ಭೋಪಾಲ್: ಸೈದ್ಧಾಂತಿಕವಾಗಿ ಹೊಂದಾಣಿಕೆಯಾಗುತ್ತಿಲ್ಲ ಎಂದು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಬಿಎಸ್ಪಿ ಅಭ್ಯರ್ಥಿಯೊಬ್ಬರು ತನ್ನ ಪತ್ನಿಯನ್ನು ಬಿಟ್ಟು ಹೋಗಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಬಾಲಾಘಾಟ್ ಕ್ಷೇತ್ರದ ಬಹುಜನ ಸಮಾಜ ಪಕ್ಷದ ಬಿಎಸ್ಪಿ ಲೋಕಸಭಾ ಅಭ್ಯರ್ಥಿ ಕಂಕರ್ ಹೀಗೆ ಮನೆ ಬಿಟ್ಟು ಹೋದವರು. ಚುನಾವಣೆಗೂ ಮುನ್ನ ಕಾಂಗ್ರೆಸ್ ಶಾಸಕಿ ಪತ್ನಿ ಅನುಭಾ ಮುಂಜಾರೆ ಅವರಿದ್ದ ಮನೆ ತೊರೆದಿದ್ದಾರೆ. ಬೇರೆ ಸಿದ್ಧಾಂತಗಳನ್ನು ಅನುಸರಿಸುವ ಇಬ್ಬರು, ಚುನಾವಣೆ ಸಂದರ್ಭದಲ್ಲಿ ಒಂದೇ ಸೂರಿನಡಿ ವಾಸಿಸಬಾರದು ಎಂದು ನಾಯಕ ಹೇಳಿದ್ದಾರೆ.
ಅವರು ಹಿಂದಿನ ವಿಧಾನಸಭಾ ಚುನಾವಣೆ ವೇಳೆ ಕೂಡ ದೂರ ಇದ್ದರು. ಏಪ್ರಿಲ್ 19 ರಂದು ಮತದಾನದ ದಿನದ ನಂತರ ಮನೆಗೆ ಮರಳುವುದಾಗಿ ಬಿಎಸ್ಪಿ ನಾಯಕ ಹೇಳಿದ್ದಾರೆ. ನಾನು ನನ್ನ ಮನೆಯಿಂದ ಹೊರಟು ಅಣೆಕಟ್ಟಿನ ಬಳಿ ಗುಡಿಸಲಿನಲ್ಲಿ ವಾಸಿಸುತ್ತಿದ್ದೇನೆ. ವಿಭಿನ್ನ ಸಿದ್ಧಾಂತಗಳನ್ನು ಅನುಸರಿಸುವ ಇಬ್ಬರು ಒಂದೇ ಸೂರಿನಡಿ ವಾಸಿಸಿದರೆ, ಜನರು ಮ್ಯಾಚ್ ಫಿಕ್ಸಿಂಗ್ ಎಂದು ಭಾವಿಸುತ್ತಾರೆ ಎಂದು ಹೇಳಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಶಾಸಕಿ ಭರ್ಜರಿಯಾಗಿ ಗೆದ್ದಿದ್ದರು.