ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭೂಕಂಪನ ಕಂಡುಬಂದಿದ್ದು, ಜನರಲ್ಲಿ ಭಯಭೀತಿಯ ಸ್ಥಿತಿ ಉಂಟುಮಾಡಿದೆ. ಈ ಭೂಕಂಪನವು ಉತ್ತರ ಕನ್ನಡ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಅನುಭವವಾಗಿದೆ. ಪ್ರಮುಖವಾಗಿ, ಕುಮಟಾ ತಾಲೂಕಿನ ದೇವಿ ಮನೆ ಘಟ್ಟ, ಶಿರಸಿ ತಾಲೂಕಿನ ರಾಗಿಹೊಸಳ್ಳಿ, ಕಸಗೆ, ಬಂಡಳ ಗ್ರಾಮಗಳಲ್ಲಿ, ಭೂಕಂಪನವು ಸುಮಾರು 3 ಸೆಕೆಂಡುಗಳ ಕಾಲ ಮುಂದುವರಿದಿತ್ತು
ಆದರೇ ಹಿಂದೂ ಮಹಾಸಾಗರದಲ್ಲಿ 10 ಕಿಲೋಮೀಟರ್ ಆಳದ ರಿಡ್ಜ್ ಮಧ್ಯದಲ್ಲಿ ಅಲ್ಪ ಮಟ್ಟದ ಭೂ ಕಂಪನವಾಗಿದೆ.ಇದರಿಂದಲೇ ಪಶ್ಚಿಮ ಘಟ್ಟ ಭಾಗದಲ್ಲೂ ಭೂಮಿ ಕಂಪಿಸಿರುವ ಸಾಧ್ಯತೆ ಇದೆ ಎಂದು ತಜ್ಞರು ಊಹಿಸಿದ್ದಾರೆ.