22 ವರ್ಷದ ನಂತರ ತಾಯಿ ಮಡಿಲು ಸೇರಿದ ಮಗಳು

1 min read
Doter and Mother Saaksha tv

22 ವರ್ಷದ ನಂತರ ತಾಯಿ ಮಡಿಲು ಸೇರಿದ ಮಗಳು Saaksha tv

ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮದಲ್ಲೊಂದು ಅಪರೂಪದ ಘಟನೆ ನಡೆದಿದೆ. 22 ವರ್ಷಗಳ ಹಿಂದೆ ನಾಪತ್ತೆಯಾದ ಮಗಳು ಈಗ ಪ್ರತ್ಯಕ್ಷವಾಗಿದ್ದು ತನ್ನ ತಾಯಿ ಮಡಿಲು ಸೇರಿದ್ದಾಳೆ.

22 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಮಗಳನ್ನು ಕಂಡು ಭಾವುಕಳಾಗಿ ಬಾಚಿ ತಬ್ಬಿಕೊಂಡಿದ್ದಾಳೆ. ಅಂಜಲಿ ಎಂಬಾಕೆ ತನ್ನ 9ನೇ ವಯಸ್ಸಿನಲ್ಲಿ ಕಾಣೆಯಾಗಿದ್ದರು. ಕೇರಳದಲ್ಲಿ ಮನೆ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು.

ಇವರು ಕಳೆದ 3 ವರ್ಷಗಳಿಂದ ತಾಯಿಯನ್ನು ಹುಡುಕುತ್ತಿದ್ದರು. ಮೂಡಿಗೆರೆಯ ಸುತ್ತ ತಾಯಿಯನ್ನು ಹುಡುಕುವಾಗ ಮುದ್ರೆಮನೆಯಲ್ಲಿ ತಾಯಿಯನ್ನು ಕಂಡು ಪರಸ್ಪರ ತಬ್ಬಿ ಕಣ್ಣೀರಿಟ್ಟಿದ್ದಾರೆ.

ಆದರೆ ತಂದೆ- ತಾಯಿ ಮಗಳು ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರಲಿಲ್ಲ ಎಂದು ತಿಳಿದುಬಂದಿದೆ. ನಾಲ್ಕು ವರ್ಷಗಳ ಹಿಂದೆ ಅಂಜಲಿ ತಂದೆ ಮೃತಪಟ್ಟಿರುವದಾಗಿ, ಆಕೆಯ ತಾಯಿ ಮಾಹಿತಿ ನೀಡಿದ್ದಾರೆ. ತಾಯಿ ಸ್ವಿಚ್ಚೆಯಿಂದ ಮಗಳನ್ನು ಬಿಟ್ಟು ಬಂದಿರಬಹುದು ಎಂದು ಅನುಮಾನ ಮೂಡುತ್ತಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd