ನವದೆಹಲಿ: ಅನರ್ಹತೆ ವಿಚಾರದಲ್ಲಿ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಗೆ ಈಗ ಮತ್ತೊಂದು ಹಿನ್ನಡೆಯಾಗಿದೆ. ಆದರೂ ಮತ್ತೊಂದು ಭರವಸೆಗಾಗಿ ಅವರು ಕಾಯುತ್ತಿದ್ದಾರೆ.
ಅನರ್ಹತೆ ಪ್ರಶ್ನಿಸಿ ವಿನೇಶ್ ಫೋಗಟ್ (Vinesh Phogat) ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಕ್ರೀಡಾ ಮಧ್ಯಸ್ಥ ಮಂಡಳಿ, ಅನರ್ಹತೆ ತೆರವು ಮಾಡಲು ನಿರಾಕರಿಸಿದೆ. ಈ ಮಧ್ಯೆ ವಿನೇಶ್ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಒಲಿಂಪಿಕ್ಸ್ ನಿಯಮಗಳನ್ನು ಬದಲಿಸುವ ಅವಕಾಶ ಇಲ್ಲ ಎಂದು ಈಗಾಗಲೇ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ಫೆಡರೇಷನ್ ಹೇಳಿದೆ.
ಈ ಮಧ್ಯೆ, ಫೋಗಟ್ ವಿಚಾರದಲ್ಲಿ ರಾಜಕೀಯ ಮುಂದುವರೆದಿದೆ. ಫೋಗಟ್‌ಗೆ ಭಾರತ ರತ್ನ ನೀಡಬೇಕು. ಇಲ್ಲವೇ ರಾಜ್ಯಸಭೆಗೆ ನಾಮಿನೇಟ್ ಮಾಡಬೇಕು ಎಂದು ಒತ್ತಾಯಿಸಿ ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ ಎಕ್ಸ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ಇದಕ್ಕೆ ಕೆಲ ನೆಟ್ಟಿಗರು, ನಿಮಗೆ ಅಷ್ಟು ಗೌರವ ಇದ್ದರೆ ಮೊದಲು ಬಂಗಾಳ ಸಿಎಂ ಮಾಡಿ ಎಂದು ಸವಾಲು ಹಾಕಿದ್ದಾರೆ.