ಕೊರೊನಾದಿಂದ ಬೀದಿಗೆ ಬಂದ ಅಂಗವಿಕಲನ ಕುಟುಂಬ
1 min read
ಕೊರೊನಾದಿಂದ ಬೀದಿಗೆ ಬಂದ ಅಂಗವಿಕಲನ ಕುಟುಂಬ
ಕರೋನಾ ಮಹಾಮಾರಿ ಎರಡು ವರ್ಷಗಳ ಹಿಂದೆ 2019ರಲ್ಲಿ ಚೀನಾದ ವೂಹಾಂಗ್ ನಲ್ಲಿ ಹುಟ್ಟಿಕೊಂಡಿತು. ಇದು ಮುಂದೆ ಜಗತ್ತಿನಾದ್ಯಂತ ವ್ಯಾಪಿಸಿತು. ಹಾಗೆ ಭಾರತಕ್ಕು ಕಾಲಿಟ್ಟಿತು. ವಿದೇಶಿ ಪ್ರಯಾಣಿಕರಿಂದ ಕೇರಳಕ್ಕೆ ಕಾಲಿಟ್ಟ ಸೋಂಕು ದೇಶದ ತುಂಬೆಲ್ಲ ಹಬ್ಬಿತು. ಈ ಮಹಾಮಾರಿಯನ್ನು ನಿಯಂತ್ರಿಸಲು ಕೇಂದ್ರ ಸರಕಾರ ಲೊಕಡೌನ್ ಮಾಡಿತು. ಈ ಲಾಕಡೌನ್ ನಲ್ಲಿ ಅನೇಕ ಜನರು ಸಂಕಷ್ಟ ಎದುರಿಸಿದರು.
ಸಾಕಷ್ಟು ಜನ ಉದ್ಯೋಗವನ್ನು ಕಳೆದುಕೊಂಡರು, ಊರನ್ನು ತೊರೆದಿದ್ದಾರೆ, ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸಿದರು. ಅನೇಕ ಜನರು ಬೀದಿಗೆ ಬಂದರು. ಹೀಗೆ ಬೀದಿಗೆ ಬಂದ ಜನರಲ್ಲಿ ಕಲ್ಬುರ್ಗಿಯ ಕುಟುಂಬ ಒಂದು. ಈ ಕುಟುಂಬದ ಸದ್ಯದ ಪರಿಸ್ಥಿತಿ ಹೃದಯ ಕಲುಕುವಂತಿದೆ. ಇವರು ಮೂಲತಃ ಕಲ್ಬುರ್ಗಿಯವರಾಗಿದ್ದು ಸದ್ಯ ಕಳೆದ 5 ವರ್ಷಗಳಿಂದ ಬೆಂಗಳೂರಿನ ನಾಗರಬಾವಿಯಲ್ಲಿ ವಾಸಿಸುತ್ತಿದ್ದಾರೆ. ಇವರು ಕೊರೊನಾ ಬರುವ ಮುಂಚೆ ಚೆನ್ನಾಗಿಯೇ ಇದ್ದರು.
ಈ ಕುಟುಂಬದ ಒಡೆಯನು ಅಂಗವಿಕಲನಾಗಿದ್ದಾರು ಎದೆಗುಂದದೆ ಸಂಸಾರವನ್ನು ಚೆನ್ನಾಗಿಯೇ ನಡೆಸಿಕೊಂಡು ಹೋಗುತ್ತಿದ್ದ. ಛಲ ಬಿಡದ ಹಠವಾದಿಯಂತೆ ಪ್ರತಿನಿತ್ಯ ಆಟೋ ಓಡಿಸಿ ಜೀವನ ಸಾಗುಸುತ್ತಿದ್ದನು. ಇತನಿಗೆ ಪತ್ನಿ, ತಾಯಿ, ಮಗ ನಾಲ್ಕು ಜನ ಸಂಬಂಧಿಗಳಿದ್ದಾರೆ. ಮಗನನ್ನು ಖಾಸಗಿ ಶಾಲೆಗೆ ದಾಖಲಿಸಿ ಉತ್ತಮ ವಿದ್ಯಾಭ್ಯಾಸ ನೀಡುತ್ತಿದ್ದ. ಬಹಳಷ್ಟು ಖುಷಿಯಿಂದ ಇದ್ದ ಸಂಸಾರಕ್ಕೆ ಕರೋನಾ ಮಹಾಮಾರಿ ಬಿರುಗಾಳಿಯಂತೆ ಒಕ್ಕರಿಸಿತು.
ಕೊರೊನಾ ಮೊದಲನೇ ಅಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಮಾಡಲಾಯಿತು. ಈ ಸಮಯದಲ್ಲಿ ದುಡಿಮೆ ಇಲ್ಲದಿದ್ದರು ಹಿಂದೆ ಸಂಪಾದಿಸಿ ಉಳಿಸಿದ ಹಣದಲ್ಲಿ ಕೆಲವು ದಿನಗಳ ಕಾಲ ಸಂಸಾರ ನಡೆಸಿದರು, ಅನುಭವಿಗಳ ಮಾತಿನಂತೆ ಕೂತು ಉಂಡರೆ ಕುಡಿಕೆ ಹೊನ್ನು ಸಾಲದು ಎಂಬಂತೆ ಉಳಿಸಿದ ಹಣ ತೀರಿಹೋಯಿತು. ಆಗ ಕೆಲವೊಂದಿಷ್ಟು ದಾನಿಗಳು ರೇಶನ್ ಮತ್ತು ಸ್ವಲ್ಪ ಹಣ ನೀಡುವ ಮೂಲಕ ಸಹಾಯ ಮಾಡಿದರು. ಇದರ ಸಹಾಯದಿಂದ ಸಂಸಾರ ಕೆಲವು ದಿನಗಳವರೆಗೆ ನಡೆಯಿತು, ಅದು ಕೂಡ ಕಾಲಿಯಾಯಿತು. ಮುಂದೆ ಮೊದಲನೇ ಅಲೆ ಕಡಿಮೆಯಾಗಿ ಮತ್ತೆ ಉದ್ಯೋಗ ಪ್ರಾರಂಭ ಮಾಡಿದರು. ಅದು ಗುಜುರಿ ಅಂಗಡಿಯನ್ನು ತೆರೆದು ವ್ಯಾಪಾರ ಶುರು ಮಾಡಿದರು. ಮುಂದೆ ಎರಡನೇ ಬಂದು ಮತ್ತೆ ಲಾಕ್ ಡೌನ್ ಆಯಿತು ಈ ಸಮಯದಲ್ಲಿ ವ್ಯಾಪಾರ ನಡೆಯದೆ ಗುಜುರಿ ಅಂಗಡಿಯನ್ನು ಮುಚ್ಚಬೇಕಾಯಿತು.
ಇಗ ಅನ್ ಲಾಕ್ ಆಗಿದೆ ಆದರೆ ಯಾವ ಉದ್ಯೋಗ ಮಾಡಬೇಕೆಂದು ತಿಳಿಯದೆ ಬೀದಿ ಬದಿ ಕುಟುಂಬದ ಸಮೇತ ಕೂತು “”ನಮಗೆ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಈ ರೀತಿಯಾಗಿ ಸಾಕಷ್ಟು ಜನ ಬೀದಿಗೆ ಬಂದಿದ್ದಾರೆ, ಅವರಿಗೆ ಸಾಧ್ಯವಾದಷ್ಟು ಸಹಾಯ ಮಾಡಿ.
ವಿ.ಬಿ.ಹೆಚ್