ADVERTISEMENT
Friday, April 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಸಿದ್ದರಾಮಯ್ಯ-ಡಿಕೆಶಿ ಜಗಳದಲ್ಲೇ ಸರ್ಕಾರ ಬಲಿ: ದಲಿತ ಸಿಎಂ ಕನಸು ನನಸಾಗಲ್ಲ, ಬೊಕ್ಕಸ ಬರಿದಾಗಿದೆ ಎಂದು ಗುಡುಗಿದ ಯತ್ನಾಳ್

Shwetha by Shwetha
February 27, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ರಾಯಚೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಶೀತಲ ಸಮರ ತಾರಕಕ್ಕೇರಿದ್ದು, ಇವರಿಬ್ಬರ ಮುಸುಕಿನ ಗುದ್ದಾಟದಲ್ಲೇ ರಾಜ್ಯ ಸರ್ಕಾರ ಪತನವಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ರಾಯಚೂರಿನಲ್ಲಿ ಡಾ.ನಾಗರಾಜ ಬಾಲ್ಕಿ ಅವರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆಡಳಿತ ವೈಖರಿ, ಆಂತರಿಕ ಕಚ್ಚಾಟ ಹಾಗೂ ಭ್ರಷ್ಟಾಚಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Related posts

ಸಂವಿಧಾನದ ಹೆಸರಲ್ಲಿ ರಾಜಕೀಯ ಮಾಡಬೇಡಿ ಮುಸ್ಲಿಂ ಮೀಸಲಾತಿ ಅಸಾಧ್ಯ ಎಂದ ಅಮಿತ್ ಶಾ

ಸಂವಿಧಾನದ ಹೆಸರಲ್ಲಿ ರಾಜಕೀಯ ಮಾಡಬೇಡಿ ಮುಸ್ಲಿಂ ಮೀಸಲಾತಿ ಅಸಾಧ್ಯ ಎಂದ ಅಮಿತ್ ಶಾ

April 17, 2026
ಆಂಟಿ ಎಂದು ಕರೆಯುವ ಮುನ್ನ ನೂರು ಬಾರಿ ಯೋಚಿಸಿ: ಎರಡು ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್

ಆಂಟಿ ಎಂದು ಕರೆಯುವ ಮುನ್ನ ನೂರು ಬಾರಿ ಯೋಚಿಸಿ: ಎರಡು ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್

April 17, 2026

ಕುರ್ಚಿ ಕಾದಾಟದಲ್ಲಿ ಸರ್ಕಾರ ಪತನ?

ಕಾಂಗ್ರೆಸ್ ಪಕ್ಷದ ಒಳಜಗಳದ ಬಗ್ಗೆ ಮಾತನಾಡಿದ ಯತ್ನಾಳ್, ಸಿದ್ದರಾಮಯ್ಯ ಕುರ್ಚಿ ಬಿಡಲು ತಯಾರಿಲ್ಲ, ಇತ್ತ ಡಿ.ಕೆ. ಶಿವಕುಮಾರ್ ಸುಮ್ಮನೆ ಕೂರುತ್ತಿಲ್ಲ. ಇವರಿಬ್ಬರ ನಡುವಿನ ಅಧಿಕಾರದ ಹಗ್ಗಜಗ್ಗಾಟ ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಆಡಳಿತ ಪಕ್ಷದ ಈ ಇಬ್ಬರು ಪ್ರಬಲ ನಾಯಕರ ಜಗಳದ ಪರಿಣಾಮವಾಗಿ ಸರ್ಕಾರವೇ ಉರುಳುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದರು.

ದಲಿತ ಸಿಎಂ ಅಸಾಧ್ಯದ ಮಾತು

ಕಾಂಗ್ರೆಸ್ ಸರ್ಕಾರದಲ್ಲಿ ದಲಿತ ಮುಖ್ಯಮಂತ್ರಿಯ ಚರ್ಚೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ವ್ಯಂಗ್ಯವಾಗಿ ಉತ್ತರಿಸಿದ ಯತ್ನಾಳ್, ಕಾಂಗ್ರೆಸ್ ಪಕ್ಷದಲ್ಲಿ ದಲಿತರು ಸಿಎಂ ಆಗುವುದು ಅಸಾಧ್ಯದ ಮಾತು. ಇತಿಹಾಸ ನೋಡಿದರೆ ಇದು ತಿಳಿಯುತ್ತದೆ. ಕೆಪಿಸಿಸಿ ಅಧ್ಯಕ್ಷರಾಗಿದ್ದ ಎಸ್.ಎಂ. ಕೃಷ್ಣ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಆದರೆ, ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ಅಧ್ಯಕ್ಷರಿದ್ದಾಗ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಲಾಯಿತು. ಖರ್ಗೆಯಂತಹ ಹಿರಿಯ ನಾಯಕರಿಗೇ ಮೋಸ ಮಾಡಿದ ಪಕ್ಷದಲ್ಲಿ, ಈಗ ಬೇರೆ ದಲಿತ ನಾಯಕರಿಗೆ ಮಣೆ ಹಾಕುತ್ತಾರೆ ಎನ್ನುವುದು ಭ್ರಮೆ. ಸದ್ಯ ಸಿಎಂ ಮತ್ತು ಡಿಸಿಎಂ ನಡುವಿನ ಜಗಳವೇ ಬಗೆಹರಿಯುತ್ತಿಲ್ಲ, ಇನ್ನು ಮೂರನೇಯವರಿಗೆ ಅವಕಾಶ ಎಲ್ಲಿ ಸಿಗುತ್ತದೆ ಎಂದು ಪ್ರಶ್ನಿಸಿದರು.

ದಾಖಲೆ ಮುರಿದ ಭ್ರಷ್ಟಾಚಾರ

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು, ಕೇವಲ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದರು. ನಾನು ವಿಧಾನಸಭೆಯಲ್ಲೇ ಮುಖ್ಯಮಂತ್ರಿಗಳ ಮುಖಕ್ಕೆ ಹೇಳಿದ್ದೇನೆ. ನೀವು ದೀರ್ಘಕಾಲ ಸಿಎಂ ಆಗಿ ದೇವರಾಜ ಅರಸು ಅವರ ದಾಖಲೆ ಮುರಿದಿರಬಹುದು, ಅತಿ ಹೆಚ್ಚು ಬಜೆಟ್ ಮಂಡಿಸಿರಬಹುದು. ಆದರೆ, ರಾಜ್ಯ ಕಂಡ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಎಂಬ ಹಣೆಪಟ್ಟಿ ಕಟ್ಟಿಕೊಂಡು ಹೋಗಬೇಡಿ ಎಂದು ಎಚ್ಚರಿಸಿದ್ದೇನೆ ಎಂದರು.

ಯಾವುದೇ ಇಲಾಖೆಯ ಮೇಲೆ ಹಿಡಿತವಿಲ್ಲ, ಲಂಚವಿಲ್ಲದೆ ಕೆಲಸಗಳಾಗುತ್ತಿಲ್ಲ. ಅಭಿವೃದ್ಧಿಗೆ ಬಿಡಿಗಾಸು ಹಣವಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಕೂಡ ಸರ್ಕಾರದ ಬಳಿ ಹಣವಿರುವುದಿಲ್ಲ ಎಂದು ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಉದ್ಯೋಗ ಸೃಷ್ಟಿಯೇ ಬಡತನಕ್ಕೆ ಪರಿಹಾರ

ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಪ್ರಸ್ತಾಪಿಸಿದ ಯತ್ನಾಳ್, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು 2.80 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ. ಪೊಲೀಸ್ ಇಲಾಖೆಯೊಂದರಲ್ಲೇ 20,000 ಹುದ್ದೆಗಳಿವೆ, ಶಾಲೆಗಳಲ್ಲಿ ಶಿಕ್ಷಕರಿಲ್ಲ, ಪಂಚಾಯ್ತಿಗಳಲ್ಲಿ ಪಿಡಿಒಗಳಿಲ್ಲ. ಸರ್ಕಾರ ಕೇವಲ ಭಾಗ್ಯಗಳ ಹೆಸರಿನಲ್ಲಿ ಕಾಲಹರಣ ಮಾಡುವ ಬದಲು, ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದರೆ ಸುಮಾರು 2.80 ಲಕ್ಷ ಕುಟುಂಬಗಳು ಆರ್ಥಿಕವಾಗಿ ಸಬಲವಾಗುತ್ತವೆ. ಆಗ ಅವರಿಗೆ ಬಿಪಿಎಲ್ ಕಾರ್ಡ್ ಅಥವಾ ಉಚಿತ ರೇಷನ್ ಅಗತ್ಯವೇ ಇರುವುದಿಲ್ಲ. ಸರ್ಕಾರ ಮೊದಲು ಯುವಕರಿಗೆ ಉದ್ಯೋಗ ನೀಡಲಿ, ಆನಂತರ ಉಳಿದ ಬಡವರಿಗೆ ರೇಷನ್ ಕೊಡಲಿ ಎಂದು ಸಲಹೆ ನೀಡಿದರು.

ShareTweetSendShare
Join us on:

Related Posts

ಸಂವಿಧಾನದ ಹೆಸರಲ್ಲಿ ರಾಜಕೀಯ ಮಾಡಬೇಡಿ ಮುಸ್ಲಿಂ ಮೀಸಲಾತಿ ಅಸಾಧ್ಯ ಎಂದ ಅಮಿತ್ ಶಾ

ಸಂವಿಧಾನದ ಹೆಸರಲ್ಲಿ ರಾಜಕೀಯ ಮಾಡಬೇಡಿ ಮುಸ್ಲಿಂ ಮೀಸಲಾತಿ ಅಸಾಧ್ಯ ಎಂದ ಅಮಿತ್ ಶಾ

by Shwetha
April 17, 2026
0

ನವದೆಹಲಿ ಲೋಕಸಭೆಯಲ್ಲಿ ನಿನ್ನೆ ನಡೆದ ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗಳ ಮೇಲಿನ ಸುದೀರ್ಘ ಚರ್ಚೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು...

ಆಂಟಿ ಎಂದು ಕರೆಯುವ ಮುನ್ನ ನೂರು ಬಾರಿ ಯೋಚಿಸಿ: ಎರಡು ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್

ಆಂಟಿ ಎಂದು ಕರೆಯುವ ಮುನ್ನ ನೂರು ಬಾರಿ ಯೋಚಿಸಿ: ಎರಡು ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್

by Shwetha
April 17, 2026
0

ಬೆಂಗಳೂರು ಅಥವಾ ಇತರ ನಗರಗಳಲ್ಲಿ ಪರಿಚಯವಿಲ್ಲದ ಮಹಿಳೆಯರನ್ನು ಅಥವಾ ಸಹೋದ್ಯೋಗಿಗಳನ್ನು ಆಂಟಿ ಎಂದು ಕರೆಯುವುದು ಹಲವರಿಗೆ ಅಭ್ಯಾಸವಾಗಿಬಿಟ್ಟಿದೆ. ಕೆಲವರು ಗೌರವದಿಂದ ಕರೆದರೆ, ಇನ್ನು ಕೆಲವರು ಗೇಲಿ ಮಾಡಲು...

ಪ್ರತ್ಯೇಕ ಪಹಣಿ (RTC) ಪಡೆಯಲು ಪೋಡಿ ಏಕೆ ಮುಖ್ಯ? ಪೋಡಿ ಇಲ್ಲದೆ ಜಮೀನು ಮಾರಲು ಸಾಧ್ಯವೇ?

ಪ್ರತ್ಯೇಕ ಪಹಣಿ (RTC) ಪಡೆಯಲು ಪೋಡಿ ಏಕೆ ಮುಖ್ಯ? ಪೋಡಿ ಇಲ್ಲದೆ ಜಮೀನು ಮಾರಲು ಸಾಧ್ಯವೇ?

by Shwetha
April 17, 2026
0

ಗ್ರಾಮೀಣ ಭಾಗದ ರೈತರಲ್ಲಿ ಜಮೀನಿನ ಹಕ್ಕು ಮತ್ತು ಗಡಿ ವಿವಾದಗಳು ಸರ್ವೇ ಸಾಮಾನ್ಯ. ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರವೇ ಪೋಡಿ. ಬಹುತೇಕ ರೈತರಿಗೆ ಪೋಡಿ ಎಂದರೆ ಏನು,...

ಯೋಗೇಶ್ ಗೌಡ ಹತ್ಯೆ ಪ್ರಕರಣ ವಿನಯ್ ಕುಲಕರ್ಣಿ ಸೇರಿ 17 ಮಂದಿ ದೋಷಿ ಪಾಪಪ್ರಜ್ಞೆಯಿಂದ ಸತ್ಯ ಬಿಚ್ಚಿಟ್ಟ ಮಾಫಿ ಸಾಕ್ಷಿ ಬಸವರಾಜ್ ಮುತ್ತಗಿ

ಯೋಗೇಶ್ ಗೌಡ ಹತ್ಯೆ ಪ್ರಕರಣ ವಿನಯ್ ಕುಲಕರ್ಣಿ ಸೇರಿ 17 ಮಂದಿ ದೋಷಿ ಪಾಪಪ್ರಜ್ಞೆಯಿಂದ ಸತ್ಯ ಬಿಚ್ಚಿಟ್ಟ ಮಾಫಿ ಸಾಕ್ಷಿ ಬಸವರಾಜ್ ಮುತ್ತಗಿ

by Shwetha
April 17, 2026
0

ಧಾರವಾಡದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣವು ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಭಾರೀ ಸಂಚಲನ ಸೃಷ್ಟಿಸಿದೆ. ಹಲವು ವರ್ಷಗಳಿಂದ ಕುತೂಹಲ ಕೆರಳಿಸಿದ್ದ ಈ...

ನಿಮ್ಮ ಪ್ಲಾನ್ ನೋಡಿ ಚಾಣಕ್ಯನೇ ಬೆಚ್ಚಿ ಬೀಳುತ್ತಿದ್ದ ಅಮಿತ್ ಶಾ ಗೆ ಪ್ರಿಯಾಂಕಾ ಗಾಂಧಿ ನೀಡಿದ ಖಡಕ್ ತಿರುಗೇಟು

ನಿಮ್ಮ ಪ್ಲಾನ್ ನೋಡಿ ಚಾಣಕ್ಯನೇ ಬೆಚ್ಚಿ ಬೀಳುತ್ತಿದ್ದ ಅಮಿತ್ ಶಾ ಗೆ ಪ್ರಿಯಾಂಕಾ ಗಾಂಧಿ ನೀಡಿದ ಖಡಕ್ ತಿರುಗೇಟು

by Shwetha
April 17, 2026
0

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಕುರಿತು ನಡೆದ ಚರ್ಚೆಯು ಕೇವಲ ರಾಜಕೀಯ ಸಂಘರ್ಷಕ್ಕೆ ಮಾತ್ರವಲ್ಲದೆ ಹಾಸ್ಯ ಮತ್ತು ಚುಚ್ಚುಮಾತಿನ ಪ್ರಸಂಗಗಳಿಗೂ ಸಾಕ್ಷಿಯಾಯಿತು. ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram