ಕಾಂಗ್ರೆಸ್ Congress ನಡೆಸುತ್ತಿರುವ ಪಾದಯಾತ್ರೆ ಶುದ್ಧ ರಾಜಕೀಯ : ಬಿಜೆಪಿ
ಬೆಂಗಳೂರು : ಮೇಕೆದಾಟು ಯೋಜನೆಗೆ ಉದ್ದೇಶಿಸಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಪಾದಯಾತ್ರೆ ಶುದ್ಧ ರಾಜಕೀಯ ಎಂದು ರಾಜ್ಯ ಬಿಜೆಪಿ ಘಟಕ ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಮೇಕೆದಾಟು ಯೋಜನೆಗೆ ಉದ್ದೇಶಿಸಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಪಾದಯಾತ್ರೆ ಶುದ್ಧ ರಾಜಕೀಯ.ಕಾಂಗ್ರೆಸ್ಸಿಗರೇ, ನಿಜಕ್ಕೂ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಅವಶ್ಯಕತೆ ಪೂರೈಸುವ ಮನಸ್ಸಿದ್ದಿದ್ದರೆ ಬಿಬಿಎಂಪಿಯಲ್ಲಿ ಅಧಿಕಾರದಲ್ಲಿದ್ದಾಗ ಪೋಲಾಗುವ ಪ್ರಮಾಣ ತಪ್ಪಿಸಬಹುದಿತ್ತಲ್ಲವೇ?
2018 ರ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿತ್ತು. #ಸುಳ್ಳುರಾಮಯ್ಯ ಅವರಿಗೆ ತನ್ನ ಪಕ್ಷ ಸೋಲುವುದು ಖಾತರಿಯಾಗಿತ್ತು.
ಹೀಗಾಗಿ ಹೈಕಮಾಂಡ್ ಒಪ್ಪಿದರೆ ದಲಿತ ಸಿಎಂ ಮಾಡುವುದಕ್ಕೆ ನನ್ನ ಅಭ್ಯಂತರವಿಲ್ಲ ಎಂದರು.
ಆದರೆ ಈಗ ನನಗಿಂತ ದೊಡ್ಡ ದಲಿತ ಯಾರಿದ್ದಾರೆ, ನಾನೇ ಮುಂದಿನ ಮುಖ್ಯಮಂತ್ರಿ ಎನ್ನುತ್ತಿದ್ದಾರೆ.
ಎಷ್ಟೊಂದು ಸುಳ್ಳುಗಳು!!!
— BJP Karnataka (@BJP4Karnataka) December 30, 2021
ಸಿದ್ದರಾಮಯ್ಯ ಸರ್ಕಾರದ ಐದು ವರ್ಷದ ಅವಧಿ #ಮೇಕೆದಾಟು ಯೋಜನೆ ಬಗ್ಗೆ ಕೇವಲ ಪ್ರಚಾರ ಪಡೆಯುವುದಕ್ಕೆ ಮಾತ್ರ ಸೀಮಿತವಾಗಿತ್ತು. ತಾಂತ್ರಿಕ ಸಮಸ್ಯೆ, ಭೂ ಸ್ವಾಧೀನ ಸೇರಿದಂತೆ ಯಾವ ವಿಚಾರಕ್ಕೂ ಕಾಂಗ್ರೆಸ್ಸಿಗರು ಆದ್ಯತೆ ನೀಡಲಿಲ್ಲ. ಕಾಂಗ್ರೆಸ್ಸಿಗರೇ, ನೆಲ ಜಲದ ಬಗ್ಗೆ ನಿಮ್ಮ ಬದ್ದತೆ ಇಷ್ಟೇನಾ ಎಂದು ಪ್ರಶ್ನಿಸಿದೆ.
ಸಿದ್ದರಾಮಯ್ಯ ಅವರ ಕಾಲದಲ್ಲಿ ಕೃಷಿ ಭಾಗ್ಯ ಎಂಬ ಹೆಸರಿನಲ್ಲಿ ಯೋಜನೆ ಜಾರಿಗೆ ತರಲಾಗಿತ್ತು. ಕೃಷಿ ಹೊಂಡ ನಿರ್ಮಾಣಕ್ಕೆ ರೈತರಿಗೆ ಅನುದಾನ ನೀಡುವುದಕ್ಕೆ ತಂದ ಈ ಯೋಜನೆಯ ಹಣ ಸೇರಿದ್ದು ಮಾತ್ರ ಕಾಂಗ್ರೆಸ್ ಕಾರ್ಯಕರ್ತರ ಜೇಬಿಗೆ. ತಾನು ರೈತ ಕಲ್ಯಾಣ ಮಾಡಿದೆ ಎಂದು ಸುಳ್ಳು ಹೇಳುವ ಸಿದ್ದರಾಮಯ್ಯ ಸರ್ಕಾರದ ಸಾಧನೆ ಇದು.
ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಪರಿಶಿಷ್ಟ ಜಾತಿ ಹಾಗೂ ವರ್ಗದ ಗುತ್ತಿಗೆದಾರರಿಗೆ ಕಾಮಗಾರಿ ವಿತರಣೆಯಲ್ಲಿ ಮೀಸಲು ಜಾರಿ ಘೋಷಿಸಿದರು. ಆದರೆ ಎಷ್ಟು ಮಂದಿ ಗುತ್ತಿಗೆದಾರರು ಇದರ ಫಲಾನುಭವಿಗಳಾದರು ಎಂಬುದನ್ನು ತಿಳಿಸಲೇ ಇಲ್ಲ. ಏಕೆಂದರೆ ಸುಳ್ಳೇ ಇವರ ಮನೆ ದೇವರು. ಚುನಾವಣೆಗಾಗಿ ಮಾಡಿದ ಸುಳ್ಳು ಘೋಷಣೆ ಇದಾಗಿತ್ತು
https://twitter.com/BJP4Karnataka/status/1476498172163751937?s=20
2018 ರ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿತ್ತು. #ಸುಳ್ಳುರಾಮಯ್ಯ ಅವರಿಗೆ ತನ್ನ ಪಕ್ಷ ಸೋಲುವುದು ಖಾತರಿಯಾಗಿತ್ತು. ಹೀಗಾಗಿ ಹೈಕಮಾಂಡ್ ಒಪ್ಪಿದರೆ ದಲಿತ ಸಿಎಂ ಮಾಡುವುದಕ್ಕೆ ನನ್ನ ಅಭ್ಯಂತರವಿಲ್ಲ ಎಂದರು. ಆದರೆ ಈಗ ನನಗಿಂತ ದೊಡ್ಡ ದಲಿತ ಯಾರಿದ್ದಾರೆ, ನಾನೇ ಮುಂದಿನ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ಎಷ್ಟೊಂದು ಸುಳ್ಳುಗಳು ಎಂದು ಕಾಂಗ್ರೆಸ್ ನಾಯಕರ ಕಾಲೆಳೆದಿದೆ.