ಸಿನಿಮೀಯ ರೀತಿಯಲ್ಲಿ ಕಾರು ಚೇಸ್ ಮಾಡಿದ ಪೊಲೀಸರು
ಹಾಸನ: ಸಿನಿಮೀಯ ರೀತಿಯಲ್ಲಿ ಪೋಲಿಸರು ಕಾರು ಚೇಸ್ ಮಾಡಿ ಆರೋಪಿಗಳನ್ನು ಟ್ಯಾಕಲ್ ಮಾಡಿರುವ ಘಟನೆಯು ಹಾಸನದ ಬಿ.ಎಂ ರಸ್ತೆಯ ಡಿಸಿ ಕಚೇರಿ ಎದುರು ನಡೆದಿದೆ. ತಮಿಳುನಾಡಿನ ಪೋಲಿಸರು ಹಾಸನ ಪೊಲೀಸರ ಸಹಾಯದಿಂದ ಆರೋಪಿಗಳನ್ನು ಸೆರೆ ಹಿಡಿದ್ದಿದ್ದಾರೆ.
ಕಾರನ್ನು ಸುತ್ತುವರಿದು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಆದರೆ ಯಾವ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂಬುದರ ಕುರಿತು ಇನ್ನೂ ಮಾಹಿತಿ ದೊರೆತಿಲ್ಲ ಎಂದು ಹಾಸನ ಎಸ್ಪಿ ಆರ್.ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ.