ಸೆಕ್ಯೂರಿಟಿ ಗಾರ್ಡ್ ಕೊಂದು ಬ್ಯಾಂಕ್ ದರೊಡೆ ಮಾಡಿದ ಕಳ್ಳರು
ಭದ್ರತಾ ಸಿಬ್ಬಂದಿಯನ್ನ ಹತ್ಯೆ ಮಾಡಿ ಬ್ಯಾಂಕ್ ದರೋಡೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ನಾಗವಲ್ಲಿ ಗ್ರಾಮದಲ್ಲಿ ನಡೆದಿದೆ.
ನಾಗವಲ್ಲಿ ಗ್ರಾಮದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಶಾಖೆಯಲ್ಲಿ ಕಳ್ಳತನ ನಡೆದಿದ್ದು ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ 55 ವರ್ಷದ ಸಿದ್ದಪ್ಪ ಎಂಬ ವ್ಯಕ್ತಿ ಕೊಲೆಯಾಗಿದ್ದಾರೆ.
ಕಳೆದ ರಾತ್ರಿ ಡಿಸಿಸಿ ಬ್ಯಾಂಕ್ ಗೆ ಕನ್ನ ಹಾಕಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಇದಕ್ಕೆ ಪ್ರತಿರೋಧ ತೋರಿದ ಸೆಕ್ಯೂರಿಟಿ ಗಾರ್ಡ್ ಅವರನ್ನ ಕೊಲೆ ಮಾಡಿ ಶೌಚಾಲಯಕ್ಕೆ ಎಸೆದಿದ್ದಾರೆ. ಬಳಿಕ ಷಟರ್ ಒಡೆದು ಲಕ್ಷಾಂತರ ರೂ ಹಣ ಮತ್ತು ಚಿನ್ನಾಭರಣಗಳನ್ನ ದರೋಡೆ ಮಾಡಿದ್ದಾರೆ. ಎಷ್ಟು, ಪ್ರಮಾಣದ ಚಿನ್ನದ ಒಡವೆಗಳು ಕಳ್ಳತನವಾಗಿವೆ ಎನ್ನುವುದು ಬ್ಯಾಂಕ್ ಅಧಿಕಾರಿಗಳ ಮಾಹಿತಿ ನಂತರವೇ ತಿಳಿಯಲಿದೆ.
ಕಳೆದ ಎರಡು ದಿನಗಳಿಂದ ಬ್ಯಾಂಕ್ ರಜಾ ಇತ್ತು. ಇಂದು ನೌಕರರು ಕರ್ತವ್ಯಕ್ಕೆ ಹಾಜರಾಗಲು ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಬೇಟಿ ನೀಡಿ ತಪಾಸಣೆ ನಡೆಸಿದರು. ಈಘಟನೆಯಿಂದ ಜನರು ಆತಂಕಗೊಂಡಿದ್ದು ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಸ್ತು ಹೆಚ್ಚಿಸುವಂತೆ ಎಸ್ ಪಿ ಅವರನ್ನ ಕೇಳಿಕೊಂಡರು.