ADVERTISEMENT
Sunday, July 13, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಮುರಿದ ಮನಸಿನ ತಳಮಳಗಳಿಗೊಂದು ಭವ್ಯ ಶೋಕೇಸ್; ಭಗ್ನ ನೆನಪುಗಳ ಕ್ರೋಟಿಯನ್ ಮ್ಯೂಸಿಯಂ

admin by admin
June 19, 2020
in Marjala Manthana, Newsbeat, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

ಮುರಿದ ಮನಸಿನ ತಳಮಳಗಳಿಗೊಂದು ಭವ್ಯ ಶೋಕೇಸ್; ಭಗ್ನ ನೆನಪುಗಳ ಕ್ರೋಟಿಯನ್ ಮ್ಯೂಸಿಯಂ:

ಭಗ್ನ ಹೃದಯಗಳ ಕಹಿ ನೆನಪುಗಳ ಕಥೆ ಹೇಳುತ್ತದೆ ವಿಶಿಷ್ಟ ಕ್ರೋಟಿಯನ್ ಮ್ಯೂಸಿಯಂ. ತೊರೆದು ಹೋದ ಅವಳ-ಅವನ ನೆನಪಿನ ತರಹೇವಾರಿ ವಸ್ತುಗಳ ಸಂಗ್ರಹ ಇಲ್ಲಿದೆ. ಸದ್ಯ ಕರೋನಾ ಲಾಕ್ ಡೌನ್ ಕಾರಣ ಮುಚ್ಚಲ್ಪಟ್ಟಿದ್ದ ಈ ಮ್ಯೂಸಿಯಂ, ಯಾವತ್ತಿಗೂ ಭಗ್ನಪ್ರೇಮಿಗಳ ಪಾಲಿನ ಶಾಶ್ವತ ತಂಗುದಾಣ.

Related posts

ವಾಣಿಜ್ಯ ತೆರಿಗೆ ಇಲಾಖೆಯಿಂದ ಸಿಹಿ ಸುದ್ದಿ: ಬೇಕರಿ, ಕಾಂಡಿಮೆಂಟ್ಸ್ ಮಾಲೀಕರಿಗೆ ತೆರಿಗೆ ವಿನಾಯಿತಿ!

ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB) ನೇಮಕಾತಿ 2025

July 13, 2025
ವಾಣಿಜ್ಯ ತೆರಿಗೆ ಇಲಾಖೆಯಿಂದ ಸಿಹಿ ಸುದ್ದಿ: ಬೇಕರಿ, ಕಾಂಡಿಮೆಂಟ್ಸ್ ಮಾಲೀಕರಿಗೆ ತೆರಿಗೆ ವಿನಾಯಿತಿ!

ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ: ಕರ್ನಾಟಕ ಸಿಎಂ ಬದಲಾವಣೆಯ ಸುಳಿವು?

July 13, 2025

ಇಲ್ಲಿವೆ ಭಗ್ನ ಪ್ರೇಮದ ಮುರಿದ ಮನಸಿನ ನೆನಪುಗಳ ಜಾತ್ರೆ. ಒಡೆದ ಹೃದಯಗಳ ಆರ್ತನಾದ ಕೇಳಿಸುವ ವಿಶಿಷ್ಟ ಮ್ಯೂಸಿಯಂ. ನೂರಾರು ಮನಸುಗಳ ಪ್ರೇಮ ವೈಫಲ್ಯದ ಕಥೆ ಹೇಳುತ್ತವೆ ಇಲ್ಲಿರುವ ವಸ್ತುಗಳು. ಕ್ರೋಟಿಯಾದ ಪ್ರವಾಸಿ ತಾಣವಿದು ಬ್ರೋಕನ್ ರಿಲೇಷನ್​ಶಿಪ್ ಸಂಗ್ರಹಾಲಯ.

ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರಿಗೆ ಹಲವು ರೀತಿಯ ಪ್ರೇಮ ವೈಫಲ್ಯದ ಕಥೆಗಳು ಕಾದಿವೆ. ಇಲ್ಲಿ ಪ್ರದರ್ಶನಕ್ಕಿಟ್ಟಿರುವ ಒಂದೊಂದು ವಸ್ತುಗಳೂ ಒಂದೊಂದು ಕಣ್ಣೀರಿನ ಕಥೆಗಳ ನಿರೂಪಣೆ ಮಾಡುತ್ತವೆ. ಜಗತ್ತಿನ ಬೇರೆ ಬೇರೆ ರಾಷ್ಟ್ರಗಳ ಮುರಿದ ಸಂಬಂಧದ ಕುರುಹುಗಳು ಇಲ್ಲಿ ಸ್ಥಾನ ಪಡೆದುಕೊಂಡಿವೆ. ಈ ವಿಶಿಷ್ಟ ಪರಿಕಲ್ಪನೆಗೆ ಜಾಗತಿಕ ಮನ್ನಣೆಯೂ ದೊರಕಿದೆ.

ವಿಶಾಲವಾದ ಆವರಣದ ತಿಳಿ ಬೆಳಕಿನಲ್ಲಿ, ಗಾಜಿನ ಶೋಕೇಸ್​ನಲ್ಲಿ ಒಪ್ಪ ಓರಣವಾಗಿ ಜೋಡಿಸಿಟ್ಟ ವಿವಿಧ ಬಗೆಯ ತರಹೇವಾರಿ ಭಗ್ನ ವಸ್ತುಗಳು. ಅವುಗಳಲ್ಲಿ ಕೆಲವು ಒಡೆದು ಹೋಗಿವೆ, ಕೆಲವು ಮುರಿದಿವೆ, ಇನ್ನೂ ಕೆಲವು ಹರಿದು ಛಿದ್ರಗೊಂಡಿವೆ. ಹಾಗಂತ ಅವ್ಯಾವೂ ಅನುಪಯುಕ್ತ ಕಸ ಎಂದು ಹೊರೆಗೆಸೆಯುವಂತಿಲ್ಲ. ಇನ್​ಫ್ಯಾಕ್ಟ್ ಇವೇ ವಸ್ತುಗಳನ್ನು ಜೋಡಿಸಿ ಮ್ಯೂಸಿಯಂ ಮಾಡಲಾಗಿದೆ; ಮತ್ತು ಈ ಮ್ಯೂಸಿಯಂಗೆ ವಿಶ್ವದ ಬೇರೆ ಬೇರೆ ಭಾಗಗಳಿಂದ ಆಸಕ್ತ ಪ್ರವಾಸಿಗರು ಹುಡುಕಿಕೊಂಡು ಬರುತ್ತಾರೆ. ಈ ಮ್ಯೂಸಿಯಂ ಈ ದೇಶದ ಪ್ರವಾಸಿ ತಾಣವೆನ್ನುವಷ್ಟು ಮಹತ್ವ ಗಳಿಸಿಕೊಂಡಿದೆ. ಇಲ್ಲಿರುವ ಒಂದೊಂದು ವಸ್ತುವಿಗೂ ಅದರದ್ದೇ ಆದ ಭಾವನಾತ್ಮಕ ಹಿನ್ನೆಲೆ ಇದೆ.  ಪ್ರತಿಯೊಂದು ವಸ್ತುಗಳೂ ಒಂದೊಂದು ನೋವಿನ ಕಥೆ ಹೇಳುತ್ತವೆ. ಅಂದ ಹಾಗೆ ಈ ಮ್ಯೂಸಿಯಂ ಹೆಸರು ‘ಮ್ಯೂಸಿಯಂ ಆಫ್ ಬ್ರೋಕನ್ ರಿಲೇಷನ್​ಶಿಪ್’.

ಈ ಮ್ಯೂಸಿಯಂ ಹಾಗೂ ಇಲ್ಲಿ ಪ್ರದರ್ಶನಕ್ಕಿಟ್ಟಿರುವ ಹಲವು ತರಹದ ವಸ್ತುಗಳನ್ನು ಒಮ್ಮೆ ಕೂಲಂಕುಷವಾಗಿ ದಿಟ್ಟಿಸಿ ನೋಡಿದ್ರೆ ಇಲ್ಲಿ ನೂರಾರು ಒಡೆದ ಹೃದಯಗಳ ಆರ್ತನಾದ ಕೇಳಿಸುತ್ತದೆ. ಭಗ್ನಗೊಂಡ ಪ್ರೀತಿಯ ಕಣ್ಣೀರ ಕರೆ ಕಾಣಿಸುತ್ತದೆ. ವಿವರಿಸಲಾರದ ಆದರೆ ಅನುಭವಕ್ಕೆ ನಿಲುಕುವ ನೋವಿನ ಹತ್ತಾರು ಅಧ್ಯಾಯಗಳು ನೋಡುಗರ ಮನಸನ್ನು ಆರ್ದ್ರಗೊಳಿಸುತ್ತವೆ. ಯಾಕಂದ್ರೆ ಇಲ್ಲಿ ಪ್ರದರ್ಶನಕ್ಕಿಟ್ಟಿರುವ ವಸ್ತುಗಳು ಭಗ್ನ ಪ್ರೇಮಿಗಳ ಸಿಹಿ-ಕಹಿ ನೆನಪುಗಳ ಸಂಗ್ರಹ. ಪ್ರೇಮವೈಫಲ್ಯಗೊಂಡ ಪ್ರೇಮಿಗಳು ತಮ್ಮ ಮುರಿದು ಬಿದ್ದ ಸಂಬಂಧದ ಕೊನೆಯ ನೆನಪುಗಳನ್ನು ದಾನ ಮಾಡಿದ್ದಾರೆ. ಅವುಗಳೇ ಈ ವಸ್ತುಪ್ರದರ್ಶನದಲ್ಲಿ ಪ್ರದರ್ಶನಗೊಳ್ಳುತ್ತಿವೆ. ವಿಶ್ವದ ನಾನಾ ಭಾಗಗಳ ಪ್ರೇಮಿಗಳ ದುರಂತಮಯ ಪ್ರೇಮಕಥೆಗಳನ್ನು ಹೊತ್ತು ತಂದು ಜಗತ್ತಿಗೆ ಹೇಳುತ್ತವೆ ಇಲ್ಲಿನ ವಸ್ತುಗಳು.

ಅಹಂಕಾರ, ಪ್ರತಿಷ್ಟೆಗೆ ಬಲಿಯಾದ ಸಂಬಂಧಗಳು, ಯಾವುದೋ ಕಹಿ ಗಳಿಗೆಯಲ್ಲಿ ಆಡಿದ ಯಾವುದೋ ಮಾತಿಗೆ ಮುರಿದು ಬಿದ್ದ ಬಾಂದವ್ಯ, ತೋರಿದ ಅಸಂಬದ್ಧ ವರ್ತನೆಗೆ ಕಡಿದುಹೋದ ಒಲುಮೆ, ಪರಿಸ್ಥಿತಿ ಹಾಗೂ ಘಟನೆಗಳ ಕೈಗೊಂಬೆಯಾದ ಕಾಲದ ನಡೆಗೆ ಕಳಚಿದ ನಂಟು, ಮಿಸ್​ ಅಂಡರ್​ಸ್ಟಾಂಡಿಂಗ್, ಪೊಸೆಸೀವ್​ನೆಸ್, ಹಕ್ಕು ಚಲಾಯಿಸುವುದು ಇತ್ಯಾದಿ ಕಾರಣಗಳಿಂದ ದೂರವಾದ ಮನಸುಗಳು, ಪ್ರೀತಿಯನ್ನು ಅರ್ಥ ಮಾಡಿಕೊಳ್ಳದೇ ಪ್ರೀತಿಸಿ ಬದುಕಿಗೆ ಮೋಸ ಮಾಡಿಕೊಂಡ ಹರೆಯದ ಹುಡುಗಾಟದ ಸ್ವಗತಗಳು. ಹೀಗೆ, ಇಲ್ಲಿ ಕೇಳಿಸುವ ಪಿಸು ಮಾತುಗಳ ಹಿಂದೆ ಹತ್ತಾರು ವಿಚ್ಛೇಧಿತ ಘಟನೆಗಳ ಸಾಕ್ಷಿಗಳಿವೆ, ನೂರಾರು ಬಗೆಯ ಸಮರ್ಥನೆಗಳಿವೆ. ಇಲ್ಲಿ ಭಗ್ನ ಪ್ರೇಮಿಗಳ ನಿಟ್ಟುಸಿರಿದೆ, ನರಳಿಕೆಯಿದೆ, ತಳಮಳ-ತಹತಹಿಕೆ-ಚಡಪಡಿಕೆಗಳಿವೆ. ಕಳೆದುಕೊಂಡ ಭಾರವಾದ ಭಾವದ ಸಂಕಟವಿದೆ. ನೆರವೇರದ ಕನವರಿಕೆಗಳ ನಡುಕವಿದೆ. ವಿವರಿಸಲಾರದಂತಹ ಅದೆಷ್ಟೋ ಭಾವನೆಗಳ ಮಹಾಸಾಗರ ಇಲ್ಲಿ ವೀಕ್ಷಕರ ಅನುಭವಕ್ಕೆ ಬರುತ್ತದೆ.

ಹೀಗೆ ಮಾಜಿ ಪ್ರೇಮಿಗಳ ಒಲವಿನ ಪಳಯುಳಿಕೆಗಳನ್ನು ಓರಣವಾಗಿ ಜೋಡಿಸಿಟ್ಟು ಮ್ಯೂಸಿಯಂ ಮಾಡಿರುವುದು ಕ್ರೋಟಿಯಾ ದೇಶದ ಜೇಗರ್ಬ್​ನಲ್ಲಿ. ವಿಶ್ವದಾದ್ಯಂತ ಪ್ರೇಮವಂಚಿತ ದುರದೃಷ್ಟವಂತರು ತಮ್ಮ ಗತಿಸಿದ ಒಲುಮೆಯ ಸಾಕ್ಷಿಗಳನ್ನು ಮ್ಯೂಸಿಯಂಗೆ ದಾನ ಮಾಡಿದ್ದಾರೆ. ಆ ವಸ್ತುಗಳು ಒಂದೊಂದು ಚಿಕ್ಕ ಟಿಪ್ಪಣಿಯೊಂದಿಗೆ ವಸ್ತು ಸಂಗ್ರಹಾಲಯದಲ್ಲಿ ಜತನದಿಂದ ಜೋಡಿಸಲ್ಪಟ್ಟಿದೆ. ಅವೆಲ್ಲವೂ ನೋಡುಗರಿಗೆ ಅವರ ಕರುಣಾಜನಕ ಪ್ರೇಮವೈಫಲ್ಯದ ಕಥೆಯನ್ನು ಹೇಳುತ್ತಿವೆ.

ಮ್ಯೂಸಿಯಂನ ಒಳಾಂಗಣದ ಶೋಕೇಸ್ ರ್ಯಾಕ್​​ನಲ್ಲಿ ಡಾಕ್ಯುಮೆಂಟ್ಸ್​ಗಳಿವೆ, ಫ್ರೋಟೋಗ್ರಫಿಗಳಿವೆ, ಪ್ರೇಮಪತ್ರ ಹಾಗೂ ಸಂದೇಶಗಳಿವೆ, ಪ್ರೇಮಿಗಳು ಒಬ್ಬರಿಗೊಬ್ಬರು ಕೊಟ್ಟುಕೊಂಡ ಉಡುಗೊರೆಗಳನ್ನು ದಿನಾಂಕ ಹಾಗೂ ಸ್ಥಳಗಳ ಸಹಿತ ಪ್ರದರ್ಶಿಸಲಾಗಿದೆ. ತಮ್ಮ ಪ್ರಿಯತಮೆಯ ಕೂದಲಿನಿಂದ ಮಾಜಿ ಪತ್ನಿ ಮದುವೆಯಲ್ಲಿ ತೊಟ್ಟ ವೆಡ್ಡಿಂಗ್ ಗೌನ್​ವರೆಗೆ. ಪ್ರಿಯಕರನ ಹರಿದ ಜೀನ್ಸ್​ನಿಂದ ಪ್ರೇಯಸಿಯ ಒಳ ಉಡುಪುಗಳವರೆಗೆ. ತನ್ನ ಹುಡುಗಿಗೆ ಕೊಟ್ಟ ಟೆಡ್ಡಿಬೇರ್, ಆಟಿಕೆಗಳು, ಗಿಫ್ಟ್​ ವಸ್ತುಗಳಿಂದ, ಅವಳು ತೊಟ್ಟ ಚಪ್ಪಲಿಯವರೆಗೆ. ಹೀಗೆ ಪ್ರಿಯತಮೆಯ ವಸ್ತುಗಳು; ಪ್ರಿಯಕರನ ನೆನಪುಗಳು ಇಲ್ಲಿ ಸ್ಥಾನ ಪಡೆದುಕೊಂಡಿವೆ. ಕೆಲವು ಭಗ್ನಗೊಂಡ ವಸ್ತುಗಳಾದರೂ ಭಗ್ನಗೊಂಡ ಹೃದಯಗಳ ಕಥೆಯನ್ನು ಅಚ್ಚುಕಟ್ಟಾಗಿ ಹೇಳುತ್ತಿವೆ. ತಮ್ಮ ವಸ್ತುಗಳನ್ನು ಕೊಟ್ಟಿರುವ ದಾನಿಗಳ ಹೆಸರನ್ನು ಗೌಪ್ಯವಾಗಿಡಲಾಗಿದೆ. ಆದರೆ ಒಂದು ವೇಳೆ ಆ ಪ್ರೇಮಿ ಏನಾದರೂ ತನ್ನ ಪ್ರೀತಿಯ ದುರಂತ ಅಂತ್ಯದ ಕಥೆ ಅಥವಾ ಸಂದೇಶ ಹೇಳ ಬಯಸಿದ್ರೆ ಅಥವಾ ಕ್ಷಪಾಪಣೆಯನ್ನೇನಾದ್ರೂ ಮಾಡಬಯಸಿದ್ರೆ ಅದನ್ನು ವರ್ಚುಯೆಲ್ ವೆಬ್ ಮ್ಯೂಸಿಯಂನಲ್ಲಿ ದಾಖಲಿಸಲಾಗುತ್ತದೆ.

ಜೇಗರ್ಬ್​ ಮೂಲದ ಇಬ್ಬರು ಸೃಜನಾತ್ಮಕ ಕಲಾವಿದರ ಪರಿಕಲ್ಪನೆಯಿದು. ಚಿತ್ರ ನಿರ್ಮಾಪಕ ಓಲಿಂಕಾ ವಿಸ್ಟಿಕಾ ಹಾಗೂ ಮೂರ್ತಿಗಳನ್ನು ನಿರ್ಮಿಸುವ ಕಲಾವಿದ ಡ್ರೇಜನ್ ಗ್ರಬಿಸಿಕ್ ನಿರ್ಮಿಸಿದ ಮ್ಯೂಸಿಯಂ ಇದು. ಇದರ ಹಿಂದೊಂದು ಸ್ವಾರಸ್ಯಕರ ಕಥೆಯೂ ಇದೆ. 2003ರಲ್ಲಿ ಇವರಿಬ್ಬರ ನಾಲ್ಕು ವರ್ಷಗಳ ಪ್ರೀತಿ ಕೊನೆಯಾದಾಗ ಕೊನೆಯ ಬಾರಿಗೆ ಇವರಿಬ್ಬರು ಮಾತಾಡುತ್ತಿದ್ದ ಸಂದರ್ಭದಲ್ಲಿ ತಮಾಷೆಗೆ ಮೊಳಕೆಯೊಡೆದ ಕನಸಿದು. ತಮ್ಮಿಬ್ಬರ ಈ ಅವಧಿಯಲ್ಲಿ ವಿನಿಮಯ ಮಾಡಿಕೊಂಡ ವಸ್ತುಗಳನ್ನು ಏನು ಮಾಡುವುದು? ಮ್ಯೂಸಿಯಂನಲ್ಲಿಟ್ಟರೆ ಅವಾದರೂ ತಮ್ಮ ಪ್ರೀತಿಯ ಕಥೆ ಹೇಳುತ್ತವೆಯೇನೋ ಅಂದಿದ್ದಳು ವಿಸ್ಟಿಕಾ. ಅದಾದ ಮೂರು ವರ್ಷಗಳ ನಂತರ ಗ್ರಬಿಸಿಕ್ ವಿಸ್ಟಿಕಾಳನ್ನು ಸಂಪರ್ಕಿಸಿ ಅವರ ಅಂದಿನ ತಮಾಷೆಯ ಮಾತನ್ನು ನಿಜವಾಗಿಸುವ ಸ್ಪಷ್ಟ ಯೋಜನೆಯ ರೂಪುರೇಷೆಗಳೊಂದಿಗೆ ತಯಾರಾಗಿದ್ದ. ಅದಾದ ನಂತರ ಅವರು ತಮ್ಮ ಭಗ್ನ ಪ್ರೇಮಿ ಸ್ನೇಹಿತರನ್ನು ಸಂಪರ್ಕಿಸಿ ಅವರ ನೆನಪಿನ ವಸ್ತುಗಳನ್ನು ಮ್ಯೂಸಿಯಂಗೆ ನೀಡುವಂತೆ ಮನವೊಲಿಸಿದ್ರು. 2006ರಲ್ಲಿ ಈ ವಿನೂತನ ಭಗ್ನ ನೆನಪುಗಳ ಮುರಿದುಬಿದ್ದ ಸಂಬಂಧಗಳ ಕಥೆ ಹೇಳುವ ಮ್ಯೂಸಿಯಂ ಲೋಕಾರ್ಪಣೆಗೊಂಡಿತು.

ಮೊದಲು ಈ ವಸ್ತುಸಂಗ್ರಹಾಲಯವನ್ನು ಅರ್ಜಂಟೈನಾ, ಬೋಸ್ನಿಯಾ, ಜರ್ಮನಿ, ಮ್ಯಾಸಿಡೋನಿಯಾ, ಫಿಲಿಪ್ಪೈನ್ಸ್, ಬೋಸ್ನಿಯಾ, ಸರ್ಬಿಯಾ, ಸಿಂಗಾಪುರ್, ಸ್ಲೋವೇನಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುನೈಟೆಡ್ ಕಿಂಗ್​ಡಂ, ಯುನೈಟೆಡ್ ಸ್ಟೇಟ್ಸ್ ಮುಂತಾದೆಡೆ ಸಂಚಾರಕ್ಕೆ ತೆಗೆದುಕೊಂಡು ಹೋಗಿ ಪ್ರದರ್ಶಿಸಲಾಯ್ತು. 2006ರಿಂದ 2010ರ ಈ ನಡುವಿನ ವರ್ಷದಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಜನ ಬ್ರೋಕನ್ ರಿಲೇಷನ್​ಶಿಪ್ ಮ್ಯೂಸಿಯಂ ವೀಕ್ಷಿಸಿದ್ದರು. 2007ರ ಬರ್ಲಿನ್ ನಗರದ ಪ್ರದರ್ಶನದ ವೇಳೆ 30ಕ್ಕೂ ಹೆಚ್ಚು ತಮ್ಮ ನೆನಪಿನ ವಸ್ತುಗಳನ್ನು ಡೊನೇಟ್ ಮಾಡಿದ್ದರು ಬರ್ಲಿನ್​ ನಗರದ ಭಗ್ನಪ್ರೇಮಿಗಳು.

ಕ್ರೋಟಿಯನ್ ಸರ್ಕಾರದ ಸಂಸ್ಕೃತಿ ಸಚಿವಾಲಯ ಈ ಮ್ಯೂಸಿಯಂಗೆ ಸ್ಥಳಾವಕಾಶ ನೀಡದ ಹಿನ್ನೆಲೆಯಲ್ಲಿ ವಿಸ್ಟಿಕಾ ಹಾಗೂ ಗ್ರುಬಿಸಿಕ್, ಖಾಸಗಿ ಹೂಡಿಕೆಯ ಸಹಕಾರದೊಂದಿಗೆ ಜಗರ್ಬ್​ ನಗರದ ಜನದಟ್ಟಣೆಯ ಪ್ರದೇಶದಲ್ಲಿ 300 ಚದರ ಮೀಟರ್ ವಿಸ್ತೀರ್ಣದ ಮಳಿಗೆಯನ್ನು ಬಾಡಿಗೆಗೆ ಪಡೆದು ಮೊದಲ ಖಾಸಗಿ ಮ್ಯೂಸಿಯಂ ಆರಂಭಿಸಿದ್ರು. 2010ರಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಿದ ಬ್ರೋಕನ್ ರಿಲೇಷನ್​​ಶಿಪ್ ಮ್ಯೂಸಿಯಂ ವಿದೇಶಿಯರನ್ನು ತೀವ್ರವಾಗಿ ಸೆಳೆಯತೊಡಗಿತು. ಕ್ರಮೇಣ ಮ್ಯೂಸಿಯಂನ ಜನಪ್ರಿಯತೆ ಹೆಚ್ಚಾಗತೊಡಗಿತು. ಉಳಿದ ಸರ್ಕಾರಿ ಮ್ಯೂಸಿಯಂಗಳಿಗಿಂತ ಭಿನ್ನವಾಗಿ ವಾರದ ಏಳೂ ದಿನ ಇದು ತೆರೆದಿರುತ್ತದೆ. 2011ರಲ್ಲಿ ಈ ಮ್ಯೂಸಿಯಂ ವಿನೂತನ ಪ್ರಯತ್ನಕ್ಕೆ ಯುರೋಪಿನ ಕೆನ್ನೇತ್ ಹಂಡಸನ್​ ಪ್ರಶಸ್ತಿ ಲಭಿಸಿದೆ.

ಇಲ್ಲಿಗೆ ತಮ್ಮ ಪ್ರೀತಿಯ ನೆನಪಿನ ಪಳಯುಳಿಕೆಗಳನ್ನು ಕೊಡುವವರ ಕಥೆಯೂ ಸ್ವಾರಸ್ಯಕರ. ಬರ್ಲಿನ್​ನ ಮಹಿಳೆಯೊಬ್ಬಳು ಮ್ಯೂಸಿಯಂಗೆ ಕೊಡಲಿಯೊಂದನ್ನು ಕೊಟ್ಟಿದ್ದಾಳೆ. ಇದರ ಹಿಂದಿನ ಕಥೆ ರೋಚಕ. ಅವಳ ಗೆಳೆಯ ಅವಳನ್ನು ಬಿಟ್ಟು ಬೇರೊಬ್ಬಳ ಸಂಗಡ ಹೋದನಂತೆ. ಆ ನೋವಿನ ಹತಾಶೆಗೆ ಆ ಮಹಿಳೆ ಕೊಡಲಿಯಿಂದ ಅವನು ಕೂರುತ್ತಿದ್ದ ಮರದ ಹಲಗೆಯನ್ನು ತುಂಡು ತುಂಡಾಗಿ ಕತ್ತರಿಸಿದಳಂತೆ. ಕೆಲವೇ ದಿನಗಳ ನಂತರ ಅವಳ ಅಪಾರ್ಟ್​ಮೆಂಟ್​ನಲ್ಲಿ ಅವಳ ಬಾಯ್​ ಫ್ರೆಂಡ್ ಕೂರುತ್ತಿದ್ದ ಮರದ ಖುರ್ಚಿಯ ಚೂರುಗಳ ಗುಡ್ಡೆ ಮಾತ್ರ ಅವಳ ಭಗ್ನ ಹೃದಯದಂತೆ ಬಿದ್ದಿತ್ತಂತೆ. ಕೊನೆಗೆ ತನ್ನ ನೆನಪಿನ ನೋವಿನಿಂದ ಹೊರಬಂದ ಆ ಮಹಿಳೆ ಮ್ಯೂಸಿಯಂಗೆ ಕೊಡಲಿಯನ್ನು ಉಡುಗೆಯಾಗಿ ಕೊಟ್ಟಳಂತೆ.

ಬ್ರೋಕನ್ ರಿಲೇಷನ್ಶಿಪ್ ಮ್ಯೂಸಿಯಂ ಅನ್ನುವ ಈ ವಿಭಿನ್ನ ಪರಿಕಲ್ಪನೆಯನ್ನು 2016ರ ಈಚೆಗೆ ಯುಎಸ್​ಎನ ಲಾಸ್ ಎಂಜಲೀಸ್​ನಲ್ಲಿಯೂ ಜಾರಿ ತರಲಾಗಿದೆ.. ಜೇಗರ್ಬ್​ ಮ್ಯೂಸಿಯಂ ನೋಡಲು ತೆರಳಿದ್ದ ಅಮೇರಿಕನ್ ವಕೀಲ ಜಾನ್ ಬಿ ಕ್ವಿನ್, 2016ರ ಜೂನ್ 4ರಂದು ಲಾಸ್ ಎಂಜಲೀಸ್​ನಲ್ಲಿ ಹೊಸ ಮ್ಯೂಸಿಯಂ ಸ್ಥಾಪನೆ ಮಾಡಿದ್ದಾನೆ. ಹಾಲಿವುಡ್​ನ ಹೃದಯಭಾಗದಲ್ಲಿ ಪ್ರಾರಂಭವಾಗಿರುವ ಈ ಮ್ಯೂಸಿಯಂ ಸಹ ಭಗ್ನ ಹೃದಯಗಳ ಭಾರವಾದ ನೆನಪುಗಳನ್ನು ಅನಾವರಣಗೊಳಿಸುವ ಪ್ರಯತ್ನ ಮಾಡಿತ್ತು. 2017ರ ನವೆಂಬರ್​ನಲ್ಲಿ ತಾತ್ಕಾಲಿಕವಾಗಿ ಮುಚ್ಚಲಾದ ಈ ಮ್ಯೂಸಿಯಂ ಮತ್ತೊಂದು ಹೊಸ ಪ್ರದೇಶದಲ್ಲಿ ತಲೆ ಎತ್ತಲಿರುವ ಸೂಚನೆಯಿದೆ.

ಒಟ್ನಲ್ಲಿ ಪ್ರೀತಿ ಹಸಿರಾಗಿದ್ದಾಗ ಪ್ರೇಮಿಗಳ ನೆನಪು ಮಧುರ ಆದ್ರೆ ಅದೇ ಪ್ರೀತಿ ಮುರಿದುಬಿದ್ದಾಗ ಅವೇ ನೆನಪುಗಳ ಮುಳ್ಳಿನ ಹಾಸಿಗೆಯಂತೆ ಮನಸನ್ನು ಸದಾ ಇರಿಯುತ್ತವೆ. ಆ ನೆನಪುಗಳನ್ನೇ ದೂರ ಮಾಡುವ ನೆಪದಲ್ಲಿ ಪ್ರೀತಿ ಬದುಕಿದ್ದಾಗ ಆಪ್ತವಾಗಿದ್ದ ವಸ್ತುಗಳನ್ನು ಉಡುಗೊರೆಗಳನ್ನು ದೂರ ಮಾಡಲು ಸಹಜವಾಗಿಯೇ ಭಗ್ನಪ್ರೇಮಿಗಳು ಪ್ರಯತ್ನಿಸುತ್ತಾರೆ. ಅದು ಆ ಪ್ರೇಮಿಗಳಿಗೆ ಅಪಥ್ಯವಾದ ವರ್ಜ್ಯ ವಸ್ತುಗಳಾದ್ರೂ ಈ ಮ್ಯೂಸಿಯಂ ಪಾಲಿಗೆ ಅವುಗಳೇ ಅಮೂಲ್ಯ ಸಂಗ್ರಹ.

ನಿಮಗೂ ಇಂತದ್ದೇನಾದ್ರೂ ಅನುಭವವಿದ್ರೆ ಎಲ್ಲೋ ಕಸದ ತೊಟ್ಟಿಗೆ ಎಸೆಯುವ ಬದಲು ಅಂತಹ ನೆನಪುಗಳು ಅಡಗಿದ ವಸ್ತುಗಳನ್ನು ಈ ಮ್ಯೂಸಿಯಂಗೆ ದಾನ ಮಾಡಬಹುದು. ನಿಮ್ಮ ವಿಫಲಗೊಂಡ ಪ್ರೇಮದ ಕುರುಹನ್ನು ಜೋಪಾನವಾಗಿ ಕಾಯ್ದಿಟ್ಟುಕೊಳ್ಳುತ್ತೆ ಕ್ರೋಟಿಯಾ ರಾಷ್ಟ್ರದ ಬ್ರೋಕನ್ ರಿಲೇಶನ್​ಶಿಪ್ ಮ್ಯೂಸಿಯಂ. ನಿಮ್ಮ ಪ್ರೇಮದ ಕಥೆಯನ್ನೂ ಜಗತ್ತು ಕೇಳಿಸಿಕೊಳ್ಳುತ್ತದೆ.

-ವಿಭಾ (ವಿಶ್ವಾಸ್ ಭಾರದ್ವಾಜ್)

Tags: americaCrotian Museumindiajegarb museumkarnataka
ShareTweetSendShare
Join us on:

Related Posts

ವಾಣಿಜ್ಯ ತೆರಿಗೆ ಇಲಾಖೆಯಿಂದ ಸಿಹಿ ಸುದ್ದಿ: ಬೇಕರಿ, ಕಾಂಡಿಮೆಂಟ್ಸ್ ಮಾಲೀಕರಿಗೆ ತೆರಿಗೆ ವಿನಾಯಿತಿ!

ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB) ನೇಮಕಾತಿ 2025

by Shwetha
July 13, 2025
0

NHB Recruitment 2025 – ಹೌಸಿಂಗ್ ಬ್ಯಾಂಕ್ (NHB) ಭಾರತೀಯ ವಸತಿ ಹಣಕಾಸು ಕ್ಷೇತ್ರವನ್ನು ಬಲಪಡಿಸುವ ಪ್ರಮುಖ ಸಂಸ್ಥೆಯಾಗಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಸಹಾಯ ಮಾಡುತ್ತಿದೆ. 2025...

ವಾಣಿಜ್ಯ ತೆರಿಗೆ ಇಲಾಖೆಯಿಂದ ಸಿಹಿ ಸುದ್ದಿ: ಬೇಕರಿ, ಕಾಂಡಿಮೆಂಟ್ಸ್ ಮಾಲೀಕರಿಗೆ ತೆರಿಗೆ ವಿನಾಯಿತಿ!

ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ: ಕರ್ನಾಟಕ ಸಿಎಂ ಬದಲಾವಣೆಯ ಸುಳಿವು?

by Shwetha
July 13, 2025
0

ವಿಜಯನಗರ, ಕರ್ನಾಟಕ: ವಿಜಯನಗರ ಜಿಲ್ಲೆಯ ಹೂವಿನಡಗಲಿ ತಾಲ್ಲೂಕಿನ ಸುಪ್ರಸಿದ್ಧ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ, 2025ರ ಪ್ರಸಕ್ತ ವರ್ಷದ ಕಾರ್ಣಿಕ ನುಡಿ ಹೊರಬಿದ್ದಿದ್ದು, ಇದು ಕರ್ನಾಟಕ ರಾಜಕೀಯ ವಲಯದಲ್ಲಿ ತೀವ್ರ...

ವಾಣಿಜ್ಯ ತೆರಿಗೆ ಇಲಾಖೆಯಿಂದ ಸಿಹಿ ಸುದ್ದಿ: ಬೇಕರಿ, ಕಾಂಡಿಮೆಂಟ್ಸ್ ಮಾಲೀಕರಿಗೆ ತೆರಿಗೆ ವಿನಾಯಿತಿ!

ಡಿಕೆ ಸುರೇಶ್: “ರಾಜಕಾರಣದಲ್ಲಿ ನಿವೃತ್ತಿ ಇಲ್ಲ, ಸಿದ್ದರಾಮಯ್ಯ 2028ರಲ್ಲೂ ನಾಯಕತ್ವ ಮುಂದುವರೆಸುವ ಹೇಳಿಕೆ ನೀಡಿರಬಹುದು”

by Shwetha
July 13, 2025
0

ಬೆಂಗಳೂರು: ರಾಜಕೀಯದಲ್ಲಿ ನಿವೃತ್ತಿ ಎಂಬ ಪರಿಕಲ್ಪನೆ ಇಲ್ಲದ ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2028ರಲ್ಲೂ ತಮ್ಮ ನಾಯಕತ್ವ ಮುಂದುವರೆಯುತ್ತದೆ ಎಂದು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿರಬಹುದು ಎಂದು ಮಾಜಿ...

ವಾಣಿಜ್ಯ ತೆರಿಗೆ ಇಲಾಖೆಯಿಂದ ಸಿಹಿ ಸುದ್ದಿ: ಬೇಕರಿ, ಕಾಂಡಿಮೆಂಟ್ಸ್ ಮಾಲೀಕರಿಗೆ ತೆರಿಗೆ ವಿನಾಯಿತಿ!

ಮುಸ್ಲಿಮರು ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಧಾರ್ಮಿಕ ಗುಂಪು: ಪ್ಯೂ ಸಂಶೋಧನೆ

by Shwetha
July 13, 2025
0

ವಾಷಿಂಗ್ಟನ್ ಡಿ.ಸಿ.: 2010 ರಿಂದ 2020 ರ ಅವಧಿಯಲ್ಲಿ ಜಾಗತಿಕವಾಗಿ ಮುಸ್ಲಿಮರು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಧಾರ್ಮಿಕ ಗುಂಪಾಗಿ ಹೊರಹೊಮ್ಮಿದ್ದಾರೆ ಎಂದು ಪ್ಯೂ ಸಂಶೋಧನಾ ಕೇಂದ್ರದ...

ವಾಣಿಜ್ಯ ತೆರಿಗೆ ಇಲಾಖೆಯಿಂದ ಸಿಹಿ ಸುದ್ದಿ: ಬೇಕರಿ, ಕಾಂಡಿಮೆಂಟ್ಸ್ ಮಾಲೀಕರಿಗೆ ತೆರಿಗೆ ವಿನಾಯಿತಿ!

ವಾಣಿಜ್ಯ ತೆರಿಗೆ ಇಲಾಖೆಯಿಂದ ಸಿಹಿ ಸುದ್ದಿ: ಬೇಕರಿ, ಕಾಂಡಿಮೆಂಟ್ಸ್ ಮಾಲೀಕರಿಗೆ ತೆರಿಗೆ ವಿನಾಯಿತಿ!

by Shwetha
July 13, 2025
0

ನಗರದ ಬೇಕರಿ, ಜ್ಯೂಸ್ ಅಂಗಡಿ, ಕಾಂಡಿಮೆಂಟ್ಸ್ ಮಾಲೀಕರಿಗೆ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯು ಮಹತ್ವದ ಸ್ಪಷ್ಟನೆಯನ್ನು ನೀಡಿದೆ. ಆನ್‌ಲೈನ್ ಮೂಲಕ ಹಣ ಸ್ವೀಕರಿಸಿದ ಸಣ್ಣ ವ್ಯಾಪಾರಿಗಳಿಗೆ ಇಲಾಖೆಯು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram