
ಹೀಗೆಂದು ಅನುಮಾನ ಪಟ್ಟಿರೋದು ಬಹುಪಾಲು ಇಂಟರ್ ಪೋಲ್ ನಿರ್ದೇಶಿತ ಅಧಿಕಾರಿಗಳೇ ತುಂಬಿಕೊಂಡಿರುವ ಮತ್ತು ಇಂಟರ್ ಪೋಲ್ ಜೊತೆಗೆ ಅತ್ಯುತ್ತಮ ಸಂಬಂಧ ಹೊಂದಿರುವ ಜಗತ್ತಿನ ಅತ್ಯಂತ ಚಾಣಾಕ್ಷ ಬೇಹುಗಾರಿಕಾ ಪಡೆ ಯುನೈಟೆಡ್ ಸ್ಟೇಟ್ಸ್ ನ ಗುಪ್ತಚರ ಇಲಾಖೆ. ಈ ರೀತಿಯ ಅನುಮಾನಸ್ಪದ ವರದಿಯೊಂದನ್ನು ಯುಎಸ್ ಇಂಟೆಲಿಜೆನ್ಸಿ ಒಂದಷ್ಟು ಅಂಕಿ ಅಂಶಗಳನ್ನು ತರ್ಕ ಸಹಿತ ಶ್ವೇತಭವನಕ್ಕೆ ಸಲ್ಲಿಸಿದೆ. ನಮ್ಮಲ್ಲಿ ಬಹಳಷ್ಟು ಜನರಿಗೆ ಈ ವಿಚಾರ ಗೊತ್ತಿಲ್ಲ. ಅಮೇರಿಕಾದ ಗುಪ್ತಚರ ಇಲಾಖೆಯ ಹದ್ದಿನ ಕಣ್ಣು ಇರುವ ಏಷ್ಯಾದ ಎರಡು ರಾಷ್ಟ್ರಗಳ ಪೈಕಿ ಒಂದು ಭಾರತವಾದರೆ, ಇನ್ನೊಂದು ಚೀನಾ. Epoch time ವರದಿಯಂತೆ ಕರೋನಾ ವೈರಸ್ ಸೋಂಕಿಗೆ ಕನಿಷ್ಟ 20.9 ಮಿಲಿಯನ್ ಜನರು ಈಗಾಗಲೆ ಬಲಿಯಾಗಿದ್ದಾರೆ. ಆದರೆ ಈ ವಿಚಾರವನ್ನು ಮುಚ್ಚಿಟ್ಟಿರುವ ಚೀನಾ ತನ್ನ ಪ್ರಜೆಗಳ ಸಾವಿನ ಸಂಖ್ಯೆಯನ್ನು ಮೂರುಕಾಲು ಸಾವಿರದಲ್ಲೇ ನಿಲ್ಲಿಸಿಕೊಂಡಿದೆ.
ಬೀಜಿಂಗ್ ಮೂಲಗಳು ನೀಡಿದ ಕೆಲವು ಸಂದೇಹಾಸ್ಪದ ವಿವರಣೆಯನ್ನು ತುಲನೆ ಮಾಡಿ ನೋಡಿದ ಗುಪ್ತಚರ ಇಲಾಖೆ ಒಂದಷ್ಟು ಪ್ರಶ್ನೆಗಳನ್ನು ಎತ್ತಿದೆ.
* ಮಾರ್ಚ್ 19ರಂದು ಬೀಜಿಂಗ್ ಘೋಷಿಸಿದಂತೆ 21 ಮಿಲಿಯನ್ ಫೋನ್ ಗಳು ಸ್ಥಗಿತಗೊಂಡಿವೆ. ಅಥವಾ ಚೀನಾ ಅಷ್ಟು ಪ್ರಮಾಣದ ಸಂಪರ್ಕಗಳನ್ನು ಚೀನಾ ರದ್ದುಗೊಳಿಸಿದೆ. 23 ವರ್ಷಗಳ ಚೀನಾದ ಮೊಬೈಲ್ ಕ್ರಾಂತಿಯುಗದಲ್ಲೇ ಇದು
ದಾಖಲೆಯ ಕುಸಿತ. ಇಷ್ಟು ದೊಡ್ಡ ಪ್ರಮಾಣದಲ್ಲಿ ಸಂಪರ್ಕ ರದ್ದು ಮಾಡಲು ಇರುವ ಕಾರಣಗಳೇನು?
* ಕಳೆದ ಮೂರು ತಿಂಗಳಲ್ಲಿ 8ಲಕ್ಷದ 40 ಸಾವಿರ ಲ್ಯಾಂಡ್ ಲೈನ್ ಸಂಪರ್ಕ ಕಡಿತಗೊಂಡಿರುವುದೇಕೆ?

* ಮೊಬೈಲ್ ಆಗಲಿ ಅಥವಾ ಲ್ಯಾಂಡ್ ಲೈನ್ ಸಂಪರ್ಕವಾಗಲಿ ಅದನ್ನು ಬಳಸುವ ವ್ಯಕ್ತಿಯ ಮರಣಾನಂತರವಲ್ಲದೇ ಇನ್ನು ಯಾವ ಕಾರಣಕ್ಕೆ ರದ್ದು ಮಾಡಲಾಗುತ್ತದೆ?
* ಚೀನಾ ಅಧಿಕೃತವಾಗಿ ಹೇಳಿರುವ ತನ್ನ ರಾಷ್ಟ್ರದ 81000 ಸೋಂಕಿತರು ಮತ್ತು 3300 ಸಾವಿಗೀಡಾದವರು ಎಂಬ ಅಂಕಿ ಅಂಶಗಳು ನಿಜವೇ?
* ಮೊಬೈಲ್ ಮೂಲಕವೇ ಎಲ್ಲಾ ಅಗತ್ಯ ಕೆಲಸ ಮಾಡಿಕೊಳ್ಳಬಹುದಾದ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಚೀನಾದಲ್ಲಿ ಇಷ್ಟು ಅಗಾಧ ಪ್ರಮಾಣದ ಮೊಬೈಲ್ ಕ್ಯಾನ್ಸಲ್ ಆಗುವುದರ ಹಿಂದಿನ ತರ್ಕವೇನು?
* ಸಂಪೂರ್ಣ ಡಿಜಿಟಲೀಕರಣಗೊಂಡಿರುವ ಚೀನಾದಲ್ಲಿ ಮೊಬೈಲ್ ಬಳಕೆದಾರರಿಲ್ಲದ ಪ್ರಜೆಗಳೇ ಇಲ್ಲ. ಮಾರ್ಚ್ 21ರಂದು ಚೀನಾ ರಾಜತಾಂತ್ರಿಕ ವ್ಯವಹಾರ ಇಲಾಖೆ ಅಧಿಕಾರಿ ಟಾಂಗ್ ಜಿಂಗ್ಯುನ್ The Epoch Times ಗೆ ನೀಡಿರುವ ಹೇಳಿಕೆ ಪ್ರಕಾರ, ಚೀನಾದಲ್ಲಿ ಅನ್ನವಿಲ್ಲದೇ ಒಂದು ಹೊತ್ತು ಕಳೆಯುವ ಪ್ರಜೆಗಳು ತಮ್ಮ ಸೆಲ್ ಫೋನ್ ಇಲ್ಲದೇ ಒಂದು ನಿಮಿಷವೂ ಇರಲಾರರು. ಸರ್ಕಾರದ ಪಿಂಚಣಿಯಿಂದ, ಸಾಮಾಜಿಕ ಭದ್ರತೆವರೆಗೆ, ಆನ್ ಲೈನ್ ಶಾಪಿಂಗ್ ನಿಂದ ರೈಲುಗಳ ಬುಕ್ಕಿಂಗ್ ವರೆಗೆ ಪ್ರತಿಯೊಂದಕ್ಕೂ ಚೀನಿಯರಿಗೆ ಸೆಲ್ ಫೋನ್ ಬೇಕು. ಹಾಗಿದ್ದಾಗ 21 ಮಿಲಿಯನ್ ಚೀನಿಯರ ಸೆಲ್ ಫೋನ್ ಸ್ಥಗಿತಗೊಂಡಿದೆ ಎಂದಾದರೆ ಇದಕ್ಕಿರುವ ಬಲವಾದ ಸಮರ್ಥನೆ ಏನು?

* ಚೀನಾದಲ್ಲಿ ವೈದ್ಯಕೀಯ ನೆರವು ಪಡೆದುಕೊಳ್ಳಲು ಹೆಲ್ತ್ ಕೋಡ್ ಬೇಕು. ಅದಕ್ಕೆ ಸರ್ಕಾರದ ದಾಖಲೆಗಳಲ್ಲಿ ನಮೂದಾಗಿರುವ ಸೆಲ್ ಫೋನ್ ಬೇಕು. ಹೀಗಿದ್ದಾಗ ಅಪಾರ ಪ್ರಮಾಣದ ಸೆಲ್ ಫೋನ್ ಸ್ಥಗಿತಗೊಂಡಿದೆ ಎಂದರೆ ಒಂದೋ ಆ ವ್ಯಕ್ತಿಗಳ ವೈದ್ಯಕೀಯ ಪರವಾನಗಿ ಗ್ರೀನ್ ಹೆಲ್ತ್ ಕೋಡ್ ಸಹ ರದ್ದಾಗಿರಬೇಕು ಅಥವಾ ಆ ವ್ಯಕ್ತಿಗಳು ಸತ್ತಿರಬೇಕು. ಇದನ್ನು ಚೀನಾ ಸ್ಪಷ್ಟಪಡಿಸುತ್ತದೆಯೇ?
* ಯುಎಸ್ ಇಂಟೆಲಿಜೆನ್ಸಿ ನವೆಂಬರ್ ನಲ್ಲಿ ವೈರಸ್ ಸಂಭವನೀಯ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದಾಗ, ಡಿಸೆಂಬರ್ 1 ರಿಂದ ಚೀನಾ ಆಡಳಿತ ಕಡ್ಡಾಯ ಫೇಸ್ ಸ್ಕ್ಯಾನ್ ಜಾರಿಗೆ ತಂದಿತ್ತು. ಆಗ ಪ್ರಜೆಗಳ ಗುರುತಿನ ದೃಢೀಕರಣಕ್ಕೆ ಅಧಿಕೃತ ನೊಂದಾಯಿತ ಸೆಲ್ ಫೋನ್ ಕಡ್ಡಾಯವಾಗಿತ್ತು. ಇದಕ್ಕೆ ಚೀನಾ ದಾಖಲೆಗಳು ಏನು ಹೇಳುತ್ತವೆ? ಸ್ಥಗಿತಗೊಂಡ ಸೆಲ್ ಫೋನ್ ವ್ಯಕ್ತಿಗಳ ದಾಖಲೆ ಎಲ್ಲಿ ಹೋದವು?
* ಸೆಪ್ಟೆಂಬರ್ 1, 2010ರಿಂದಲೇ ಚೀನಾದಲ್ಲಿ ತನ್ನೆಲ್ಲಾ ಮೊಬೈಲ್ ಬಳಕೆದಾರರಿಗೆ ಸರ್ಕಾರಿ ದಾಖಲಾತಿಗಳೊಂದಿಗೆ ನೊಂದಾಯಿಸಿಕೊಳ್ಳಲು ಆದೇಶ ಜಾರಿಮಾಡಿದೆ. ಲಾರ್ಜ್ ಸ್ಕೇಲ್ ನಲ್ಲಿ ಜನರ ಧ್ವನಿಯನ್ನು ಗಮನದಲ್ಲಿಟ್ಟುಕೊಂಡು ಮಾನಿಟರಿಂಗ್ ಮಾಡಲು ಚೀನಾ ಅನುಸರಿಸಿದ ತಂತ್ರವಿದು.
* ಚೀನಾದಲ್ಲಿ ಬ್ಯಾಂಕ್ ಖಾತೆ, ಶೇರು ಮಾರುಕಟ್ಟೆ, ಸಾಮಾಜಿಕ ಜಾಲತಾಣಗಳ ಖಾತೆ ಇವೆಲ್ಲವೂ ಆ್ಯಪ್ ಆಧಾರಿತ. ಇವುಗಳನ್ನೆಲ್ಲಾ ಆ್ಯಕ್ಸೆಸ್ ಮಾಡಲು ರಿಜಿಸ್ಟರ್ ಆಗಿರುವ ಸೆಲ್ ನಂಬರ್ ಬೇಕು. ಈಗ 21 ಮಿಲಿಯನ್ ಸೆಲ್ ಫೋನ್ ರದ್ದಾದರೆ ಆ ಖಾತೆಗಳ ಕಥೆಯೇನು?

* ಮಾರ್ಚ್ 10ರಂದು ಬೀಜಿಂಗ್ ನಲ್ಲಿ ಮೊಬೈಲ್ ಫೋನ್ ಆಧಾರಿತ ಮೂರು ಬಣ್ಣಗಳ ಹೆಲ್ತ್ ಕೋಡ್ ಆ್ಯಪ್ ಜಾರಿ ಮಾಡಿತು. ಇದರಲ್ಲಿ ಪ್ರಜೆಗಳ ಖಾಸಗಿ ಆರೋಗ್ಯ ಸಂಬಂಧಿ ವಿವರಣೆಗಳಿದ್ದವು. ಆ್ಯಪ್ ನಲ್ಲಿ ಕ್ಯೂ ಆರ್ ಕೋಡ್ ಜನರೇಟ್ ಮಾಡಿ, ಮೂರು ಬಣ್ಣಗಳ ಮುಖಾಂತರ ಜನರ ಆರೋಗ್ಯ ಗುರುತಿಸಲಾಗುತ್ತಿತ್ತು. ಕೆಂಪು ಬಣ್ಣ ಸೋಂಕಿತ, ಹಳದಿ ಸೋಂಕು ತಗಲುವ ಸಾಧ್ಯತೆ ಇದೆ ಮತ್ತು ಹಸಿರು ಸೋಂಕಿಲ್ಲದ ವ್ಯಕ್ತಿ ಎಂದು ವಿಭಾಗಿಸುವ ವ್ಯವಸ್ಥೆ ಮಾಡಲಾಗಿತ್ತು. ಈಗ ಸ್ಥಗಿತಗೊಂಡ 21 ಮಿಲಿಯನ್ ಮೊಬೈಲ್ ಗಳಲ್ಲಿ ಜನರೇಟ್ ಆದ ಹೆಲ್ತ್ ಕೋಡ್ ಕಲರ್ ಯಾವುದು?
* ಸೆಲ್ ಫೋನ್ ಗಳ ಬಳಕೆದಾರರ ಸಂಖ್ಯೆ ಈ ನಾಲ್ಕು ತಿಂಗಳ ಅವಧಿಯಲ್ಲಿ 1.600957 ಬಿಲಿಯನ್ ನಿಂದ 1.579927 ಬಿಲಿಯನ್ ಗೆ ಇಳಿಕೆಯಾಗಿದೆ. ಅಂದರೆ 21.03 ಮಿಲಿಯನ್ ಕುಸಿತ. ಲ್ಯಾಂಡ್ ಲೈನ್ ಸೇವೆಗಳು 190.83 ಮಿಲಿಯನ್ ನಿಂದ 189.99 ಮಿಲಿಯನ್ ಗೆ ಕುಸಿತವಾಗಿದೆ. ಅಂದರೆ 0.84 ಮಿಲಿಯನ್ ಬಳಕೆದಾರರು ಕಡಿಮೆ. ಈ ಬಗ್ಗೆ ಚೀನಾ ಈ ವರೆಗೆ ಸೂಕ್ತ ಕಾರಣ ಏಕೆ ನೀಡಿಲ್ಲ?
* 2020ರಲ್ಲಿ ಹೋಂ ಕ್ವಾರಂಟೈನ್ ಕಾರಣಕ್ಕೆ ಲ್ಯಾಂಡ್ ಲೈನ್ ಬಳಕೆದಾರರು ಕಡಿಮೆಯಾಗಬಹುದೇ ಹೊರತು ಮೊಬೈಲ್ ಸಂಖ್ಯೆ ಬಳಕೆದಾರರು ಕಡಿಮೆಯಾಗುವ ಸಾಧ್ಯತೆಗಳೇ ಇಲ್ಲ.
ಯುಎಸ್ ಇಂಟೆಲಿಜನ್ಸಿಯ ಈ ವರದಿ ಕಾನ್ಸ್ ಪಿರಸಿ ಥಿಯರಿ ಎಂದೇ ಚೀನಾ ವಾದಿಸುವುದಾದರೆ ಮೊದಲು ಈ ಮೇಲಿನ ಪ್ರಶ್ನೆಗಳಿಗೆ ದಾಖಲೆ ಸಹಿತ ಉತ್ತರ ನೀಡಬೇಕು. ಅಥವಾ ತನ್ನ ನೆಲದಲ್ಲಿ ಸತ್ತವರ ಸಂಖ್ಯೆ ಮೂರುಕಾಲು ಸಾವಿರವಲ್ಲ ಬದಲಿಗೆ ಎರಡೂಕಾಲು ಕೋಟಿ ಎಂದು ಒಪ್ಪಿಕೊಳ್ಳಬೇಕು. ಇರಲಿ ಇವತ್ತಲ್ಲ ನಾಳೆ ಈ ಕರೋನಾ ವೈರಸ್ ಅನಾಹುತದ ಹಿಂದೆ ಇರುವುದು ಚೀನಾವೋ ಅಮೇರಿಕಾವೋ ಬೆಳಕಿಗೆ ಬರಲೇಬೇಕು.
ಮೂಲಗಳು:
The Asian Age
inventiva.co.in
cnbc