ಎಸ್.ಜಿ. ನರಸಿಂಹಮೂರ್ತಿ & ಮೊಹಮ್ಮದ್ ಮುಸ್ತಫಾ
ಅಭ್ಯುಧಯ ಟೆಕ್ನೋ ಸಲ್ಯೂಷನ್
ಎಟಿಎಸ್ ಅಟ್ಯಾಕರ್ಸ್ ತಂಡದ ಮಾಲೀಕರು

ಐಟಿ ಸಿಟಿ ಬೆಂಗಳೂರಿನ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿದವರಲ್ಲಿ ಅಭ್ಯುಧಯ ಟೆಕ್ನೋ ಸಲ್ಯೂಷನ್ಸ್‍ನ ಕೊಡುಗೆಯೂ ಅನನ್ಯ. ಐಟಿ ಉದ್ಯಮದಲ್ಲಿ ತಮ್ಮದೇ ರೀತಿಯ ಛಾಪು ಮೂಡಿಸಿರುವ ಅಭ್ಯುಧಯ ಟೆಕ್ನೋ ಸಲ್ಯೂಷನ್ಸ್‍ನ ಮಾಲೀಕರಾದ ಎಸ್.ಜಿ. ನರಸಿಂಹಮೂರ್ತಿ ಮತ್ತು ಮೊಹಮ್ಮದ್ ಮುಸ್ತಫಾ ಅವರ ಕಠಿಣ ಪರಿಶ್ರಮವಿದೆ.
ಐಟಿ ಕ್ಷೇತ್ರದಲ್ಲಿ ಸುಮಾರು 15 ವರ್ಷಗಳ ಅನುಭವ ಹೊಂದಿರುವ ನರಸಿಂಹಮೂರ್ತಿ ಮೊಹಮ್ಮದ್ ಮುಸ್ತಫಾ ಅವರು, 2023ರಲ್ಲಿ ಅಭ್ಯುಧಯ ಟೆಕ್ನೋ ಸಲ್ಯೂಷನ್ಸ್ ಸಂಸ್ಥೆಯನ್ನು ಸ್ಥಾಪಿಸಿದರು. ಕಡಿಮೆ ಅವಧಿಯಲ್ಲಿಯೇ ದೇಶ-ವಿದೇಶಗಳಲ್ಲಿ ಅಭ್ಯುಧಯ ಟೆಕ್ನೋ ಸಲ್ಯೂಷನ್ಸ್ ಬಹುದೊಡ್ಡ ಹೆಸರನ್ನು ಮಾಡಿದೆ.
ಅಭ್ಯುಧಯ ಟೆಕ್ನೋ ಸಲ್ಯೂಷನ್ಸ್‍ನ ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್, ಎಲ್‍ಒಟಿ, ಆರ್& ಡಿ ಸೇರಿದಂತೆ ಹಲವು ವಿಭಾಗದಲ್ಲಿ ಕೆಲಸ ಮಾಡುತ್ತಿದೆ. 2023ರಲ್ಲಿ ಆರಂಭಿಸಲಾದ ಅಭ್ಯುಧಯ ಟೆಕ್ನೋ ಸಲ್ಯೂಷನ್ಸ್ ಸಂಸ್ಥೆಯು ಹೆಮ್ಮರವಾಗಿ ಬೆಳೆಯುತ್ತಿರುವುದು ಹೆಮ್ಮೆಯ ವಿಷಯವೇ.
ಮೂರು ಕಾಂಟಿನೆಂಟ್‍ಗಳ ವಿವಿಧ ದೇಶಗಳ 20ಕ್ಕೂ ಹೆಚ್ಚಿನ ಸಂಸ್ಥೆಗಳಿಗೆ ಸೇವೆ ನೀಡಲಾಗುತ್ತಿದೆ. ಈಗಾಗಲೇ 100ಕ್ಕೂ ಹೆಚ್ಚಿನ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಅಭ್ಯುಧಯ ಟೆಕ್ನೋ ಸಲ್ಯೂಷನ್ಸ್, 5 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಐಟಿ ತರಬೇತಿಗಳನ್ನು ನೀಡಿದೆ, ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ಸೇರಿದಂತೆ ಇನ್ನಿತರ ಕಾರ್ಯಕ್ಕಾಗಿ 50ಕ್ಕೂ ಹೆಚ್ಚಿನ ಸ್ಕಿಲ್ ಲ್ಯಾಬ್‍ಗಳನ್ನು ಅಭ್ಯುಧಯ ಟೆಕ್ನೋ ಸಲ್ಯೂಷನ್ಸ್ ಹೊಂದಿದೆ.
ವೃತ್ತಿಪರತೆಯ ಜತೆಗೆ ತಮ್ಮ ಕ್ರೀಡಾಸಕ್ತಿಯನ್ನು ಬಿಟ್ಟುಕೊಡದ ಎಸ್.ಜಿ. ನರಸಿಂಹಮೂರ್ತಿ ಮತ್ತು ಮೊಹಮ್ಮದ್ ಮುಸ್ತಫಾ ಈಗಾಗಲೇ ಹಲವು ಕ್ರೀಡಾಕೂಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನರಸಿಂಹಮೂರ್ತಿ ಅವರು ಮೂಲತಃ ಬ್ಯಾಡ್ಮಿಂಟನ್ ಆಟಗಾರರಾಗಿದ್ದು, ಅವರ ಬ್ಯಾಡ್ಮಿಂಟನ್ ಪ್ರೀತಿಯೇ ಈಗ ಸಿಎಂ ಕಪ್ 2026ರ ಭಾಗವಾಗುವಂತೆ ಮಾಡಿದೆ. ಅಲ್ಲದೆ ಎಟಿಎಸ್ ಅಟ್ಯಾಕರ್ಸ್ ತಂಡದ ಮಾಲೀಕರಾಗಿದ್ದಾರೆ. ಎಸ್.ಜಿ. ನರಸಿಂಹಮೂರ್ತಿ ಮತ್ತು ಮೊಹಮ್ಮದ್ ಮುಸ್ತಫಾ ಅವರಿಗೆ ಸಿಎಂ ಕಪ್ ಆಯೋಜನಾ ಮಂಡಳಿಯು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದೆ.







