ರಾಯಚೂರು: ಖದೀಮರ ತಂಡವೊಂದು ಅಕ್ಕ ಪಕ್ಕದ ಮನೆಯವರ ಮನೆಗಳಿಗೆ ಬೀಗ ಜಡಿದು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಈ ದರೋಡೆ ಪ್ರಕರಣ (Robbery Case) ಜಿಲ್ಲೆಯ ಲಕ್ಷ್ಮಿನರಸಿಂಹ ಲೇಔಟ್ ನಲ್ಲಿ ನಡೆದಿದೆ. ಮೂರು ಜನರ ಖತರ್ನಾಕ್ ಗ್ಯಾಂಗ್ ಈ ರೀತಿ ಕಂತ್ರಿ ಕೆಲಸ ಮಾಡಿದೆ ಎನ್ನಲಾಗಿದೆ. ಖದೀಮರು ಲೇಔಟ್ ನ ಬಸನಗೌಡ ಎಂಬುವವರ ಮನೆ ಬಾಗಿಲು ಮುರಿದು ದರೋಡೆ ಮಾಡಿದ್ದಾರೆ.
ದರೋಡೆಗೂ ಮೊದಲು ಬೀದಿ ದೀಪಗಳನ್ನು ಆರಿಸಿ, ಅಕ್ಕಪಕ್ಕದ ಮನೆಗಳ ಚಿಲಕ ಹಾಕಿ ದರೋಡೆ ಮಾಡಿದ್ದಾರೆ. ಮನೆ ಬಾಗಿಲು ಮುರಿದು ಒಳನುಗ್ಗಿದ್ದಾರೆ. ಅಲ್ಲದೇ, ಮನೆಯವರನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ 220 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ, 2 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ.
ಕಪ್ಪು ಬಟ್ಟೆ ಧರಿಸಿಕೊಂಡು, ಕೈಗೆ ಗ್ಲೌಸ್, ಮಂಕಿ ಕ್ಯಾಪ್ ಹಾಕಿ ಖದೀಮರು ನುಗ್ಗಿದ್ದಾರೆ ಎನ್ನಲಾಗಿದೆ. ಅಕ್ಕಪಕ್ಕದ ಮನೆಯವರು ಸಹಾಯಕ್ಕೆ ಬಾರದ ಹಾಗೆ ಪ್ಲ್ಯಾನ್ ಮಾಡಿ ಮನೆಗಳಿಗೆ ಬೀಗ ಹಾಕಿದ್ದಾರೆ. ದರೋಡೆಕೋರರ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದನದ ಕೊಟ್ಟಿಗೆಯಲ್ಲಿ ನೇಣು ಬಿಗದ ಸ್ಥಿತಿಯಲ್ಲಿ ದಂಪತಿ
ರಾಮನಗರ: ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ದನದ ಕೊಟ್ಟಿಗೆಯಲ್ಲಿ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕರ್ಲಹಳ್ಳಿ ಗ್ರಾಮದಲ್ಲಿ...