ಪುಂಡ ಮಣಿಕಂಠ ಆನೆಯಿಂದ ಮತ್ತೆ ಮಾವುತನ ಮೇಲೆ ದಾಳಿಗೆ ಯತ್ನ !
ಸಕ್ರೆಬೈಲು ಆನೆ ಬಿಡಾರದ ಪುಂಡಾನೆಯೆಂದೇ ಖ್ಯಾತಿ ಪಡೆದಿರುವವ ಮಣಿಕಂಠ ಆನೆ ನಿನ್ನೆ ಮತ್ತೆ ಮಾವುತನ ಮೇಲೆ ದಾಳಿಗೆ ಯತ್ನಿಸಿದೆ.
ದಾಳಿಗೆ ಯತ್ನಿಸಿದ ದೃಶ್ಯ ಸಿಸಿ ಟಿವಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಅದರ ಅಕ್ರಮಣಕಾರಿ ಶೈಲಿ ಅನಾವರಣಗೊಂಡಿದೆ.
ನಿನ್ನೆ ಸಕ್ರೆಬೈಲು ಆನೆ ಬಿಡಾರದಿಂದ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿದ್ದ ಮಣಿಕಂಠನನ್ನು ಕಾವಾಡಿ ಇಮ್ರಾನ್ ಕಾಡಿಗೆ ಕರೆದೊಯ್ಯಲು ಅದರ ಹೆಗಲು ಏರಿದ್ದ, ಮಾವುತ ಕಲೀಲ್ ಮಣಿಕಂಠನನ್ನು ಹಿಂಬಾಲಿಸಿಕೊಂಡು ಸ್ಕೂಟರ್ ನಲ್ಲಿ ಹೊರಟಿದ್ದಾರೆ.

ಆದ್ರೆ ಮಾವುತನ ಮೇಲೆ ಸೇಡು ತೀರಿಸಿಕೊಳ್ಳಲೆಂದೇ ಅವರ ಬರುವಿಕೆಗಾಗಿ ಕಾದು ಕೂತಂತಿದ್ದ ಮಣಿಕಂಠ, ಸಕ್ರೆಬೈಲು ಜಂಗಲ್ ರೆಸಾರ್ಟ್ ಗೇಟ್ ಬಳಿ ನಿಂತು ಬಿಟ್ಟ.
ಇತ್ತ ಹಿಂಬದಿಯಿಂದ ಮಾವುತ ಬರುತ್ತಿರುವುದನ್ನು ಗಮನಿಸಿದ ಮಣಿಕಂಠ ಏಕಾಏಕಿ ಅಟ್ಟಾಡಿಸಿಕೊಂಡು ಬಂದಿದೆ. ತಕ್ಷಣ ಮಾವುತ ಬೈಕ್ ಬಿಟ್ಟು ಪರಾರಿಯಾದ.
ಮಣಿಕಂಠ ತನ್ನ ಮಾವುತನನ್ನು ಬಿಡಾರದೊಳಗಿನವರೆಗೆ ಅಟ್ಟಾಡಿಸಿಕೊಂಡು ಬಂದಿದೆ. ತಕ್ಷಣ ವೈದ್ಯರು ಅದನ್ನು ಅರವಳಿಕೆ ಮದ್ದು ಪ್ರಯೋಗಿ ಪಳಗಿಸಲು ಅಣಿಯಾಗಿದ್ರು.
ಅಲ್ಲಿನ ಕುಮ್ಕಿ ಆನೆಗಳ ಸಹಕಾರದಿಂದ ಉಳಿದ ಮಾವುತ ಕಾವಾಡಿಗಳು ಮಣಿಕಂಠನನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.








