ಕೊರೊನಾ 3 ನೇ ಅಲೆ ಇನ್ನೂ 10 ದಿನಗಳಲ್ಲಿ ಸಂಪೂರ್ಣ ಕಡಿಮೆಯಾಗಲಿದೆ: ಕೆ. ಸುಧಾಕರ Saaksha Tv
ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಕೊರೊನಾ 3 ನೇ ಅಲೆ ಇನ್ನೂ 10 ದಿನಗಳಲ್ಲಿ ಸಂಪೂರ್ಣ ಕಡಿಮೆಯಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಹಲವು ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ವಿವಿಧ ಕಾರ್ಯಮಗಳನ್ನು ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ 3 ನೇ ಅಲೆ ಎಷ್ಟು ವೇಗವಾಗಿ ಹರಡುತ್ತದೆಯೋ ಅಷ್ಟೇ ವೇಗವಾಗಿ ಕಡಿಮೆಯಾಗುತ್ತೆ ಎಂದು ಹೇಳಿದ್ದೆ. ಈಗ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿವೆ. ರಾಜ್ಯದಲ್ಲಿ ಕೊರೊನಾ 3 ನೇ ಅಲೆ ವೇಗವಾಗಿ ಹರಡಿತ್ತು. ದಿನಕಳೆದಂತೆ ಕೊರೊನಾ 3 ನೇ ಅಲೆ ಕಡಿಮೆಯಾಗಲಿದೆ. ಇನ್ನೂ 10 ದಿನಗಳಲ್ಲಿ ಸಂಪೂರ್ಣ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ.
ಇನ್ನೂ ರಾಜ್ಯದಲ್ಲಿ ಪಶು ವೈದ್ಯರ ಕೊರತೆಯನ್ನು ನೀಗಿಸಲು ನೇರ ನೇಮಕಾತಿ ಮಾಡಿಕೊಳ್ಳಲಾಗುವುದು. ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಸಲಾಗಿದ್ದು, 400 ಪಶು ವೈದ್ಯರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗುತ್ತದೆ ಎಂದು ತಿಳಿಸಿದರು.