ADVERTISEMENT
Tuesday, May 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಬಂಗಾಳದಲ್ಲಿ ದೀದಿ ಸಾಮ್ರಾಜ್ಯ ಪತನ: ಕಾಳಿ ಮಾತೆ ಮುಂದೆ ನಿಂತ ಮಮತಾರನ್ನ ಕೋಳಿ ತರ ಸೋಲಿಸಿದ್ರು ಅಂದ್ರು ಒಳ್ಳೆ ಹುಡುಗ ಪ್ರಥಮ್!

Shwetha by Shwetha
May 5, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಇಂದಿನಿಂದ ಹೊಸ ಅಧ್ಯಾಯವೊಂದು ಆರಂಭವಾಗಿದೆ. ದಶಕಗಳ ಕಾಲ ಏಕಚಕ್ರಾಧಿಪತ್ಯ ಸ್ಥಾಪಿಸಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಭದ್ರಕೋಟೆ ಈಗ ಸಂಪೂರ್ಣವಾಗಿ ಧೂಳೀಪಟವಾಗಿದೆ. ರಾಜ್ಯದಲ್ಲಿ ಬೀಸಿರುವ ಕೇಸರಿ ಬಿರುಗಾಳಿಗೆ ಟಿಎಂಸಿ ತತ್ತರಿಸಿ ಹೋಗಿದ್ದು, ಬದಲಾವಣೆಯ ಗಾಳಿ ದಟ್ಟವಾಗಿ ಹರಡಿದೆ.

ಕಾಳಿ ಮಾತೆ ಮುಂದೆ ನಿಂತಿದ್ದರೂ ಸೋಲು ತಪ್ಪಲಿಲ್ಲ

Related posts

ಬಂಗಾಳದಲ್ಲಿ ಕೇಸರಿ ಸುನಾಮಿ: ಮೋದಿಯ ಝಲ್ಮುರಿ ರುಚಿಗೆ ದೀದಿ ಪಡೆ ಕಂಗಾಲು, ಜಾರ್ಗ್ರಾಮ್‌ನ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ

ಬಂಗಾಳದಲ್ಲಿ ಕೇಸರಿ ಸುನಾಮಿ: ಮೋದಿಯ ಝಲ್ಮುರಿ ರುಚಿಗೆ ದೀದಿ ಪಡೆ ಕಂಗಾಲು, ಜಾರ್ಗ್ರಾಮ್‌ನ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ

May 5, 2026
ನಿಜವಾಯ್ತು PK ಭವಿಷ್ಯ.. ವಿಜಯ್ ಗೆಲುವು ವಿಡಿಯೋ ವೈರಲ್!

ನಿಜವಾಯ್ತು PK ಭವಿಷ್ಯ.. ವಿಜಯ್ ಗೆಲುವು ವಿಡಿಯೋ ವೈರಲ್!

May 5, 2026

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ಭಾರೀ ಸಂಚಲನ ಮೂಡಿಸಿದೆ. ಮಮತಾ ಬ್ಯಾನರ್ಜಿ ಸೋತರೆ ನೂರು ಬಡವರ ಅಭಿವೃದ್ಧಿಗೆ ಸಹಾಯ ಮಾಡುವುದಾಗಿ ಈಶ್ವರನಲ್ಲಿ ಹರಕೆ ಹೊತ್ತಿದ್ದ ಪ್ರಥಮ್, ಈಗ ಮಮತಾ ಅವರ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.

ನೆನಪಿಟ್ಟುಕೊಳ್ಳಿ, ಮುಂದಿನ ಮೂರೇ ತಿಂಗಳಲ್ಲಿ ಸುಮಾರು 25 ಲಕ್ಷ ಅಕ್ರಮ ಬಾಂಗ್ಲಾ ನುಸುಳುಕೋರರನ್ನು ಗುರುತಿಸಿ ಹೊರಹಾಕಲಾಗುವುದು. ಭಾರತ ಈಗ ಸುರಕ್ಷಿತವಾಗಿದೆ. ನಾನು ಯಾವುದೇ ಸಮೀಕ್ಷೆ ಅಥವಾ ಪಕ್ಷದ ಪರವಲ್ಲ, ನಾನು ದೇಶದ ಪರ. ಅಕ್ರಮ ನುಸುಳುಕೋರರು ಭಯೋತ್ಪಾದಕರಿಗಿಂತಲೂ ಅಪಾಯಕಾರಿ. ನಮ್ಮ ದೇಶದ ಜನಸಂಖ್ಯಾ ಸ್ವರೂಪ ಬದಲಾಗುತ್ತಿತ್ತು, ಅದಕ್ಕೇ ಮಮತಾ ನಿಮ್ಮ ಮೇಲೆ ಜನರಿಗೆ ಬೇಸರವಿತ್ತು. ನೀವು ಕಾಳಿ ಮಾತೆ ಮುಂದೆ ನಿಂತಿದ್ದರೂ, ಜನರು ನಿಮ್ಮನ್ನು ಕೋಳಿ ತರ ಸೋಲಿಸಿಬಿಟ್ಟರು ಎಂದು ಪ್ರಥಮ್ ಹರಿಹಾಯ್ದಿದ್ದಾರೆ.

ಮಮತಾ ಜಮಾನಾ ಅಂತ್ಯದತ್ತ

2011ರಲ್ಲಿ ಬರೋಬ್ಬರಿ 34 ವರ್ಷಗಳ ಎಡಪಕ್ಷಗಳ ಸುದೀರ್ಘ ಆಡಳಿತಕ್ಕೆ ಅಂತ್ಯ ಹಾಡಿ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬಂದಿದ್ದರು. ಅಂದು ಇದು ಸೇಡಿನ ಸರ್ಕಾರವಲ್ಲ, ಬದಲಾವಣೆಯ ಸರ್ಕಾರ ಎಂದು ಘೋಷಿಸಿದ್ದರು. ಆದರೆ ಕಾಲಕ್ರಮೇಣ ಬಂಗಾಳದ ರಾಜಕೀಯ ರಕ್ತಸಿಕ್ತವಾಯಿತು. ಸಿಪಿಎಂ ಕಾರ್ಯಕರ್ತರ ಹತ್ಯೆ, ಚುನಾವಣಾ ಹಿಂಸಾಚಾರಗಳು ರಾಜ್ಯದ ಶಾಂತಿಯನ್ನು ಕದಡಿದ್ದವು. ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಮಮತಾ ಅವರ ತಂತ್ರಗಾರಿಕೆ ಈ ಬಾರಿ ಫಲ ನೀಡಿದಂತೆ ಕಾಣುತ್ತಿಲ್ಲ. 2021ರಲ್ಲಿ ಶೂನ್ಯಕ್ಕೆ ಕುಸಿದಿದ್ದ ವಿರೋಧ ಪಕ್ಷಗಳ ಜಾಗವನ್ನು ಇಂದು ಬಿಜೆಪಿ ಸಮರ್ಥವಾಗಿ ತುಂಬಿದೆ.

ಸುವೇಂದು ಅಧಿಕಾರಿ ಎಂಬ ಮಗ್ಗುಲ ಮುಳ್ಳು

ಮಮತಾ ಬ್ಯಾನರ್ಜಿ ಅವರ ಬಲಗೈ ಬಂಟನಂತಿದ್ದ ಸುವೇಂದು ಅಧಿಕಾರಿ ಇಂದು ಅವರ ಪಾಲಿಗೆ ಮಗ್ಗುಲ ಮುಳ್ಳಾಗಿದ್ದಾರೆ. ಟಿಎಂಸಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣವಾಗಿದ್ದ ನಂದಿಗ್ರಾಮ ಮತ್ತು ಕೇಶಪುರ ಚಳವಳಿಯ ಮುಂಚೂಣಿಯಲ್ಲಿದ್ದ ಸುವೇಂದು, ಕಳೆದ ಐದು ವರ್ಷಗಳಿಂದ ಮಮತಾ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ತೊಡೆತಟ್ಟಿದ್ದರು. ಅವರ ಹೋರಾಟದ ಫಲವಾಗಿಯೇ ಇಂದು ಬಂಗಾಳದಲ್ಲಿ ಬಿಜೆಪಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ.

ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳು ಮತ್ತು ರಾಜ್ಯ ಸರ್ಕಾರದ ಮೇಲಿನ ಭ್ರಷ್ಟಾಚಾರದ ಆರೋಪಗಳು ಮತದಾರರು ಬಿಜೆಪಿಯತ್ತ ವಾಲುವಂತೆ ಮಾಡಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಒಟ್ಟಾರೆಯಾಗಿ ಬಂಗಾಳದಲ್ಲಿ ದೀದಿ ಯುಗ ಅಂತ್ಯವಾಗುತ್ತಿದ್ದು, ಕೇಸರಿ ಕಲಿಗಳ ಆರ್ಭಟ ಶುರುವಾಗಿದೆ.

ShareTweetSendShare
Join us on:

Related Posts

ಬಂಗಾಳದಲ್ಲಿ ಕೇಸರಿ ಸುನಾಮಿ: ಮೋದಿಯ ಝಲ್ಮುರಿ ರುಚಿಗೆ ದೀದಿ ಪಡೆ ಕಂಗಾಲು, ಜಾರ್ಗ್ರಾಮ್‌ನ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ

ಬಂಗಾಳದಲ್ಲಿ ಕೇಸರಿ ಸುನಾಮಿ: ಮೋದಿಯ ಝಲ್ಮುರಿ ರುಚಿಗೆ ದೀದಿ ಪಡೆ ಕಂಗಾಲು, ಜಾರ್ಗ್ರಾಮ್‌ನ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ

by Shwetha
May 5, 2026
0

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ದಶಕಗಳ ಕಾಲ ತನ್ನದೇ ಆದ ಭದ್ರಕೋಟೆ ಹೊಂದಿದ್ದ ತೃಣಮೂಲ ಕಾಂಗ್ರೆಸ್‌ಗೆ ಬಿಜೆಪಿ ಪ್ರಬಲ ಪೆಟ್ಟು ನೀಡಿದ್ದು,...

ನಿಜವಾಯ್ತು PK ಭವಿಷ್ಯ.. ವಿಜಯ್ ಗೆಲುವು ವಿಡಿಯೋ ವೈರಲ್!

ನಿಜವಾಯ್ತು PK ಭವಿಷ್ಯ.. ವಿಜಯ್ ಗೆಲುವು ವಿಡಿಯೋ ವೈರಲ್!

by Shwetha
May 5, 2026
0

ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ (PK) ನೀಡಿದ್ದ ಭವಿಷ್ಯವಾಣಿ ಇದೀಗ ನಿಜವಾಗಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿಜಯ್ ನೇತೃತ್ವದ ಟಿವಿಕೆ (TVK) ಭರ್ಜರಿ ಗೆಲುವು...

ಹಸ್ತ ಪಾಳಯದಲ್ಲಿ ಬಿರುಗಾಳಿ ಅಲ್ಪಸಂಖ್ಯಾತ ಘಟಕಕ್ಕೆ ಡಿಕೆಶಿ ಮೇಜರ್ ಸರ್ಜರಿ ಸಚಿವ ಜಮೀರ್ ಮತ್ತು ನಸೀರ್ ಅಹಮ್ಮದ್ ಗೆ ಹೈಕಮಾಂಡ್ ಶಾಕ್

ಗ್ಯಾರಂಟಿಗಳು ಕೈ ಹಿಡಿದಿವೆ: ಡಿಸಿಎಂ ಡಿ.ಕೆ. ಶಿವಕುಮಾರ್

by Shwetha
May 5, 2026
0

ರಾಜ್ಯದ ಉಪಚುನಾವಣೆ ಹಾಗೂ ಪಂಚರಾಜ್ಯಗಳ ಚುನಾವಣಾ ಫಲಿತಾಂಶಗಳ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದಲ್ಲಿ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ಜನರ...

ಕಾಂಗ್ರೆಸ್ ಭದ್ರಕೋಟೆ ಭೇದಿಸಲು ಸಂಚು ಹೂಡಿದ್ದ ಬಿಜೆಪಿಗೆ ಮರ್ಮಾಘಾತ:ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಧ್ವಜ ಹಾರಿಸಿದ ಸಮರ್ಥ್ ಶಾಮನೂರು

ಕಾಂಗ್ರೆಸ್ ಭದ್ರಕೋಟೆ ಭೇದಿಸಲು ಸಂಚು ಹೂಡಿದ್ದ ಬಿಜೆಪಿಗೆ ಮರ್ಮಾಘಾತ:ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಧ್ವಜ ಹಾರಿಸಿದ ಸಮರ್ಥ್ ಶಾಮನೂರು

by Shwetha
May 5, 2026
0

ದಾವಣಗೆರೆ: ಇಡೀ ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಂತಿಮ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ತನ್ನ ಭದ್ರಕೋಟೆಯನ್ನು ಯಶಸ್ವಿಯಾಗಿ...

ದ್ರಾವಿಡ ಕೋಟೆಗೆ ಲಗ್ಗೆ ಇಟ್ಟ ದಳಪತಿ ವಿಜಯ್ :ಕೊಳತ್ತೂರಿನಲ್ಲಿ ಸ್ಟಾಲಿನ್ ಸಾಮ್ರಾಜ್ಯ ಪತನ ಮುಖ್ಯಮಂತ್ರಿ ವಿರುದ್ಧ ಐತಿಹಾಸಿಕ ಜಯ ದಾಖಲಿಸಿದ ಟಿವಿಕೆ ಅಭ್ಯರ್ಥಿ ವಿಎಸ್ ಬಾಬು

ದ್ರಾವಿಡ ಕೋಟೆಗೆ ಲಗ್ಗೆ ಇಟ್ಟ ದಳಪತಿ ವಿಜಯ್ :ಕೊಳತ್ತೂರಿನಲ್ಲಿ ಸ್ಟಾಲಿನ್ ಸಾಮ್ರಾಜ್ಯ ಪತನ ಮುಖ್ಯಮಂತ್ರಿ ವಿರುದ್ಧ ಐತಿಹಾಸಿಕ ಜಯ ದಾಖಲಿಸಿದ ಟಿವಿಕೆ ಅಭ್ಯರ್ಥಿ ವಿಎಸ್ ಬಾಬು

by Shwetha
May 5, 2026
0

ಚೆನ್ನೈ: ದ್ರಾವಿಡ ರಾಜಕಾರಣದ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಮಹಾ ಬದಲಾವಣೆಗೆ ತಮಿಳುನಾಡು ಸಾಕ್ಷಿಯಾಗಿದೆ. ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ)...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram