ಶಾಲೆಗಳನ್ನು ಬಂದ್ ಮಾಡೋದು ಡಿಸಿ ಗಳಿಗೆ ಬಿಟ್ಟದ್ದು..

1 min read
BC Nagesh Saaksha_tv

ಶಾಲೆಗಳನ್ನು ಬಂದ್ ಮಾಡೋದು ಡಿಸಿ ಗಳಿಗೆ ಬಿಟ್ಟದ್ದು.. Saaksha Tv

ಬೆಂಗಳೂರು: ಕೊರೊನಾ ಸೋಂಕು ಕಳೆದ ಎರಡು ಅಲೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿತ್ತು. ಈ ಸಮಯದಲ್ಲಿ ಶಾಲೆಗಳನ್ನು ಬಂದ್ ಆಗಿದ್ದು, ಈಗ  ಕೊರೊನಾ ಸೋಂಕಿತ  ವಾಸ್ತವವನ್ನು ನೋಡಿಕೊಂಡು ರಾಜ್ಯದಲ್ಲಿ ಶಾಲೆಗಳನ್ನು ನಡೆಸಲು ತೀರ್ಮಾನ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಮಾಹಿತಿ ನೀಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಪ್ರಕರಣಗಳು  ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನಲೆ ಮಂಗಳವಾರ ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದಾರೆ. ಕೋವಿಡ್ ಪಾಸಿಟಿವಿಟಿ ರೇಟ್‍ನಲ್ಲಿ ಮಕ್ಕಳ ಆರೋಗ್ಯ ನೋಡಿಕೊಂಡು ತೀರ್ಮಾನ ಕೈಗೊಳ್ಳಲು ಸೂಚಿಸಿದ್ದಾರೆ ಎಂದು ತಿಳಿಸಿದರು.

School Saaksha Tv

ಒಂದೂವರೆ ವರ್ಷದಿಂದ ರಾಜ್ಯದಲ್ಲಿ ಶಾಲೆಗಳನ್ನು ಮುಚ್ಚಿದ್ದು, ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ತೊಂದರೆಯಾಗಿದೆ. ಆದರೆ ಈಗ ಕಳೆದ 4 ತಿಂಗಳಿನಿಂದ ಸತತ ಪ್ರಯತ್ನ ನಡೆಸಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಶಾಲೆಗಳನ್ನು ನಡೆಸುವ ತೀರ್ಮಾನ ಇದೆ. ಆದರೆ ಕೊರೊನಾ 3ನೇ ಅಲೆಯಿಂದ ಮಕ್ಕಳ ಮೇಲೆ ಯಾವುದೇ ಪರಿಣಾಮ ಬೀರಬಾರದು. ಶಿಕ್ಷಣ ಇಲಾಖೆ 1, 2ನೇ ಅಲೆಯ ಪಾಸಿಟಿವಿಟಿ ರೇಟ್ ರಿವ್ಯೂ ಮಾಡಿದಾಗ ಸಾಕಷ್ಟು ತಾಲೂಕಿನಲ್ಲಿ ಪಾಸಿಟಿವಿಟಿ ರೇಟ್ ಕಮ್ಮಿ ಇದೆ ಎಂದು ಹೇಳಿದರು.

117 ತಾಲೂಕುಗಳಲ್ಲಿ ಪಾಸಿಟಿವಿಟಿ ರೇಟ್ ಶೇ. 1ಕ್ಕಿಂತ ಕಮ್ಮಿ ಇದೆ. ಜಿಲ್ಲಾಧಿಕಾರಿಗೆ ಪಾಸಿಟಿವಿಟಿ ರೇಟ್ ನೋಡಿಕೊಂಡು, ಪರಿಸ್ಥಿತಿಗೆ ಅನುಗುಣವಾಗಿ ಶಾಲೆಗಳನ್ನು ಬಂದ್ ಮಾಡುವ ಜವಾಬ್ದಾರಿ ನೀಡಲಾಗಿದೆ. ಬೆಂಗಳೂರಿನಲ್ಲಿ  ಪಾಸಿಟಿವ್ ರೇಟ್ ಏರುತ್ತಿದೆ, ಆದರೂ ಕೂಡ 10, 11, 12 ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ಮಾಡಬೇಕು. ಹೀಗಾಗಿ ಎಚ್ಚರಿಕೆ ವಹಿಸಿ ಶಾಲೆ ನಡೆಸಲಾಗುತ್ತದೆ ಎಂದು ನುಡಿದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd