ಮೈನೆ ಪ್ಯಾರ್ ಕಿಯಾ ಖ್ಯಾತಿಯ ನಟಿ ಭಾಗ್ಯಶ್ರೀ ಅವರ ಪುತ್ರಿ ಅವಂತಿಕಾ ದಸ್ಸಾನಿ (Avantika Dassani) ಕನ್ನಡದ ಮೂಲಕ ನಟಿಯಾಗಿ ಚಂದನವನಕ್ಕೆ ಪ್ರವೇಶ ಮಾಡುತ್ತಿದ್ದಾರೆ.
ಕನ್ನಡದ ನಾಗಶೇಖರ್ (Nagasekhar) ನಿರ್ದೇಶನದ ‘ಸಂಜು ವೆಡ್ಸ್ ಗೀತಾ’ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಅದರ ಹಿಂದೆಯೇ ನಾಗಶೇಖರ್ ತಮ್ಮ ಮುಂದಿನ ಪ್ರಾಜೆಕ್ಟನ್ನು ಅನೌನ್ಸ್ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು ಸೇರಿದಂತೆ 3 ಭಾಷೆಗಳಲ್ಲಿ, ಬಿಗ್ ಬಜೆಟ್ ನಲ್ಲಿ ಚಿತ್ರ ನಿರ್ಮಾಣ ಆಗಲು ತಯಾರಿ ನಡೆದಿದೆ.
ಈ ಚಿತ್ರದ ಹೆಸರನ್ನು ಕ್ಯೂ ಎಂದು ಇಡಲಾಗಿದೆ. ನಾಗಶೇಖರ್ ಮ್ಯಾಜಿಕ್ಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ. ನಾಗಶೇಖರ್ ನಿರ್ದೇಶನದೊಂದಿಗೆ ಕಥೆ, ಚಿತ್ರಕಥೆಯ ಜೊತೆಗೆ ಸಂಗೀತದ ಜವಾಬ್ದಾರಿ ಹೊತ್ತಿದ್ದಾರೆ. ರಾಮ್ ಚಿರು ಲೈನ್ ಪ್ರೊಡ್ಯೂಸರ್ ಆಗಿರುವ ಈ ಚಿತ್ರವನ್ನು ಭಾವನಾ ರವಿ ಬಿಡುಡಗೆ ಮಾಡುತ್ತಿದ್ದಾರೆ.
#ನಾಗಶೇಖರ್ ಅವರು, ಉಪೇಂದ್ರ ಅಣ್ಣನ ಪುತ್ರ ನಿರಂಜನ್ ಚಿತ್ರದ ನಾಯಕ. ಮುಂದಿನ ತಿಂಗಳಿಂದ ಈ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ಡಿ.ಜೆ. ಚಕ್ರವರ್ತಿ ಸಂಭಾಷಣೆ ಬರೆದಿದ್ದಾರೆ. ಸದ್ಯ ಬಾಲಿವುಡ್ ಬೆಡಗಿಯನ್ನು ಚಿತ್ರದ ಮೂಲಕ ಪರಿಚಯಿಸುತ್ತಿದ್ದಾರೆ.