ವಾಷಿಂಗ್ಟನ್: ಲಾಸ್ ಏಂಜಲೀಸ್ ನಲ್ಲಿ ಭೀಕರ ಕಾಡ್ಗಿಚ್ಚು (Los Angeles Wildfire) ಹಬ್ಬಿದ್ದು ದೊಡ್ಡ ಅವಾಂತರಕ್ಕೆ ಕಾರಣವಾಗಿದೆ. ಸುಮಾರು 1500ಕ್ಕೂ ಅಧಿಕ ಕಟ್ಟಡಗಳು ಸುಟ್ಟು ಕರಕಲಾಗಿವೆ. ಈ ವೇಳೆ ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಅವರ ಪುತ್ರ ಹಂಟರ್ ಬೈಡನ್ (Hunter Biden) ಮನೆ ಕೂಡ ಸುಟ್ಟು ಹೋಗಿದೆ ಎನ್ನಲಾಗಿದೆ.
ಕ್ಯಾಲಿಫೋರ್ನಿಯಾದ (California) ಮಾಲಿಬು ನಗರದಲ್ಲಿರುವ ಹಂಟರ್ ಬೈಡನ್ ಅವರ ಮನೆ ಸುಟ್ಟು ಭಸ್ಮವಾಗಿದೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. 1950ರ ಸಂದರ್ಭದಲ್ಲಿ 15,800 ಡಾಲರ್ (13.56 ಲಕ್ಷ ರೂ.) ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಪೆಸಿಫಿಕ್ ಪಾಲಿಸೇಡ್ಸ್ ಪ್ರದೇಶದ ಆಕರ್ಷಣೆಯಾಗಿದ್ದ ಈ ಮನೆ 3 ಬೆಡ್‌ರೂಮ್, ಮೂರು ಬಾತ್ ರೂಮ್, 1 ಐಷಾರಾಮಿ ಗೌರ್ಮೆಟ್ ಅಡುಗೆ ಮನೆ ಹೊಂದಿತ್ತು. ಸಿಫಿಕ್ ಸಾಗರ ವೀಕ್ಷಣೆಗೆ ವಿಶೇಷ ಬಾಲ್ಕನಿಯನ್ನೂ ಈ ಮನೆ ಒಳಗೊಂಡಿತ್ತು. ಆದರೆ, ಕಾಡ್ಗಿಚ್ಚಿನಿಂದಾಗಿ ಮನೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಆದರೆ, ಈ ಕುರಿತು ನನಗೆ ಮಾಹಿತಿ ಇಲ್ಲ ಎಂದು ಬೈಡನ್ ಹೇಳಿದ್ದಾರೆ.
ಈ ದುರ್ಘಟನೆಯಲ್ಲಿ ಈವರೆಗೆ ಐವರು ಸಜೀವ ದಹನವಾಗಿದ್ದಾರೆ. ಈ ನಡುವೆ 1,00,000 ಜನರ ಸ್ಥಳಾಂತರಕ್ಕೆ ಆದೇಶಿಸಲಾಗಿದೆ. ಸುಮಾರು 2,000 ಮನೆಗಳು ಸುಟ್ಟು ಭಸ್ಮವಾಗಿವೆ ಎಂದು ವರದಿಗಳು ತಿಳಿಸಿವೆ.