ದೇಶ್ ವಾಸಿಯೋ ಗಮನಿಸಿ : ಎಲ್ ಪಿಜಿ ಸಿಲಿಂಡರ್ ಬೆಲೆ ಭಾರಿ ಏರಿಕೆ LPG cylinder
ನವದೆಹಲಿ : ದೇಶದಲ್ಲಿ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ.
ಇಂದು ತೈಲ ಮಾರುಕಟ್ಟೆ ಕಂಪನಿಗಳು ದ್ರವೀಕೃತ ಪೆಟ್ರೋಲಿಯಂ ಅನಿಲ(ಎಲ್‍ಪಿಜಿ) ಸಿಲಿಂಡರ್‍ಗಳ ಬೆಲೆಯನ್ನು 25.50 ರೂ. ಹೆಚ್ಚಿಸಿವೆ.
ಇಂದಿನಿಂದ ಜಾರಿಗೆ ಬರುವಂತೆ ಸಬ್ಸಿಡಿ ಎಲ್‍ಪಿಜಿ ಸಿಲಿಂಡರ್‍ನ ಬೆಲೆ ಸಿಲಿಂಡರ್‍ಗೆ 25.50 ರೂ. ಹೆಚ್ಚಾಗಿದ್ದು, ಈಗ ದೆಹಲಿಯಲ್ಲಿ 834.50 ರೂ.ಗೆ ಏರಿಕೆಯಾಗಿದೆ.
ಇದರ ಜೊತೆಗೆ 19 ಕೆಜಿ ಸಿಲಿಂಡರ್‍ನ ಬೆಲೆಯನ್ನು ಕೂಡ 76 ರೂ. ಹೆಚ್ಚಿಗಿದ್ದು, ದೆಹಲಿಯಲ್ಲಿ ದರ 1,550 ರೂ.ಗೆ ಏರಿಕೆಯಾಗಿದೆ.
ಇನ್ನು ಸಬ್ಸಿಡಿ ಎಲ್‍ಪಿಜಿ ಸಿಲಿಂಡರ್‍ನ ಬೆಲೆ ಸಿಲಿಂಡರ್‍ಗೆ ಕೋಲ್ಕತಾದಲ್ಲಿ 861 ರೂ. ಮುಂಬೈನಲ್ಲಿ 834.50 ರೂ. ಚೆನ್ನೈನಲ್ಲಿ 850.50 ರೂ. ಆಗಿದೆ.
ಹೆಚ್ಚಳವು ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಬಳಕೆದಾರರನ್ನು ಒಳಗೊಂಡಂತೆ ಎಲ್ಲಾ ವಿಭಾಗಗಳಲ್ಲಿ ಅನ್ವಯಿಸುತ್ತದೆ.