ಬೆಂಗಳೂರು: ಕನ್ನಡದಲ್ಲಿ (Kannada) ತೀರ್ಪು ನೀಡುವುದರ ಮೂಲಕ ಕರ್ನಾಟಕ ಹೈಕೋರ್ಟ್ (Karnataka High Court) ಇತಿಹಾಸ ಬರೆದಿದೆ.
ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆ. ಅಷ್ಟೇ ಅಲ್ಲ, ನ್ಯಾಯದಾನದ ಭಾಷೆಯೂ ಕನ್ನಡ ಆಗಬೇಕು ಎಂಬ ಮನವಿ ಹಲವು ವರ್ಷಗಳಿಂದಲೂ ಕೇಳಿ ಬರುತ್ತಿತ್ತು. ಸದ್ಯ ಹೈಕೋರ್ಟ್ ಗುರುವಾರ ಕನ್ನಡದಲ್ಲೇ ತೀರ್ಪು ನೀಡುವುದರ ಮೂಲಕ ಇತಿಹಾಸ ಬರೆದಿದೆ.
ನ್ಯಾ.ಕೃಷ್ಣ ಎಸ್ ದೀಕ್ಷಿತ್, ಸಿಎಂ ಜೋಶಿ ಅವರಿದ್ದ ವಿಭಾಗೀಯ ಪೀಠ ನೀಡಿದ ಈ ತೀರ್ಪು, ಬುಧವಾರವಷ್ಟೇ ಆಚರಿಸಲ್ಪಟ್ಟಿದ್ದ ಭಾರತ ಭಾಷಾ ದಿನ ಸ್ಮರಿಸಿದಂತಾಗಿದೆ. ಪಟ್ಟನಾಯಕನಹಳ್ಳಿ ಮಠದ ಸ್ವಾಮೀಜಿಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಭಾಗೀಯ ಪೀಠ ಕನ್ನಡದಲ್ಲಿ ತೀರ್ಪು ನೀಡಿದೆ. ತೀರ್ಪಿನ ಆಪರೇಟಿವ್ ಭಾಗವನ್ನು ನ್ಯಾ.ಕೃಷ್ಣ ದೀಕ್ಷಿತ್ ಕನ್ನಡದಲ್ಲಿಯೇ ಓದಿ, ತೀರ್ಪು ಪ್ರಕಟಿಸಿದ್ದಾರೆ.