ADVERTISEMENT
Monday, June 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅರ್ಚಕರ ಮಕ್ಕಳಿಗೆ ಸಚಿವ ವಿ. ಸೋಮಣ್ಣ ಸಾಂತ್ವನ .. ಶೋಧ ಕಾರ್ಯಕ್ಕೆ ದಟ್ಟ ಮಂಜು ಅಡ್ಡಿ

admin by admin
August 10, 2020
in Newsbeat, Samagra karnataka, ರಾಜ್ಯ
Share on FacebookShare on TwitterShare on WhatsappShare on Telegram

ಅರ್ಚಕರ ಮಕ್ಕಳಿಗೆ ಸಚಿವ ವಿ. ಸೋಮಣ್ಣ ಸಾಂತ್ವನ .. ಶೋಧ ಕಾರ್ಯಕ್ಕೆ ದಟ್ಟ ಮಂಜು ಅಡ್ಡಿ

ಬ್ರಹ್ಮಗಿರಿ ಬೆಟ್ಟ ಭೂಕುಸಿತದಿಂದ ಭೂ ಸಮಾಧಿಯಾಗಿರುವ ಅರ್ಚಕ ನಾರಾಯಣಚಾರ್ಯ ಅವರ ಪುತ್ರಿಯರು
ಆಸ್ಟ್ರೇಲಿಯಾದಿಂದ ಆಗಮಿಸಿದ್ದಾರೆ. ತಮ್ಮ ತವರು ನೆಲಕ್ಕೆ ಕಾಲಿಟ್ಟಾಗ ಅಲ್ಲಿನ ಪರಿಸ್ಥಿತಿ ನೋಡಿ ಆಘಾತಕ್ಕೊಳಗಾದ್ರು. ಅಪ್ಪ ಅಮ್ಮ -ದೊಡ್ಡಪ್ಪ ಭೂ ಸಮಾಧಿಯಾಗಿದ್ದಾರೆ. ಇನ್ನು ತಾವು ಹುಟ್ಟಿ ಬೆಳೆದ ಮನೆ ಮತ್ತು ಅಂಗಳ ಯಾವುದು ಕೂಡ ಅಲ್ಲಿ ಇರಲಿಲ್ಲ. ಸಂಪೂರ್ಣ ಮಣ್ಣಿನಿಂದ ಅವೃತ್ತಿಯಾಗಿತ್ತು. ತಮ್ಮ ಮನೆ ಎಂಬುದಕ್ಕೆ ಸಣ್ಣ ಕುರುಹು ಕೂಡ ಅಲ್ಲಿರಲಿಲ್ಲ.

Related posts

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸತತ ಎರಡನೇ ಐಪಿಎಲ್ ಪ್ರಶಸ್ತಿ: ಫೈನಲ್ ನಲ್ಲಿ ಗುಜರಾತ್ ಟೈಟಾನ್ಸ್ ಮಣಿಸಿದ ಆರ್ ಸಿ ಬಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸತತ ಎರಡನೇ ಐಪಿಎಲ್ ಪ್ರಶಸ್ತಿ: ಫೈನಲ್ ನಲ್ಲಿ ಗುಜರಾತ್ ಟೈಟಾನ್ಸ್ ಮಣಿಸಿದ ಆರ್ ಸಿ ಬಿ

May 31, 2026
ಡಿಕೆಶಿ ಮನೆಗೆ ಸತೀಶ್ ಜಾರಕಿಹೊಳಿ ಎಂಟ್ರಿ! ಸಾಹುಕಾರ್ ಎಸೆದ ಡಬಲ್ ಕಾರ್ಡ್ ಹಿಂದೆ ಅಡಗಿದೆಯಾ ಬಿಗ್ ಪ್ಲಾನ್?

ಡಿಕೆಶಿ ಮನೆಗೆ ಸತೀಶ್ ಜಾರಕಿಹೊಳಿ ಎಂಟ್ರಿ! ಸಾಹುಕಾರ್ ಎಸೆದ ಡಬಲ್ ಕಾರ್ಡ್ ಹಿಂದೆ ಅಡಗಿದೆಯಾ ಬಿಗ್ ಪ್ಲಾನ್?

May 31, 2026

ಅಪ್ಪ – ಅಮ್ಮನನ್ನು ನೆನೆದು ಕಣ್ಣೀರಿಟ್ಟ ಪುತ್ರಿಯರಿಗೆ ಸಚಿವ ಸೋಮಣ್ಣ ಸಾಂತ್ವನ ಹೇಳಿದ್ದಾರೆ. ಮೃತ ದೇಹಗಳನ್ನು ತೆಗೆಯಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಎಸ್‍ಡಿಆರ್‍ಎಫ್, ಎನ್‍ಡಿಆರ್‍ಎಫ್ ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ಶೋಧ ಕಾರ್ಯದ ಎಲ್ಲಾ ಮಾಹಿತಿಗಳನ್ನು ಸಚಿವರು ಅರ್ಚಕರ ಪುತ್ರಿಯರಿಗೆ ತಿಳಿಸಿದ್ರು. ಇದಕ್ಕೆ ಪ್ರತಿಯಾಗಿ ಅರ್ಚಕರ ಪುತ್ರಿಯರು ಧನ್ಯವಾದ ಹೇಳಿದ್ದಾರೆ.

ಶೋಧ ಕಾರ್ಯದ ವೇಳೆ ಮನೆಯ ಕೆಲವೊಂದು ವಸ್ತುಗಳು, ಪುಸ್ತಕಗಳು ಪತ್ತೆಯಾಗಿವೆ. ನಿನ್ನೆ ಬಿಟ್ಟು ಬಿಟ್ಟು ಬರುತ್ತಿದ್ದ ಮಳೆಯಿಂದಾಗಿ ಶೋಧ ಕಾರ್ಯಕ್ಕೆ ತೊಂದರೆಯಾಗಿದ್ರೆ, ಇಂದು ಮಳೆ ನಿಂತಿದ್ರೂ ದಟ್ಟ ಮಂಜಿನಿಂದಾಗಿ ಶೋಧ ಕಾರ್ಯ ವಿಳಂಬವಾಗುತ್ತಿದೆ. ಆದ್ರೂ ಸಂಜೆಯ ವೇಳೆ ಮೃತ ದೇಹಗಳು ಪತ್ತೆಯಾಗಬಹುದು ಎಂಬ ನಿರೀಕ್ಷೆ ಇದೆ.
ಇನ್ನೊಂದೆಡೆ ಅರ್ಚಕ ನಾರಾಯಣಚಾರ್ ಅವರ ಪುತ್ರಿಯರಿಗೆ ಮತ್ತೊಂದು ಆಘಾತವನ್ನುಂಟು ಮಾಡಿದೆ. ಅರ್ಚಕರ ಮಕ್ಕಳನ್ನು ಕಾರಿನಲ್ಲಿ ಬಂದಿದ್ದು, ಇದೀಗ ಕಾರಿನ ಡ್ರೈವರ್‍ಗೆ ಕೊರೋನಾ ಸೋಂಕಿದೆ ಎಂಬ ಸುದ್ದಿಯೂ ಬರುತ್ತಿದೆ. ಮೊದಲೇ ಅಪ್ಪ – ಅಮ್ಮನನ್ನು ಕಳೆದುಕೊಂಡಿರುವ ದುಃಖ ಮತ್ತೊಂದೆಡೆ ಕೊರೋನಾ ಭಯ. ಹೀಗೆ ಪ್ರಕೃತಿಯ ಮುನಿಸಿಗೆ ನಾರಾಯಣಾಚಾರ್ ಅವರ ಕುಟುಂಬ ತತ್ತರಿಸಿ ಹೋಗಿದೆ.
ಇನ್ನು ಅರ್ಚಕರ ಮನೆಯಲ್ಲಿ ಸುಮಾರು 10 ಕ್ವಿಂಟಾಲ್ ಕಾಳು ಮೆಣಸು ಹಾಗೂ ಐದು ಕ್ವಿಂಟಾಲ್ ಏಲಕ್ಕಿ ಮೂಟೆಗಳಿದ್ದವು ಎಂದು ಅವರ ಕಾರಿನ ಡ್ರೈವರ್ ಮಾಹಿತಿ ನೀಡಿದ್ದಾರೆ.

Tags: bramagiriKODAGUMadikeriminister v. somannaNdrfsdrgtalakaveriv somanna
ShareTweetSendShare
Join us on:

Related Posts

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸತತ ಎರಡನೇ ಐಪಿಎಲ್ ಪ್ರಶಸ್ತಿ: ಫೈನಲ್ ನಲ್ಲಿ ಗುಜರಾತ್ ಟೈಟಾನ್ಸ್ ಮಣಿಸಿದ ಆರ್ ಸಿ ಬಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸತತ ಎರಡನೇ ಐಪಿಎಲ್ ಪ್ರಶಸ್ತಿ: ಫೈನಲ್ ನಲ್ಲಿ ಗುಜರಾತ್ ಟೈಟಾನ್ಸ್ ಮಣಿಸಿದ ಆರ್ ಸಿ ಬಿ

by Shwetha
May 31, 2026
0

ಐಪಿಎಲ್ 2026ರ ಬಹುನಿರೀಕ್ಷಿತ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು ಬಗ್ಗುಬಡಿಯುವ ಮೂಲಕ ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ...

ಡಿಕೆಶಿ ಮನೆಗೆ ಸತೀಶ್ ಜಾರಕಿಹೊಳಿ ಎಂಟ್ರಿ! ಸಾಹುಕಾರ್ ಎಸೆದ ಡಬಲ್ ಕಾರ್ಡ್ ಹಿಂದೆ ಅಡಗಿದೆಯಾ ಬಿಗ್ ಪ್ಲಾನ್?

ಡಿಕೆಶಿ ಮನೆಗೆ ಸತೀಶ್ ಜಾರಕಿಹೊಳಿ ಎಂಟ್ರಿ! ಸಾಹುಕಾರ್ ಎಸೆದ ಡಬಲ್ ಕಾರ್ಡ್ ಹಿಂದೆ ಅಡಗಿದೆಯಾ ಬಿಗ್ ಪ್ಲಾನ್?

by Shwetha
May 31, 2026
0

ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಈಗ ಸಂಪುಟ ಕಸರತ್ತಿನ ಸುನಾಮಿ ಎದ್ದಿದೆ. ದೆಹಲಿಯಿಂದ ಸಚಿವರ ಪಟ್ಟಿಯನ್ನ ಹೊತ್ತು ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರಿಗೆ ಕಾಲಿಡುತ್ತಿದ್ದಂತೆ, ಅವರ ಸದಾಶಿವನಗರದ ನಿವಾಸ...

40 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್

40 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್

by Shwetha
May 31, 2026
0

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಶಿಕ್ಷಣ ಇಲಾಖೆ ಮಹತ್ವದ ಕ್ರಮ ಕೈಗೊಂಡಿದ್ದು, 40,067 ಅತಿಥಿ ಶಿಕ್ಷಕರ ನೇಮಕಾತಿಗೆ ಅಧಿಕೃತ ಆದೇಶ...

ಕರ್ನಾಟಕಕ್ಕೆ ಹೊಸ ಸಾರಥಿ : ಒಂದೇ ಕಾರಿನಲ್ಲಿ ರಾಜಭವನಕ್ಕೆ ತೆರಳಿ ಒಗ್ಗಟ್ಟು ಪ್ರದರ್ಶಿಸಿದ ಸಿದ್ದು ಡಿಕೆಶಿ ಜೋಡಿ

ಕರ್ನಾಟಕಕ್ಕೆ ಹೊಸ ಸಾರಥಿ : ಒಂದೇ ಕಾರಿನಲ್ಲಿ ರಾಜಭವನಕ್ಕೆ ತೆರಳಿ ಒಗ್ಗಟ್ಟು ಪ್ರದರ್ಶಿಸಿದ ಸಿದ್ದು ಡಿಕೆಶಿ ಜೋಡಿ

by Shwetha
May 31, 2026
0

ಬೆಂಗಳೂರು: ರಾಜ್ಯ ರಾಜಕಾರಣದ ಕುತೂಹಲಕ್ಕೆ ತೆರೆ ಬಿದ್ದಿದ್ದು, ನೂತನ ಸರ್ಕಾರ ರಚನೆಯ ಪ್ರಕ್ರಿಯೆಗಳು ಅಧಿಕೃತವಾಗಿ ಚುರುಕುಗೊಂಡಿವೆ. ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿ.ಕೆ. ಶಿವಕುಮಾರ್...

ನೀಟ್ ಪರೀಕ್ಷಾ ವಿಧಾನದಲ್ಲಿ ಭಾರಿ ಬದಲಾವಣೆ.. NTA ಮಹತ್ವದ ಘೋಷಣೆ

ನೀಟ್ ಪರೀಕ್ಷಾ ವಿಧಾನದಲ್ಲಿ ಭಾರಿ ಬದಲಾವಣೆ.. NTA ಮಹತ್ವದ ಘೋಷಣೆ

by Shwetha
May 31, 2026
0

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿಚಾರಣೆ ನಡೆಯುತ್ತಿರುವ ನಡುವೆಯೇ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹತ್ವದ ಘೋಷಣೆ ಮಾಡಿದೆ. ಮುಂದಿನ ವರ್ಷದಿಂದ NEET ಪರೀಕ್ಷೆಯನ್ನು ಸಂಪೂರ್ಣವಾಗಿ ಕಂಪ್ಯೂಟರ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram