25 ನೇ ದಿನಕ್ಕೆ ಕಾಲಿಟ್ಟ ‘ದಿ ಕಾಶ್ಮೀರ್ ಫೈಲ್ಸ್’ – ಶೀಘ್ರದಲ್ಲೆ 250 ಕೋಟಿ ಕ್ಲಬ್ ಗೆ ಸೇರ್ಪಡೆ..
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಮೂರು ವಾರಗಳ ಹಿಂದೆ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಸಂಚಲನವನ್ನೇ ಸೃಷ್ಠಿಸಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಭಾರಿ ಮೆಚ್ಚುಗೆ ಕಾರಣವಾದ ಅನುಪಮ್ ಖೇರ್ ಅಭಿನಯದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ಕ್ಲಬ್‌ಗೆ ಸೇರಿದೆ. ಶೀಘ್ರದಲ್ಲೇ 250 ಕೋಟಿ ಗಡಿ ದಾಟಲಿದೆ ಕಾಶ್ಮೀರ್ ಫೈಲ್ಸ್.
25 ದಿನ ಪೂರೈಸಿದ ಚಿತ್ರ
ಅಟ್ಯಾಕ್, ಮೊರ್ಬಿಯಸ್ ಮತ್ತು RRR ಚಿತ್ರಗಳ ನಡುವೆಯೂ ‘ದಿ ಕಾಶ್ಮೀರ್ ಫೈಲ್ಸ್’ ನಾಲ್ಕನೇ ವಾರದಲ್ಲಿ ರೂ 250 ಕೋಟಿ ಕ್ಲಬ್‌ಗೆ ಪ್ರವೇಶಿಸಲು ಸಿದ್ಧವಾಗಿದೆ. ಆದರೆ, ವಿವೇಕ್ ಅಗ್ನಿಹೋತ್ರಿ ಅವರ ಚಿತ್ರವು ಕಳೆದ 25 ನೇ ದಿನದಲ್ಲಿ ನಿನ್ನೆ ಅತಿ ಕಡಿಮೆ ವಹಿವಾಟು ಮಾಡಿದೆ. ನಾಲ್ಕನೇ ಸೋಮವಾರದಂದು, ‘ದಿ ಕಾಶ್ಮೀರ್ ಫೈಲ್ಸ್’ ಬಾಕ್ಸ್ ಆಫೀಸ್‌ನಲ್ಲಿ 1 ಕೋಟಿ ಗಳಿಸಿತು. ಇದರೊಂದಿಗೆ ಅನುಪಮ್ ಖೇರ್ ಅಭಿನಯದ ಚಿತ್ರದ ಒಟ್ಟು ಕಲೆಕ್ಷನ್ 245.49 ಕೋಟಿ ರೂ.ಗೆ ಏರಿಕೆಯಾಗಿದೆ.
ವಿಶ್ವಾದ್ಯಂತ 300 ಕೋಟಿ ರೂ
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರತಂಡ ಬಾಕ್ಸ್ ಆಫೀಸ್ ಕಂಡ ಯಶಸ್ಸನ್ನ ಸೆಲೆಬ್ರೇಟ್ ಮಾಡುತ್ತಿದ್ದೆ. ವಿಶ್ವದಾದ್ಯಂತ ಈ ಚಿತ್ರದ ಬಾಕ್ಸ್ ಆಫೀಸ್ ಗಳಿಕೆ 331 ಕೋಟಿ ದಾಟಿದೆ. ಭಾರತದಲ್ಲಿ 250 ಕೋಟಿ ರೂ.ಗಳ ಗಡಿ ದಾಟುವ ಸನಿಹದಲ್ಲಿದೆ.








