ADVERTISEMENT
Sunday, May 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ರೈತ ಸಂಗಾತಿಗಳ ಕಷ್ಟ ಕಾರ್ಪಣ್ಯ ಆಲಿಸಲು ದಯವಿಟ್ಟು ಬನ್ನಿ:

Shwetha by Shwetha
November 22, 2020
in Newsbeat, Samagra karnataka, ನ್ಯೂಸ್ ಬೀಟ್, ರಾಜ್ಯ
sanekere Chitradurga
Share on FacebookShare on TwitterShare on WhatsappShare on Telegram

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ರೈತ ಸಂಗಾತಿಗಳ ಕಷ್ಟ ಕಾರ್ಪಣ್ಯ ಆಲಿಸಲು ದಯವಿಟ್ಟು ಬನ್ನಿ: sanekere Chitradurga

ಚಿತ್ರದುರ್ಗ,ನವೆಂಬರ್22: ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಸಾಣೆಕೆರೆ ಗ್ರಾಮಪಂಚಾಯತಿ ವ್ಯಾಪ್ತಿಯ ಕಾಪರಹಳ್ಳಿ, ಹೆಗ್ಗೆರೆ, ಜಡೆಕುಂಟೆ, ಹುಲಿಕುಂಟೆ, ಕಂದಕೆರೆ, ಗೊಲ್ಲಹಳ್ಳಿ ಸೇರಿದಂತೆ ಎಂಟು ಹತ್ತು ಹಳ್ಳಿಗಳ ರೈತರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಇದಕ್ಕೆ ಕಾರಣ ಹೆಗ್ಗೆರೆಯ ರಾಷ್ಟ್ರೀಯ ಹೆದ್ದಾರಿ 150ರಲ್ಲಿ 2007ರಿಂದ ಕಾರ್ಯಾಚರಣೆ ನಡೆಸುತ್ತಿರುವ ಪ್ರಭಾವಿ ಹಣವಂತ ಆರ್. ಪ್ರವೀಣ್ ಚಂದ್ರ ಒಡೆತನದ ಪ್ರಕಾಶ್ ಸ್ಪಾಂಜ್ ಐರನ್ ಪವರ್ ಪ್ರೈವೆಟ್ ಲಿಮಿಟೆಡ್. sanekere Chitradurga
sanekere Chitradurga

Related posts

ಕಾಂಗ್ರೆಸ್ ಕೋಟೆಯಲ್ಲಿ ಭಿನ್ನಮತದ ಬಿರುಗಾಳಿ: ಕೆಪಿಸಿಸಿ ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ ಡಿಕೆ ಶಿವಕುಮಾರ್ ಆಪರೇಷನ್ ಕ್ಲೀನ್

ಅಸ್ಸಾಂ ಸೇರಿ ಐದೂ ರಾಜ್ಯಗಳಲ್ಲಿ ಗೆಲುವಿನ ನಗೆ ಬೀರಲಿದ್ದೇವೆ ಸಮೀಕ್ಷೆಗಳ ವರದಿ ಉಲ್ಟಾ ಆಗುವುದು ಗ್ಯಾರಂಟಿ ಎಂದ ಡಿಕೆಶಿ

May 3, 2026
ಜನಸಾಮಾನ್ಯರ ಜೇಬಿಗೆ ಭಾರಿ ಕತ್ತರಿ ಅಡುಗೆ ಎಣ್ಣೆ ದರ ಗಗನಕ್ಕೆ ಬೆಲೆ ಏರಿಕೆಯ ಬಿಸಿಗೆ ಹೈರಾಣಾದ ಸಾರ್ವಜನಿಕರು

ಜನಸಾಮಾನ್ಯರ ಜೇಬಿಗೆ ಭಾರಿ ಕತ್ತರಿ ಅಡುಗೆ ಎಣ್ಣೆ ದರ ಗಗನಕ್ಕೆ ಬೆಲೆ ಏರಿಕೆಯ ಬಿಸಿಗೆ ಹೈರಾಣಾದ ಸಾರ್ವಜನಿಕರು

May 3, 2026

ಈ ಕಾರ್ಖಾನೆಯಿಂದ ಹೊರಬರುತ್ತಿರುವ ಕಲುಷಿತ ನೀರು ಕುಡಿದು ಜಾನುವಾರುಗಳು ಸಾಯುತ್ತಿವೆ. ರಾಸಾಯನಿಕ ತ್ಯಾಜ್ಯದಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದ್ದು, ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ರೈತ ರೈತ ಎಂದು ಭಾಷಣ ಬಿಗಿದು ಓಟು ಗಿಟ್ಟಿಸಿಕೊಂಡು ವಿಧಾನಸೌಧದ ಮೂರನೆಯ ಮಹಡಿ ಹತ್ತಿದವರ ಕಿವಿ ಕೊಂಚ ಮಂದ. ಗಟ್ಟಿಯಾದ ಧ್ವನಿಯಲ್ಲಿ ನಾವು ಕೂಗಿ ಕಿರುಚಿ ಹೇಳಬೇಕಿದೆ ರೈತ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ನೋಡ ಬನ್ನಿ . ನಮ ಧ್ವನಿಗೆ ನಿಮ್ಮ ಧ್ವನಿಗಳೂ ಜೊತೆಯಾಗಲಿ. ಬನ್ನಿ ನಮ್ಮ ಸಭೆಯಲ್ಲಿ ಭಾಗವಹಿಸಿ. ನಮ್ಮ ಹೋರಾಟಕ್ಕೆ ದೈಹಿಕ ಮಾನಸಿಕ ನೈತಿಕ ಬೆಂಬಲ ನೀಡಿ. ಭವಿಷ್ಯದಲ್ಲಿ ನಮ್ಮ ಬದುಕು ಭರವಸೆಯ ಕುರಿತಾಗಿ ಚರ್ಚಿಸೋಣ, ಚಿಂತಿಸೋಣ, ತಾರ್ಕಿಕ ಶಾಶ್ವತ ಪರಿಹಾರ ಕಂಡುಕೊಳ್ಳೋಣ. ನಮ್ಮ ಕಷ್ಟ ಕಾರ್ಪಣ್ಯಗಳನ್ನು ಕೇಳುವ ಕೃಪೆ ಮಾಡಿ. ನಿಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿ ಎಂದು ನೊಂದ ರೈತರ ಹಿತರಕ್ಷಣಾ ಸಮಿತಿ ಮನವಿ ‌ಮಾಡಿದೆ.

ಈ ಕುರಿತು ಎಸ್.ಆರ್ ಹಿರೇಮಠ ಸಾಮಾಜಿಕ ಹೋರಾಟಗಾರರು ಸಮಾಜ ಪರಿವರ್ತನಾ ಸಮುದಾಯ ಧಾರವಾಡ ಅವರು, ಪ್ರಭುತ್ವವೆನ್ನುವುದು ಹಣವಂತರ ಪಾಲಿಗೆ ಬಂಗಾರದ ಖಜಾನೆ; ಬಡವರು ದೀನರು ಅಸಹಾಯಕರು ರೈತರ ಪಾಲಿಗೆ ಯಾವತ್ತೂ ಮರೀಚಿಕೆಯೇ ಎನ್ನುವ ಅಭಿಪ್ರಾಯದೊಂದಿಗೆ ಈ ಹೋರಾಟಕ್ಕೆ ಸಾಥ್ ನೀಡಿದ್ದಾರೆ.

ಚಿತ್ರನಟ ಮತ್ತು ಸಾಮಾಜಿಕ ಹೋರಾಟಗಾರ ಯುವ ಮುಂದಾಳು ಚೇತನ್ ಯಾವುದೇ ಹೋರಾಟವಾದರೂ ಅದು ಜನಕೇಂದ್ರಿತವಾಗಿರಬೇಕು. ಜನಜಾಗೃತಿ ಉಂಟುಮಾಡಬೇಕು. ಜನರ ಅಳಲು ಅಹವಾಲುಗಳ ಸುತ್ತಲಿನ ಧ್ವನಿ ಹೊರಡಿಸುವಂತಿರಬೇಕು. ಆ ಧ್ವನಿ ಆಳುವ ದೊರೆಗಳ ಕಿವಿ ಮುಟ್ಟಬೇಕು ಎನ್ನುವ ಮೂಲಕ ರೈತ ಚಳುವಳಿಗೆ ತಾವು ಸದಾ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.

ಸಾಮಾಜಿಕ ನ್ಯಾಯದ ತಕ್ಕಡಿ ಸದಾ ಪ್ರಭಾವಿಗಳ ಕಡೆಯೇ ತೂಗುತ್ತದೆ. ಆದಾಯದ ಲಾಭ ಪ್ರಭಾವಿಗಳಿಗೆ; ನಷ್ಟ ಮಾತ್ರ ಅಮಾಯಕ ರೈತರಿಗೆ. ಅಧಿಕಾರಶಾಹಿ ಅಮೃತ ಪ್ರಭಾವಿ ದುಡ್ಡಿನ ಧನಿಗಳಿಗೆ; ಜ್ವಲಂತ ಸಮಸ್ಯೆಗಳ ಹಾಲಾಹಲ ರೈತರ ಪಾಲಿಗೆ. ಇದು ಈ ಸಮಾಜ ಸೃಷ್ಟಿಸಿರುವ ಕರಾಳ ವ್ಯವಸ್ಥೆ ಎಂದು ಯುವ ಮುಂದಾಳು, ದಾವಣಗೆರೆ ರೈತ ನಾಯಕರಾದ ತೇಜಸ್ವಿ ಪಟೇಲ್ ತಮ್ಮ ಅಭಿಮತ ವ್ಯಕ್ತಪಡಿಸಿ ಈ ರೈತರ ಜೊತೆ ನಿಂತಿದ್ದಾರೆ.
sanekere Chitradurga

ಈಗ ನಿಮ್ಮ ಸರದಿ. ದಯವಿಟ್ಟು ರೈತ ಸಂಕಷ್ಟದಲ್ಲಿರುವ ಈ ನಿರ್ಣಾಯಕ ಕ್ಷಣದಲ್ಲಿ ರೈತನ ಪರ ನಿಲ್ಲಿ. ರೈತ ಮಾತ್ರ ಈ ಸಮಾಜಕ್ಕೆ ನಾಡಿಗೆ ದೇಶಕ್ಕೆ ಅನ್ನ ನೀಡಬಲ್ಲನೇ ಹೊರತು ಪ್ರವೀಣ್ ಚಂದ್ರನಂತಹ ಉದ್ಯಮಿಯಲ್ಲ. ಪ್ರಕಾಶ್ ಸ್ಪಾಂಜ್ ಐರನ್ ಕಾರ್ಖಾನೆಯ ದುರಹಂಕಾರಿ ನಡವಳಿಕೆ ಹೇಗೆ ರೈತರಿಗೆ ಮರಣ ಶಾಸನವಾಗಿದೆ ಎನ್ನುವುದುನವರಿಕೆಯಾಗಬೇಕಿದ್ದರೇ ನೀವು ಬರಲೇಬೇಕು. ಸ್ವಾಭಿಮಾನಿ ನೇಗಿಲಯೋಗಿ ಅನ್ನದಾತರ ಅಹವಾಲು ಕೇಳಲೇಬೇಕು. ರೈತರಿದ್ದರೇ ಮಾತ್ರ ನಾವು ಮತ್ತು ನೀವು. ನಿಮ್ಮ ನಿರೀಕ್ಷೆಯಲ್ಲಿದ್ದಾರೆ ನೊಂದ ರೈತರು.

ದಶಕಗಳಿಂದ ನಡೆಯುತ್ತಿದೆ ಶ್ರಮಜೀವಿ ರೈತರ ಮೇಲೆ ನಿರಂತರ ದೌರ್ಜನ್ಯ; ಚಿತ್ರದುರ್ಗದ ಅನ್ನದಾತರಿಗೆ ಅನ್ಯಾಯವೆಸಗುತ್ತಿದ್ದಾರಾ ಗಣಿ ಉದ್ಯಮಿ ಪ್ರವೀಣ್ ಚಂದ್ರ?

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಸೋರೆಕಾಯಿ ತಿನ್ನಲು 6 ಉತ್ತಮ ಕಾರಣಗಳುhttps://t.co/76fhiw24zx

— Saaksha TV (@SaakshaTv) November 21, 2020

10 /12 ನೇ ತರಗತಿ ಪಾಸಾದವರಿಗೆ ಕರ್ನಾಟಕ ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ https://t.co/70vCUmpNX0

— Saaksha TV (@SaakshaTv) November 21, 2020

10 ಮತ್ತು 12 ನೇ ತರಗತಿ ಪರೀಕ್ಷೆಗಳು ಖಂಡಿತವಾಗಿಯೂ ನಡೆಯಲಿದೆ – ಅನುರಾಗ್ ತ್ರಿಪಾಠಿhttps://t.co/S7BwXF7H7P

— Saaksha TV (@SaakshaTv) November 21, 2020

 

Tags: chitradurgasanekere
ShareTweetSendShare
Join us on:

Related Posts

ಕಾಂಗ್ರೆಸ್ ಕೋಟೆಯಲ್ಲಿ ಭಿನ್ನಮತದ ಬಿರುಗಾಳಿ: ಕೆಪಿಸಿಸಿ ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ ಡಿಕೆ ಶಿವಕುಮಾರ್ ಆಪರೇಷನ್ ಕ್ಲೀನ್

ಅಸ್ಸಾಂ ಸೇರಿ ಐದೂ ರಾಜ್ಯಗಳಲ್ಲಿ ಗೆಲುವಿನ ನಗೆ ಬೀರಲಿದ್ದೇವೆ ಸಮೀಕ್ಷೆಗಳ ವರದಿ ಉಲ್ಟಾ ಆಗುವುದು ಗ್ಯಾರಂಟಿ ಎಂದ ಡಿಕೆಶಿ

by Shwetha
May 3, 2026
0

ಚುನಾವಣೋತ್ತರ ಸಮೀಕ್ಷೆಗಳು ಕೇವಲ ಅಂಕಿಅಂಶಗಳ ಆಟವಾಗಿದ್ದು ಅವುಗಳ ಮೇಲೆ ನನಗೆ ಕಿಂಚಿತ್ತೂ ನಂಬಿಕೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ....

ಜನಸಾಮಾನ್ಯರ ಜೇಬಿಗೆ ಭಾರಿ ಕತ್ತರಿ ಅಡುಗೆ ಎಣ್ಣೆ ದರ ಗಗನಕ್ಕೆ ಬೆಲೆ ಏರಿಕೆಯ ಬಿಸಿಗೆ ಹೈರಾಣಾದ ಸಾರ್ವಜನಿಕರು

ಜನಸಾಮಾನ್ಯರ ಜೇಬಿಗೆ ಭಾರಿ ಕತ್ತರಿ ಅಡುಗೆ ಎಣ್ಣೆ ದರ ಗಗನಕ್ಕೆ ಬೆಲೆ ಏರಿಕೆಯ ಬಿಸಿಗೆ ಹೈರಾಣಾದ ಸಾರ್ವಜನಿಕರು

by Shwetha
May 3, 2026
0

ರಾಜ್ಯದ ಜನಸಾಮಾನ್ಯರಿಗೆ ಈಗ ಬೆಲೆ ಏರಿಕೆಯ ಬಿಸಿ ಜೋರಾಗಿ ತಟ್ಟುತ್ತಿದೆ. ಈಗಾಗಲೇ ಅಡುಗೆ ಅನಿಲ ಮತ್ತು ತರಕಾರಿಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಈಗ ಅಡುಗೆ ಎಣ್ಣೆಯ...

ಯುದ್ಧ ಮತ್ತೆ ಆರಂಭವಾಗಬಹುದು: ಇರಾನ್ ಎಚ್ಚರಿಕೆ

ಯುದ್ಧ ಮತ್ತೆ ಆರಂಭವಾಗಬಹುದು: ಇರಾನ್ ಎಚ್ಚರಿಕೆ

by Shwetha
May 3, 2026
0

ಅಮೆರಿಕದೊಂದಿಗೆ ಯುದ್ಧ ಮತ್ತೆ ಆರಂಭವಾಗುವ ಸಾಧ್ಯತೆ ಇದೆ ಎಂದು ಇರಾನ್‌ನ ಹಿರಿಯ ಮಿಲಿಟರಿ ಅಧಿಕಾರಿ ಆಸಾದಿ ಎಚ್ಚರಿಕೆ ನೀಡಿದ್ದಾರೆ. ಅವರ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಯಾವುದೇ ಒಪ್ಪಂದಗಳಿಗೆ...

ರಾಜ್ ಕುಮಾರ್ ಅಭಿಮಾನದ ಹೆಸರಲ್ಲಿ ಗೂಂಡಾಗಿರಿ ಮಾಡಬೇಡಿ ಚೇತನ್ ಅಹಿಂಸಾ ಆಕ್ರೋಶ

ಸಾ ರಾ ಗೋವಿಂದು ಅಣ್ಣಾವ್ರ ಹೆಸರು ಕೆಡಿಸುತ್ತಿದ್ದಾರೆ ನಟ ಚೇತನ್ ಅಹಿಂಸಾ ಕಿಡಿ: ಮನೆ ಮುತ್ತಿಗೆ ಹಾಕಿದವರ ವಿರುದ್ಧ ಪೊಲೀಸ್ ದೂರು ದಾಖಲು

by Shwetha
May 3, 2026
0

ಬೆಂಗಳೂರು: ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಮತ್ತು ಕನ್ನಡ ಪರ ಸಂಘಟನೆಗಳ ನಡುವಿನ ಸಂಘರ್ಷ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವರನಟ ಡಾ. ರಾಜ್...

ಬೆಂಗಳೂರು ಹೋಟೆಲ್ ಬೆಲೆ ಏರಿಕೆ: ಗ್ರಾಹಕರಿಗೆ ಮತ್ತಷ್ಟು ಹೊರೆ

ಬೆಂಗಳೂರು ಹೋಟೆಲ್ ಬೆಲೆ ಏರಿಕೆ: ಗ್ರಾಹಕರಿಗೆ ಮತ್ತಷ್ಟು ಹೊರೆ

by Shwetha
May 3, 2026
0

ಬೆಂಗಳೂರು ನಗರದ ಹೋಟೆಲ್‌ಗಳಲ್ಲಿ ಊಟ ಮಾಡುವವರಿಗೆ ಇದೀಗ ಮತ್ತಷ್ಟು ಖರ್ಚು ಎದುರಾಗಲಿದೆ. ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯಲ್ಲಿ ಭಾರೀ ಏರಿಕೆಯಾದ ಹಿನ್ನೆಲೆಯಲ್ಲಿ, ಹೋಟೆಲ್ ಮಾಲೀಕರು ತಮ್ಮ ಮೆನು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram