ಶಾಲಾ – ಕಾಲೇಜುಗಳಲ್ಲಿ ಮತ್ತೆ ಕರೋನಾ ಆರ್ಭಟ ವಿದ್ಯಾರ್ಥಿಗಳಿಗೆ ಸೋಂಕು
ಕಳೆದ ಕೆಲ ದಿನಗಳ ಹಿಂದೆಯಷ್ಟೆ ಶಾಲಾ ಕಾಲೇಜುಗಳು ಪ್ರಾರಂಭವಾಗಿದ್ದು ಎರಡು ವರ್ಷಗಳ ನಂತರ ವಿದ್ಯಾರ್ಥಿಗಳು ಶಾಲೆಯ ಮುಖವನ್ನ ನೋಡುತ್ತಿದ್ದಾರೆ. ಆದರೆ ಇದು ಕರೋನಗೆ ಇಷ್ಟವಿದ್ದಂತೆ ಕಾಣುತ್ತಿಲ್ಲ ದಿನಕ್ಕೊಂದರಂತೆ ಶಾಲಾ ಕಾಲೇಜುಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಳ್ಳುತ್ತಿರು ಬಗ್ಗೆ ವರದಿಯಾಗುತ್ತಿದೆ.
ಸರ್ಜಾಪುರ ರಸ್ತೆಯಲ್ಲಿರುವ ದೊಡ್ಡಸಂದ್ರದ ಮಹಾದೇವಾಪುರದ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ದೊಡ್ಡಸಂದ್ರದ “ದಿ ಇಂಟರ್ ನ್ಯಾಷನಲ್ ಸ್ಕೂಲ್” ಬೆಂಗಳೂರು ಶಾಲೆಯಲ್ಲಿ 33 ವಿದ್ಯಾರ್ಥಿಗಳು ಮತ್ತು 4 ಸಿಬ್ಬಂದಿಗಳಿಗೆ ಕರೋನಾ ಸೋಂಕು ತಗುಲಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ವಿದ್ಯಾರ್ಥಿಗಳಿಗೆ ಕರೋನ ಪರೀಕ್ಷೆ ಮಾಡಲಾಗುತ್ತಿದೆ.
ನಿನ್ನೆ ಧಾರವಾಡದ ಎಸ್ ಡಿ ಎಂ ವೈದ್ಯಕೀಯ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕರೋನಾ ದೃಡಪಟ್ಟಿತ್ತು. ಹಾಸ್ಟೆಲ್ ಗಳನ್ನ ಸೀಲ್ ಡೌನ್ ಮಾಡಿ ವಿದ್ಯಾರ್ಥಿಗಳನ್ನ ಕ್ವಾರಂಟೈನ್ ಮಾಡಲಾಗಿದೆ.
ರಸಿಕ ವೈದ್ಯಾಧಿಕಾರಿಗೆ ಚೆಲ್ಲಾಟ ಮಹಿಳಾ ಸಿಬ್ಬಂದಿಗೆ ಸಂಕಟ
ಚಮಕ್ ಜೋಡಿಯ ಮತ್ತೊಂದು ‘ಸಖತ್’ ಎಂಟ್ರಿ








