ಹಲವರಿಗೆ ಬಿಗ್ ಬಾಸ್ ಎಂದರೆ ತುಂಬಾ ಇಷ್ಟ. ಬಿಗ್ ಬಾಸ್ ಮನೆಯಲ್ಲಿ ವಿವಾದಗಳಿಗೆ ಕೂಡ ಕೊರತೆ ಇಲ್ಲ. ಅದರಲ್ಲಿಯೂ ಹಿಂದಿ ಬಿಗ್ ಬಾಸ್ ಅಂತೂ ವಿವಾದದಿಂದಲೇ ಕೂಡಿರುತ್ತದೆ. ಸದ್ಯ ಮತ್ತೊಂದು ವಿವಾದ ಬಿಗ್ ಬಾಸ್ ಅಂಗಳದಲ್ಲಿ ಕೇಳಿ ಬಂದಿದೆ.
ಸದ್ಯ ವಿಕ್ಕಿ ಜೈನ್ ಹಾಗೂ ಅವರ ಪತ್ನಿ ಅಂಕಿತಾ ಲೋಖಂಡೆ ಬ್ಲ್ಯಾಂಕೆಟ್ ಮುಚ್ಚಿಕೊಂಡು ಸರಸವಾಡಿದ್ದಾರೆ ಎನ್ನಲಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೀಗಾಗಿ ಜನರು ಪ್ರಶ್ನಿಸುತ್ತಿದ್ದಾರೆ.
Ye Vicky Bhaiya aur Ankita kya kar rahe hai family show me😳pic.twitter.com/sSo1tz39dm
— #BiggBoss_Tak👁 (@BiggBoss_Tak) December 25, 2023
ಬಿಗ್ ಬಾಸ್ ಗೆ ವಿಕ್ಕಿ ಜೈನ್ ಹಾಗೂ ಅಂಕಿತಾ ಬಂದಾಗಿನಿಂದ ಹಲವಾರು ಚರ್ಚೆ ನಡೆಯುತ್ತಿವೆ. ಇವರು ಸಾಕಷ್ಟು ಬಾರಿ ಕಿತ್ತಾಡಿಕೊಂಡಿದ್ದಾರೆ. ವಿಚ್ಛೇದನ ತೆಗೆದುಕೊಳ್ಳುವ ವಿಚಾರವನ್ನೂ ಮಾತನಾಡಿದ್ದಾರೆ. ಈಗ ಇದನ್ನು ಕಂಡು ಹಲವರು ಶಾಕ್ ಆಗಿದ್ದಾರೆ.
ಬೆಡ್ ಮೇಲೆ ಅಂಕಿತಾ ಹಾಗೂ ವಿಕ್ಕಿ ಮಲಗಿದ್ದರು. ಆನಂತರ ಬ್ಲ್ಯಾಂಕೆಟ್ ಮುಚ್ಚಿಕೊಂಡು ಹೊರಳಾಡಿದ್ದಾರೆ. ಅಲ್ಲಿ ಏನೋ ನಡೆದಿರಬಹುದು ಎಂದು ನೆಟ್ಟಿಗರು ಊಹೆ ಮಾಡುತ್ತಿದ್ದಾರೆ. ಹಲವರಂತು ತೀವ್ರ ಛೀಮಾರಿ ಹಾಕಿದ್ದಾರೆ.