EPFO ಖಾತೆದಾರರಿಗೆ ಶುಭ ಸುದ್ದಿ 18.34 ಕೋಟಿ ಖಾತೆದಾರರಿಗೆ 8.50% ಬಡ್ಡಿ ಜಮಾ
EPFO ಖಾತೆದಾರರಿಗೆ ಶುಭ ಸುದ್ದಿ, 2021ರ ಆರ್ಥಿಕ ವರ್ಷದ 18.34 ಕೋಟಿ ಖಾತೆದಾರರಿಗೆ EPFO ಯಿಂದ8.50 ಬಡ್ಡಿಯನ್ನು ಜಮಾ ಮಾಡುತ್ತದೆ. ದೀಪಾವಳಿಯಂದು ಕೇಂದ್ರ ಸರ್ಕಾರ PF ಖಾತೆಗೆ ಬಡ್ಡಿ ಹಾಕುವ ಬಗ್ಗೆ ಮಾಹಿತಿ ನೀಡಿತ್ತು.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು 2020-21ನೇ ಹಣಕಾಸು ವರ್ಷಕ್ಕೆ 18.34 ಕೋಟಿ ಗ್ರಾಹಕರ ಖಾತೆಗಳಿಗೆ ಶೇಕಡಾ 8.50 ಬಡ್ಡಿದರವನ್ನು ಠೇವಣಿ ಮಾಡಿದೆ. ನಿವೃತ್ತಿ ನಿಧಿಯ ಕಾರ್ಯಲಯವು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ @EPFO ನಲ್ಲಿ ಇಂದು ಪ್ರಕಟಿಸಿದೆ. “2020-21 ರ ಹಣಕಾಸು ವರ್ಷದಲ್ಲಿ, 18.34 ಕೋಟಿ ಖಾತೆಗಳಿಗೆ 8.50% ಬಡ್ಡಿಯೊಂದಿಗೆ ಕ್ರೆಡಿಟ್ ಮಾಡಲಾಗಿದೆ” ಎಂದು ಟ್ವೀಟ್ ಹೇಳಿದೆ. EPFO ವಿಶ್ವದ ಅತಿದೊಡ್ಡ ಸಾಮಾಜಿಕ ಭದ್ರತಾ ಸಂಸ್ಥೆಗಳಲ್ಲಿ ಒಂದಾಗಿದೆ.
ಉದ್ಯೋಗಿಗಳ ಭವಿಷ್ಯ ನಿಧಿಯು ನವೆಂಬರ್ 15, 1951 ರಂದು ಅಸ್ತಿತ್ವಕ್ಕೆ ಬಂದಿತು. ಉದ್ಯೋಗದ ಸ್ಥಳದಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಕಾಯಿದೆ, ಪಿಂಚಣಿ ಯೋಜನೆ ಮತ್ತು ಭಾರತದಲ್ಲಿ ಸಂಘಟಿತ ಕಾರ್ಮಿಕರಿಗೆ ವಿಮಾ ಯೋಜನೆಗಳನ್ನು ಇದು ನಿರ್ವಹಿಸುತ್ತದೆ. ನಿಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂಬುದನ್ನು ನೀವು ಆನ್‌ಲೈನ್‌ನಲ್ಲಿ ನೋಡಬಹುದು. ಇದರೊಂದಿಗೆ ಎಷ್ಟು ಬಡ್ಡಿ ಬಂತು ಎಂದು ತಿಳಿಯಬಹುದು.