ಕೀರ್ತಿ ಸುರೇಶ್ ಅಭಿನಯದ ಸಾಲು ಸಾಲು ಸಿನಿಮಾಗಳ ಸೋಲು – ಮಹೇಶ್ ಬಾಬು ಫ್ಯಾನ್ಸ್ ಗೆ ಆತಂಕ.
ಮಹಾ ನಟಿ ಚಿತ್ರ ಕೀರ್ತಿ ಸುರೇಶ್ ಗೆ ಸ್ಟಾರ್ ಡಮ್ ತಂದು ಕೊಟ್ಟ ಸಿನಿಮಾ. ಈ ಚಿತ್ರದ ಬಳಿಕ ಕೀರ್ತಿ ಸುರೇಶ್ ಸಾಲು ಸಾಲು ಸಿನಿಮಾಗಳನ್ನ ಒಪ್ಪಿಕೊಂಡಿದ್ದಾರೆ. ಆದರೆ ಮಹಾನಟಿ ಬಳಿಕ ಬಂದ ಯಾವುದೇ ಚಿತ್ರಗಳು ಕೀರ್ತಿಯನ್ನ ಕೈಹಿಡಿದಿಲ್ಲ. ಆನಂತರ ಬಂದ ಎಲ್ಲಾ ಸಿನಿಮಾಗಳು ಬಾಕ್ಸ್ ಆಫಿಸ್ ದೋಚುವಲ್ಲಿ ಸೋಲು ಕಂಡಿದೆ. ಕೀರ್ತಿ ಅಭಿನಯದ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋಲುತ್ತಿರುವುದು ಮಹೇಶ್ ಬಾಬು ಅಭಿಮಾನಿಗಳನ್ನ ಕಂಗಾಲಾಗುವಂತೆ ಮಾಡಿದೆ.
ಮಹಾ ನಟಿ ನಂತರ ಹೆಚ್ಚಾಗಿ ಲೇಡಿ ಓರಿಂಟೆಡ್ ಸಿನಿಮಾಗಳಲ್ಲಿಯೇ ಕೀರ್ತೀ ಕಾಣಿಸಿಕೊಂಡಿದ್ದಾರೆ. ಇತ್ತಿಚೆಗೆ ತೆರೆ ಕಂಡ ಗುಡ್ ಲಕ್ ಸಖಿ ಸಿನಿಮಾ ಕೂಡ ಇಂಥದೆ ಕಥಾ ಹಂದರವೊಂದಿರುವ ಚಿತ್ರ, ಇದಕ್ಕೂ ಚಿತ್ರಕ್ಕೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೀರ್ತಿ ಸುರೇಶ್ ಈಗ ಮಹೇಶ್ ಬಾಬುವಿನ ಜೊತೆ ಸರ್ಕಾರಿ ವಾರು ಪಾಟ ಚಿತ್ರದಲ್ಲಿ ಹಿರೋಹಿನ್ ಆಗಿ ಕಾಣಿಸಿಕೊಂಡಿದ್ದಾರೆ. ಸತತ ಸೋಲುಗಳು ತಮ್ಮ ನೆಚ್ಚಿನ ನಟನ ಸಿನಿಮಾದ ಮೇಲೆ ಪರಿಣಾಮ ಬೀರಬಹುದು ಎಂದು ಅಭಿಮಾನಿಗಳು ಆತಂಕದಲ್ಲಿದ್ದಾರೆ. ಈ ಚಿತ್ರದಲ್ಲೂ ಸೋಲು ಮುಂದವರೆದರೆ ಪ್ರಿನ್ಸ್ ಸಿನಿಮಾದ ಗತಿ ಎನು ಎನ್ನುವುದು ಅಭಿಮಾನಿಗಳ ಚಿಂತೆ.
2018 ರಲ್ಲಿ ಮಹಾನಟಿ ಚಿತ್ರ ತೆರೆಕಂಡು ಸೂಪರ್ ಹಿಟ್ ಆಗಿನಿಂದ ಮಹಿಳಾ ಪ್ರಧಾನ ಪಾತ್ರಗಳನನ್ನೆ ಕೀರ್ತಿ ಹಾರಿಸಿಕೊಂಡಿದ್ದಾರೆ. ಅಲ್ಲಲ್ಲಿ ಹೀರೋ ಓರಿಯಟೆಂಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಿ 2, ಸಂಡಕೋಳಿ, ಪೆಂಗ್ವಿನ್, ಮಿಸ್ ಇಂಡಿಯಾ, ರಂಗ್ ದೇ, ಮರಕ್ಕರ್ , ಹಾಗು ಮೊನ್ನೆ ( ಜನವರಿ 28) ಕ್ಕೆ ತೆರೆಕಂಡಿರುವ ಗುಡ್ ಲಕ್ ಸಖಿ ಚಿತ್ರಗಳು ಸೋತಿವೆ, ರಜನಿಕಾಂತ್ ಅಭಿನಯದ ಅಣ್ಣಾತೆ ಮಾತ್ರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.