ಮೈಸೂರು: ಕೊರೊನಾದಿಂದ ಸಾವನ್ನಪ್ಪಿದವರನ್ನು ಸತ್ತ ನಾಯಿಗಳನ್ನ ಎಳೆದುಕೊಂಡು ಹೋಗುವ ರೀತಿಯಲ್ಲಿ ಮನುಷ್ಯರನ್ನು ಎಳೆದುಕೊಂಡು ಹೋಗಿ ಬಿಸಾಡಿದ್ದಾರೆ ಎಂದು ಆರೋಪಿಸಿ ಮೈಸೂರಿನಲ್ಲಿ ಕನ್ನಡ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕೊರೊನಾದಿಂದ ಸಾವನ್ನಪ್ಪಿರುವರನ್ನು ಕೀಳಾಗಿ ಕಾಣುತ್ತಿರುವ ಸರ್ಕಾರದ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ಮಾಡಿದರು.
ಘಟನೆಯನ್ನು ನೋಡಿದ ಜನ ಭಯಭೀತರಾಗಿದ್ದಾರೆ. ಕೊರೊನಾದಿಂದ ಸತ್ತವರಿಗೆ ಕರುಣೆ ತೋರಿಸಿ ಅವರ ಶವ ಸಂಸ್ಕಾರವನ್ನು ದೂರದಿಂದ ಅವರ ಕುಟುಂಬದವರು ನೋಡುವುದಕ್ಕೆ ಅವಕಾಶ ಮಾಡಿಕೊಡಿ. ಮಾನವೀಯತೆಗೆ ಬೆಲೆ ಕೊಡಿ ಎಂದು ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ ಮನವಿ ಮಾಡಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್ ; ಪ್ಯಾರಾ ಅಥ್ಲೀಟ್ ಶಿಲ್ಪಾ ಅವರನ್ನು ಗೌರವಿಸಿದ ಹೆಚ್.ಡಿ.ಕುಮಾರಸ್ವಾಮಿ
ಕಾಮನ್‌ವೆಲ್ತ್ ಗೇಮ್ಸ್ ; ಪ್ಯಾರಾ ಅಥ್ಲೀಟ್ ಶಿಲ್ಪಾ ಅವರನ್ನು ಗೌರವಿಸಿದ ಹೆಚ್.ಡಿ.ಕುಮಾರಸ್ವಾಮಿ ನವದೆಹಲಿಯ ಸಚಿವರ ನಿವಾಸದಲ್ಲಿ ಭೇಟಿ; ನಿಮ್ಮ ಸಾಧನೆ ಪ್ರೇರಣಾದಾಯಕ ಎಂದ ಕೇಂದ್ರ ಸಚಿವರು ಶಿಲ್ಪಾ...








