಿಗೆ ಸುಧಾರಿತ ಮೈಕ್ರೋಚಿಪ್ ಅನ್ನು ಹೊಂದಿರುತ್ತದೆ.
ಈ ಬದಲಾವಣೆಗಳು ಕೇಂದ್ರೀಕೃತ ಆನ್‌ಲೈನ್ ಡೇಟಾಬೇಸ್‌ನಲ್ಲಿ ಡಿಎಲ್ ಹೊಂದಿರುವವರ ದಾಖಲೆಗಳು ಮತ್ತು ದಂಡವನ್ನು 10 ವರ್ಷಗಳವರೆಗೆ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೊಸ ಡಿಎಲ್ ವಿಭಿನ್ನ ಸಾಮರ್ಥ್ಯದ ಚಾಲಕರ ದಾಖಲೆಗಳು, ವಾಹನಗಳಲ್ಲಿ ಮಾಡಿದ ಬದಲಾವಣೆಗಳು ಮತ್ತು ಅಂಗಾಂಗಗಳನ್ನು ದಾನ ಮಾಡುವ ವ್ಯಕ್ತಿಯ ಘೋಷಣೆಯನ್ನು ನಿರ್ವಹಿಸಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ.
ಆರ್‌ಸಿಗಳಂತೆ, ಅಕ್ಟೋಬರ್ 1 ರಿಂದ ಈ ಪ್ರಕ್ರಿಯೆಯನ್ನು ಕಾಗದರಹಿತವಾಗಿ ಮಾಡಲು ಸರ್ಕಾರ ನಿರ್ಧರಿಸಿದೆ. ಹೊಸ ಆರ್‌ಸಿ ಮಾಲೀಕರ ಹೆಸರನ್ನು ಮುಂಭಾಗದಲ್ಲಿ ಮುದ್ರಿಸಿದರೆ ಮೈಕ್ರೊಚಿಪ್ ಮತ್ತು ಕ್ಯೂಆರ್ ಕೋಡ್ ಅನ್ನು ಕಾರ್ಡ್‌ನ ಹಿಂಭಾಗದಲ್ಲಿ ಹುದುಗಿಸಲಾಗುತ್ತದೆ.
2. ಪೆಟ್ರೋಲ್ ಪಂಪ್‌ಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ರಿಯಾಯಿತಿಯ ಅಂತ್ಯ
ಅಕ್ಟೋಬರ್ 1 ರಿಂದ ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ಖರೀದಿಸಲು ಮಾಡಿದ ಕ್ರೆಡಿಟ್ ಕಾರ್ಡ್ ಪಾವತಿಗಳಿಗೆ ಯಾವುದೇ ರಿಯಾಯಿತಿ ನೀಡಲಾಗುವುದಿಲ್ಲ. ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ತೈಲ ಕಂಪನಿಗಳು ಕ್ರೆಡಿಟ್ / ಡೆಬಿಟ್ ಕಾರ್ಡ್‌ಗಳು ಮತ್ತು ಇ-ವ್ಯಾಲೆಟ್‌ಗಳನ್ನು ಬಳಸಿಕೊಂಡು ಈ ರಿಯಾಯಿತಿಗಳನ್ನು ಪರಿಚಯಿಸಿದ್ದವು. ಒಳ್ಳೆಯ ಸುದ್ದಿ ಎಂದರೆ ಡೆಬಿಟ್ ಕಾರ್ಡ್‌ಗಳ ಮೇಲಿನ ರಿಯಾಯಿತಿಗಳು ಮತ್ತು ಡಿಜಿಟಲ್ ಪಾವತಿಗಳ ಇತರ ವಿಧಾನಗಳು ಸದ್ಯಕ್ಕೆ ಮುಂದುವರಿಯುತ್ತದೆ.
3. ಮನೆ, ಕಾರು ಮತ್ತು ವೈಯಕ್ತಿಕ ಸಾಲಗಳ ದರ ಕಡಿಮೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತಮ್ಮ ಚಿಲ್ಲರೆ ಮತ್ತು ಎಂಎಸ್‌ಎಂಇ ಸಾಲಗಳನ್ನು ಬಾಹ್ಯ ಬಡ್ಡಿದರದ ಮಾನದಂಡಗಳೊಂದಿಗೆ ಜೋಡಿಸುವುದನ್ನು ಕಡ್ಡಾಯಗೊಳಿಸಿದೆ. ಇದಿ ಪ್ರಾರಂಭಿಸುವುದರಿಂದ ಮನೆ, ಕಾರು ಮತ್ತು ವೈಯಕ್ತಿಕ ಸಾಲಗಳ ದರಗಳು ಕಡಿಮೆಯಾಗುತ್ತವೆ.
4. ಖಾತೆಯಲ್ಲಿ ಸರಾಸರಿ ಮಾಸಿಕ ಬ್ಯಾಲೆನ್ಸ್ ಮತ್ತು ಕಡಿಮೆ ಇದ್ದರೆ ವಿಧಿಸುವ ದಂಡವನ್ನು ಕಡಿಮೆ ಮಾಡಲು ಎಸ್‌ಬಿಐ ನಿರ್ಧಾರ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಲ್ಲಿ ಸರಾಸರಿ ಮಾಸಿಕ ಬ್ಯಾಲೆನ್ಸ್ ಮತ್ತು ಅದನ್ನು ಉಳಿಸಿಕೊಳ್ಳಲು ವಿಫಲವಾದರೆ ವಿಧಿಸುತ್ತಿದ್ದ ಶುಲ್ಕವನ್ನು ಕಡಿಮೆ ಮಾಡಲು ಸಜ್ಜಾಗಿದೆ. ಮೆಟ್ರೋ ಮತ್ತು ನಗರ ಕೇಂದ್ರದಲ್ಲಿ ಖಾತೆಯಲ್ಲಿನ ಮಾಸಿಕ ಬ್ಯಾಲೆನ್ಸ್ , ಎಎಂಬಿ 3,000 ರೂ. ಮತ್ತು ಗ್ರಾಮೀಣ ಶಾಖೆಗಳಿಗೆ ಇದು 1000 ರೂ. ಆಗಿರುತ್ತದೆ. ಈ ಮೊತ್ತವನ್ನು ನಿರ್ವಹಿಸಲು ವಿಫಲವಾದ ಶುಲ್ಕವನ್ನು ಸಹ ಕಡಿಮೆಗೊಳಿಸಲಾಗುತ್ತದೆ. ಗ್ರಾಹಕರು ಮೆಟ್ರೊ ಮತ್ತು ನಗರ ಕೇಂದ್ರ ಶಾಖೆಗಳಲ್ಲಿ ಎಎಮ್‌ಬಿಯಾಗಿ 3,000 ರೂಗಳನ್ನು ನಿರ್ವಹಿಸಲು ವಿಫಲವಾದರೆ ಮತ್ತು ಶೇಕಡಾ 50 ರಷ್ಟು ಕಡಿಮೆಯಾದರೆ, ವ್ಯಕ್ತಿಗೆ 10 ರೂ ಮತ್ತು ಜಿಎಸ್‌ಟಿ ವಿಧಿಸಲಾಗುತ್ತದೆ. ಖಾತೆಯಲ್ಲಿ ಶೇಕಡಾ 50-75 ಕ್ಕಿಂತ ಕಡಿಮೆಯಾದರೆ, ಬಳಕೆದಾರರು 12 ರೂ.ಗಳ ದಂಡ ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ. ಖಾತೆಯಲ್ಲಿ ಶೇಕಡಾ 75 ಕ್ಕಿಂತ ಹೆಚ್ಚು ಕಡಿಮೆಯಾದರೆ, ಅದು 15 ರೂ.ಗಳ ದಂಡ ಮತ್ತು ಜಿಎಸ್‌ಟಿಯನ್ನು ವಿಧಿಸಲಾಗುತ್ತದೆ.
5. ಕಾರ್ಪೊರೇಟ್ ತೆರಿಗೆ ಕಡಿತವನ್ನು ಜಾರಿಗೆ ತರಬೇಕು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ ಕಾರ್ಪೊರೇಟ್ ತೆರಿಗೆ ಕಡಿತ ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ.








