ಮುಂದಿನ ಎರಡು ತಿಂಗಳಿನಲ್ಲಿ ಕೊರೊನಾ ಕೇಸ್ ಜಾಸ್ತಿ ಆಗಲಿದೆ ; ಸುರೇಶ್ ಅಂಗಡಿ

Suresh Angadi

ಬೆಳಗಾವಿ : ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಇನ್ನೂ ಕೊರೊನಾ ಕೇಸ್ ಜಾಸ್ತಿ ಆಗಲಿದೆ. ಆ ಬಳಿಕ ಮತ್ತೆ ಕೊರೊನಾ ಕೇಸ್ ಕಡಿಮೆ ಆಗಲಿದೆ. ಯಾರೂ ಕೂಡ ಧೃತಿಗೆಡಬಾರದು ಎಂದು ಸಚಿವ ಸುರೇಶ್ ಅಂಗಡಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬೆಳಗಾವಿಯಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಇವತ್ತು ರಾಷ್ಟ್ರೀಯ ವೈದ್ಯರ ದಿನಾಚರಣೆ, ಕೊರೊನಾ ವಿರುದ್ಧ ನಮ್ಮ ವೈದ್ಯರು ತಮ್ಮ ಜೀವ ಲೆಕ್ಕಿಸದೇ ಕೆಲಸ ಮಾಡಿದ್ದಾರೆ, ನಾವು ವೈದ್ಯರನ್ನ ದೇವರಾಗಿ ಕಾಣ್ತಿವಿ ಎಂದು ವೈದ್ಯರಿಗೆ ಶುಭ ಕೋರಿದರು. ವೈದ್ಯರನ್ನು ಪ್ರಧಾನಮಂತ್ರಿಗಳು ಕೊರೊನಾ ವಾರಿಯರ್ಸ್ ಅಂತಾ ಹೇಳಿದ್ದಾರೆ. ವೈದ್ಯರ ಸೇವೆ ಬಡವರಿಗೆ ತಲುಪುವ ಕೆಲಸ ಮಾಡಬೇಕು. ಅವರು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ರಾಜ್ಯ ಹಾಗೂ ದೇಶದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಆಗುವುದಿಲ್ಲ ಎಂದು ಲಾಕ್ ಡೌನ್ ಬಗ್ಗೆ ಸ್ಪಷ್ಟಪಡಿಸಿದರು.

ಇನ್ನು ಅಕ್ಕ-ಪಕ್ಕದ ಕೆಲವು ರಾಷ್ಟ್ರಗಳು ನಮ್ಮ ದೇಶದಲ್ಲಿ ಹೆದರಿಕೆ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಭಯದ ವಾತಾವರಣ ನಿರ್ಮಿಸುವ ಪ್ರಯತ್ನ ಮಾಡುತ್ತಿದ್ದಾರೆ. ದೇಶದಲ್ಲಿ ಆರ್ಥಿಕ ಯುದ್ಧ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಭಾರತೀಯರು ಅತ್ಯಂತ ಸೃಜನಶೀಲರಾಗಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಂಡು ದೇಶದ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ಸುರೇಶ್ ಅಂಗಡಿ ಹೇಳಿದ್ದಾರೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This