ADVERTISEMENT
Tuesday, August 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

The Kashmir Files: ರಕ್ತ ಚರಿತ್ರೆಯ ರಕ್ತಸಿಕ್ತ ಅಧ್ಯಾಯಗಳು

Vivek Biradar by Vivek Biradar
March 17, 2022
in Marjala Manthana, Newsbeat, ಮಾರ್ಜಲ ಮಂಥನ
The Kashmir Files Saaksha Tv
Share on FacebookShare on TwitterShare on WhatsappShare on Telegram

The Kashmir Files: ರಕ್ತ ಚರಿತ್ರೆಯ ರಕ್ತಸಿಕ್ತ ಅಧ್ಯಾಯಗಳು – Saaksha Tv

The Kashmir Files #Right_to_Justice ಶಿರ್ಷಿಕೆ ಅಡಿಯಲ್ಲಿ ಮಾರ್ಚ 11 ರಂದು ಹಿಂದಿ ಭಾಷೆಯಲ್ಲಿ ತೆರೆಕಂಡ ಚಿತ್ರ. ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದ್ದು, 1989-1990ರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ಮತಾಂತರದ ದೌರ್ಜ್ಯವನ್ನು ಈ ಚಿತ್ರದಲ್ಲಿ ತೋರಿಸಲಗಿದೆ. ಸಧ್ಯ ಈ ಚಿತ್ರದ ದೇಶದ ತುಂಬೆಲ್ಲಾ ಸಾಕಷ್ಟು ಸದ್ಧು ಮಾಡುತ್ತಿದ್ದು, ಚಿತ್ರವನ್ನು ನೋಡಲು ಸಾಕಷ್ಟು ಜನರು ಮುಗಿ ಬೀಳುತ್ತಿದ್ದಾರೆ. ಅಲ್ಲದೇ ಕೆಲವೊಂದು ರಾಜ್ಯ ಸರಕಾರಗಳು ಚಿತ್ರವನ್ನು ನೋಡಲು, ಚಿತ್ರದ ಟಿಕೆಟ್ ಮೇಲಿನ್ ತೆರಿಗೆ ಶೇ 100 ರಷ್ಟು ತೆಗೆದಿವೆ.

Related posts

slum-dog-movie-glimpse-tabu-gauri-hegde-vijay-sethupathi-puri-jagannadh

ವಿಜಯ್ ಸೇತುಪತಿ ಮತ್ತು ಪೂರಿ ಜಗನ್ನಾಥ್ ಅವರ ಬಹುನಿರೀಕ್ಷಿತ ಆಕ್ಷನ್-ಡ್ರಾಮಾ ‘ಸ್ಲಮ್ ಡಾಗ್’ ಚಿತ್ರದ ಹೊಸ ಗ್ಲಿಂಪ್ಸ್ ರಿಲೀಸ್;

August 11, 2026
varamahalakshmi-vrata-ashtalakshmi-coin-remedy-for-wealth

ವರಮಹಾಲಕ್ಷ್ಮಿ ವ್ರತದ ದಿನದಂದು ಎಂಟು ಒಂದು ರೂಪಾಯಿ ನಾಣ್ಯಗಳನ್ನು ಇಟ್ಟು ಅಷ್ಟಲಕ್ಷ್ಮಿ ದೇವತೆಗಳ ಆಶೀರ್ವಾದವನ್ನು ಪಡೆಯುವ ಮೂಲಕ ಮಾಡಬಹುದಾದ ತಾಂತ್ರಿಕ ಪರಿಹಾರ.

August 11, 2026

ಇನ್ನೂ ಚಿತ್ರವನ್ನು ವಿವೇಕ ಅಗ್ನಿಹೋತ್ರಿ ನಿರ್ದೇಶಿಸಿದ್ದು, ಅವರು ಒಂದು ಸಂದರ್ಶನದಲ್ಲಿ ಈ ಚಿತ್ರವನ್ನು ನಿರ್ಮಿಸಲು 2 ವರ್ಷಗಳಕಾಲ ಕಾಶ್ಮೀರದಲ್ಲಿ 700 ಕ್ಕೂ ಹೆಚ್ಚು ಸಂತ್ರಸ್ತರನ್ನು ಸಂದರ್ಶಿಸಿದ್ದೇವೆ. ಅವರ ಸಂದರ್ಶನಗಳ ಆಧಾರದ ಮೇಲೆ ಚಿತ್ರವನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವು ಪುಷ್ಕರ್ ನಾಥ್ ಪಂಡಿತ್ ಅವರ ಕುಟುಂಬದ ಸುತ್ತ ಸುತ್ತುತ್ತದೆ, ಈ ಪಾತ್ರವನ್ನು ನಟ ಅನುಪಮ್ ಖೇರ್ ಅಭಿನಯಿಸಿದ್ದಾರೆ, ಅವರ ಮಗ ಇಸ್ಲಾಮಿಕ್ ಜಿಹಾದಿಗಳ  ಹಿಟ್ ಲಿಸ್ಟ್‌ನಲ್ಲಿ ಇರುತ್ತಾನೆ ಮತ್ತು ನಂತರ ಭಯೋತ್ಪಾದಕರಿಂದ ಕೊಲ್ಲಪಡುತ್ತಾರೆ, ಸೊಸೆ ಸಾರ್ವಜನಿಕವಾಗಿ ಕೊಲ್ಲಲ್ಪಟ್ಟರು. ಮತ್ತು ಮೊಮ್ಮಗಿನಿಗೆ ತಲೆಗೆ ಗುಂಡು ಹೊಡೆದು ಕೊಲ್ಲಲಾಗುತ್ತದೆ. ಸಿನಿಮಾದಲ್ಲಿ ತೋರಿಸುವ ಕುಟುಂಬದ ನೋವು, ಧರ್ಮದ ಹೆಸರಿನಲ್ಲಿ ಮನುಷ್ಯರು ಸಹ ಮನುಷ್ಯರ ವಿರುದ್ಧ ಇಷ್ಟು ಕ್ರೂರವಾಗಲು ಸಾಧ್ಯನಾ ಎಂದು ಪ್ರೇಕ್ಷಕರನ್ನು ಪ್ರಶ್ನಿಸುವಂತೆ ಮಾಡುತ್ತದೆ. ಚಿತ್ರದಲ್ಲಿ ಒಂಬತ್ತು ಘಟನೆಗಳನ್ನು ಚಿತ್ರಿಸಲಾಗಿದೆ.  ಆದರೆ ಈ ಚಿತ್ರವು ನಿಜಾವಾಗಲೂ  ನೈಜ ಘಟನೆಯಾದಾರಿತವಾಗಿದೆಯೇ ಎಂಬ ಪ್ರಶ್ನೆ ಮೂಡುವುದ ಸಹಜ ಅದಕ್ಕೆ ಉತ್ತರ ಕೊಡುವ ಪ್ರಯತ್ನ ನಾನು ಮಾಡುತ್ತಿದ್ದೇನೆ.

ಈ ಚಲನಚಿತ್ರವು ವೀಕ್ಷಕರನ್ನು 1989-90ರ ದಶಕಕ್ಕೆ ತೆಗೆದುಕೊಂಡು ಹೋಗುತ್ತದೆ, ಆ ಸಮಯದಲ್ಲಿ ಕಾಶ್ಮೀರಿ ಕಣಿವೆಯಲ್ಲಿ ಹೆಚ್ಚುತ್ತಿರುವ ಇಸ್ಲಾಮಿಕ್ ಜಿಹಾದ್‌ನಿಂದಾಗಿ, ಕಾಶ್ಮೀರದಲ್ಲಿ ಭಾರಿ ಸಂಘರ್ಷವು ಭುಗಿಲೆದ್ದಿತ್ತು. ಬಹುಸಂಖ್ಯಾತ ಹಿಂದೂಗಳನ್ನು ಜಿಹಾದಿ ಮುಸ್ಲಿಂರು ಕಾಶ್ಮೀರವನ್ನು ಬಿಟ್ಟು ಹೋಗುವಂತೆ ಒತ್ತಾಯಿಸಿದರು. ಅಂದಾಜಿನ ಪ್ರಕಾರ 1989-90ರ ದಶಕದಲ್ಲಿ ಕಾಶ್ಮೀರದಲ್ಲಿ ಒಟ್ಟು 140,000 ಕಾಶ್ಮೀರಿ ಪಂಡಿತರಲ್ಲಿ ಸರಿಸುಮಾರು 100,000 ಪಂಡಿತರು ಫೆಬ್ರವರಿ ಮತ್ತು ಮಾರ್ಚ್ ಕಾಶ್ಮೀರವನ್ನು ಬಿಟ್ಟು ವಲಸೆ ಹೋದರು. ಇನ್ನೂಳಿದವರನ್ನು ನಂತರದ ವರ್ಷಗಳಲ್ಲಿ ಕಾಶ್ಮೀರದಿಂದ ಡಿಸಲಾಯಿತು. 2011 ರ  ವೇಳೆಗೆ ಕಾಶ್ಮೀರದಲ್ಲಿದ್ದ ಕುಟುಂಬಗಳು ಸುಮಾರು 3,000 ಮಾತ್ರ. ವರದಿಯ ಪ್ರಕಾರ, 1980 ರ ದಶಕದಲ್ಲಿ ಶೇಖ್ ಅಬ್ದುಲ್ಲಾ ನೇತೃತ್ವದ ಸರ್ಕಾರವು ಕಾಶ್ಮೀರದ ಸುಮಾರು 300 ಪ್ರದೇಶಗಳ ಹೆಸರನ್ನು ಇಸ್ಲಾಮಿಕ್ ಹೆಸರುಗಳಿಗೆ ಬದಲಾಯಿಸಿದ್ದರು.

ಚಿತ್ರ ಪ್ರಾರಂಭವಾಗುತ್ತಿದ್ದಂತೆ ಮೊದಲ ಸನ್ನಿವೇಶದಲ್ಲಿ ಶ್ರೀನಗರದ ಹೈಕೋರ್ಟಿನ್ ನ್ಯಾಯಾದೀಶರನ್ನು ಹತ್ಯೆ ಮಾಡಲಾಗುತ್ತದೆ :

ನವೆಂಬರ್ 1989  ಅಮೀರ ಕಡಲ್‌ನ ಮಹಾರಾಜ್ ಬಜಾರ್‌ನಲ್ಲಿ ನಿವೃತ್ತ ನ್ಯಾಯಾಧೀಶ ನೀಲಕಂಠ ಗಂಜೂ ಅವರನ್ನು ಹಗಲು ಹೊತ್ತಿನಲ್ಲೇ ಗುಂಡಿಕ್ಕಿ ಕೊಲ್ಲಲಾಯಿತು. ಇದಕ್ಕೆ ಕಾರಣ ನ್ಯಾಯಮೂರ್ತಿಗಳು ಬಾರಾಮುಲ್ಲಾದ ನಡಿಹಾಲ್ ಗ್ರಾಮದ ನಿವಾಸಿ, ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಸಿಐಡಿ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಅಮರ್ ಚಂದ್ ಅವರ ಹತ್ಯೆಯಲ್ಲಿ ಭಾಗಿಯಾಗಿರುವ ಜೆಕೆಎಲ್‌ಎಫ್ ನಾಯಕ ಮಕ್ಬೂಲ್ ಭಟ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿದ್ದಕ್ಕೆ ಹತ್ಯೆ ಮಾಡಿದ್ದೇವೆ ಎಂದು ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, JKLF ನಾಯಕ ಯಾಸಿನ್ ಮಲಿಕ್ ಹೇಳಿದ್ದಾನೆ.

ಇನ್ನೂ ಚಿತ್ರದಲ್ಲಿ ತೋರಿಸುವ ಭಾರತೀಯ ವಾಯುಪಡೆಯ ಸಿಬ್ಬಂದಿಯ ಮೇಲೆ ನಡೆಸಿದ ದಾಳಿ: 

25 ಜನವರಿ 1990 ರಂದು, ರಾವಲ್ಪೋರಾ ಬಸ್ ನಿಲ್ದಾಣದಲ್ಲಿ ತಮ್ಮ ವಾಹನಕ್ಕಾಗಿ ಕಾಯುತ್ತಿದ್ದ ಭಾರತೀಯ ವಾಯುಪಡೆಯ ಸಿಬ್ಬಂದಿಯ ಮೇಲೆ ಯಾಸಿನ್ ಮಲಿಕ್ 40 ಸುತ್ತು ಗುಂಡು ಹಾರಿಸಿದ್ದನು. ನಾಲ್ವರು ಭಾರತೀಯ ವಾಯುಪಡೆ ಸಿಬ್ಬಂದಿ, ಸ್ಕ್ವಾಡ್ರನ್ ಲೀಡರ್ ರವಿ ಖನ್ನಾ, ಕಾರ್ಪೋರಲ್ ಡಿಬಿ ಸಿಂಗ್, ಕಾರ್ಪೋರಲ್ ಉದಯ್ ಶಂಕರ್ ಮತ್ತು ಏರ್‌ಮ್ಯಾನ್ ಆಜಾದ್ ಅಹ್ಮದ್ ಸಾವನ್ನಪ್ಪಿದ್ದಾರೆ ಮತ್ತು ಇತರ 10 ಐಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ.

https://twitter.com/AdityaRajKaul/status/1503099556040372225?ref_src=twsrc%5Etfw%7Ctwcamp%5Etweetembed%7Ctwterm%5E1503099556040372225%7Ctwgr%5E%7Ctwcon%5Es1_&ref_url=https%3A%2F%2Fwww.opindia.com%2F2022%2F03%2Fthe-kashmir-the-real-incidents-presented-in-the-movie%2F

ವರದಿಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪೋಸ್ಟ್‌ನ 1 ಹೆಡ್ ಕಾನ್‌ಸ್ಟೆಬಲ್ ಮತ್ತು 7 ಕಾನ್‌ಸ್ಟೆಬಲ್‌ಗಳ ಸಮ್ಮುಖದಲ್ಲಿ 2 ರಿಂದ 3 ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ಮತ್ತು ಒಂದು ಅರೆ-ಸ್ವಯಂಚಾಲಿತ ಪಿಸ್ತೂಲ್‌ನಿಂದ ಗುಂಡು ಹಾರಿಸಲಾಯಿತು.

ಪತಿಯ ರಕ್ತದಿಂದ ತೋಯ್ದ ಭತ್ತವನ್ನು ಪತ್ನಿಗೆ ತಿನ್ನುವಂತೆ ಒತ್ತಾಯಿಸಿದ ಸನ್ನಿವೇಶ

ಈ ಚಿತ್ರದಲ್ಲಿ ಅತ್ಯಂತ ಹೃದಯ ವಿದ್ರಾವಕ ದೃಶ್ಯವೆಂದರೆ ಮಹಿಳೆಯೊಬ್ಬಳಿಗೆ ತನ್ನ ಗಂಡನ ರಕ್ತದಲ್ಲಿ ತೋಯ್ದ ಅಕ್ಕಿಯನ್ನು ಬಲವಂತವಾಗಿ  ಜಿಹಾದಿಗಳು ತಿನ್ನಿಸುತ್ತಾರೆ. 1990ರಲ್ಲಿ ನೆರಹೊರೆಯವರು ಜಿಹಾದಿಗಳಿಗೆ ನೀಡಿದ ಸುಳಿವಿನ ಮೇರೆಗೆ ಎಂಜಿನಿಯರ್ ಬಿ.ಕೆ.ಗಂಜೂ ಅವರನ್ನು ಹುಡುಕಿಕೊಂಡು ಅವರ ಮನೆಗೆ ಬರುತ್ತಾರೆ. ಇದನ್ನು ಕಂಡ ಗುಂಜು ಭತ್ತದ ಬ್ಯಾರೆಲ್‌ನಲ್ಲಿ  ಅಡಗಿಕೊಂಡು ಕುಳಿತಿರುತ್ತಾರೆ. ಮನೆಗೆ ಬಂದ ಜಿಹಾದಿಗಳು ಬ್ಯಾರಲ್ ಗೆ ಅನೇಕ ಸುತ್ತಿನ ಗುಂಡು ಹಾರಿಸುತ್ತಾರೆ. ಇದರಿಂದ ಗುಂಜು ಪ್ರಾಣ ಕಳೆದುಕೊಳ್ಳುತ್ತಾರೆ. ಇವರ ರಕ್ತದಿಂದ ತೋಯ್ದ ಭತ್ತವನ್ನು ಜಿಹಾದಿಗಳು ಅವರ ಬಲವಂತವಾಗಿ ಪತ್ನಿಗೆ ತಿನ್ನಿಸುತ್ತಾರೆ.

ಹಾಗೇ ಚಿತ್ರದಲ್ಲಿ ಮಹಿಳೆಯನ್ನು ಮರವನ್ನು ಕತ್ತರಿಸುವ ಗರಗಸ ಯಂತ್ರದಿಂದ ಆಕೆಯ ದೇಹದ ಮಧ್ಯದಿಂದ ಕತ್ತಿರಿಸುವ ಸನ್ನಿವೇಶ

ಇದು ವಾಸ್ತವದಲ್ಲಿ ನಡೆದಿದ್ದು, ಜೂನ್ 1990 ರಲ್ಲಿ. ಗಿರಿಜಾ ಟಿಕೂ ಎಂಬುವರು ಈ ರೀತಿಯಾಗಿ ಸಾವನ್ನಪ್ಪಿದ್ದಾರೆ. ಟಿಕೂ ಬಂಡಿಪೋರಾದ ಕಾಶ್ಮೀರಿ ಹಿಂದೂ ಆಗಿದ್ದು ಅವರು ಕಾಶ್ಮೀರ ಕಣಿವೆಯ ವಿಶ್ವವಿದ್ಯಾನಿಲಯದಲ್ಲಿ ಪ್ರಯೋಗಾಲಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಯಾಸಿನ್ ಮಲಿಕ್ ನೇತೃತ್ವದ ಜೆಕೆಎಲ್‌ಎಫ್‌ನ ‘ಆಜಾದಿ ಚಳವಳಿ’ಯ ನಂತರ, ಟಿಕೂ ತನ್ನ ಕುಟುಂಬದೊಂದಿಗೆ ಕಾಶ್ಮೀರವನ್ನು ತೊರೆದು ಜಮ್ಮುವಿನಲ್ಲಿ ನೆಲೆಸಿದ್ದರು.

ಒಂದು ದಿನ, ಕಾಶ್ಮೀರದಲ್ಲಿ ಪರಿಸ್ಥಿತಿ ಉತ್ತಮವಾಗಿದೆ ಮತ್ತು ತಮ್ಮ ಸಂಬಳವನ್ನು ಬಂದು ತೆಗೆದುಕೊಂಡು ಹೋಗಿ ಅಂತ ಕರೆ ಬರುತ್ತೆ. ಕರೆಯ ಮೇರೆಗೆ  ಜೂನ್ 4, 1990 ರಂದು, ಗಿರಿಜಾ ತನ್ನ ಸಂಬಳವನ್ನು ಪಡೆಯಲು ಕಾಶ್ಮೀರಗೆ ಬಂದರು. ಹಾಗೇ ತನ್ನ ಸ್ಥಳೀಯ ಮುಸ್ಲಿಂ ಸಹೋದ್ಯೋಗಿಯನ್ನು ತನ್ನ ಮನೆಯಲ್ಲಿ ಭೇಟಿಯಾದರು. ಇವರ ಚಲನವಲನ ಗಮನಿಸುತ್ತಿದ್ದ ಜಿಹಾದಿ ಭಯೋತ್ಪಾದಕರು ಗಿರಿಜಾಳನ್ನು ತನ್ನ ಸಹೋದ್ಯೋಗಿಯ ಮನೆಯಿಂದ ಅಪಹರಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯುತ್ತಾರೆ.

ಅಪಹರಣದ ಕೆಲವು ದಿನಗಳ ನಂತರ, ಆಕೆಯ ಮೃತ ದೇಹವು ಭಯಾನಕ ಸ್ಥಿತಿಯಲ್ಲಿ ರಸ್ತೆಬದಿಯಲ್ಲಿ ಪತ್ತೆಯಾಗುತ್ತದೆ. ಶವಪರೀಕ್ಷೆ ಮಾಡಿದಾಗ ಆಕೆಯನ್ನು ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಮಾಡಿ ಮತ್ತು ಚಿತ್ರಹಿಂಸೆ ನೀಡಿ ಗಿರಿಜಾ ಬದುಕಿರುವಾಗಲೇ ಗರಗಸ ಯಂತ್ರದಿಂದ ಆಕೆಯ ದೇಹದ ಮಧ್ಯಭಾಗದಿಂದ ಎರಡು ತುಂಡುಗಳಾಗಿ ಕತ್ತರಿಸಲಾಯಿತು.

The Kashmir Files Saaksha Tv

ಚಿತ್ರದ ಕ್ಲೈಮ್ಯಾಕ್ಸ್ 2003ರ ನಾಡಿಮಾರ್ಗ್ ಹತ್ಯಾಕಾಂಡ (24 ಹಿಂದುಗಳನ್ನು ಸಾಲಗಿ ನಿಲ್ಲಿಸಿ ಗುಂಡಿಟ್ಟು ಕೊಂದಿದ್ದು)

ಅದು ಮಾರ್ಚ್ 23, 2003 ರಂದು, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ನಾಡಿಮಾರ್ಗ್ ಗ್ರಾಮದಲ್ಲಿ 24 ಹಿಂದೂ ಕಾಶ್ಮೀರಿ ಪಂಡಿತರನ್ನು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಕೊಂದರು. ಶಸ್ತ್ರಸಜ್ಜಿತ ಜಿಹಾದಿಗಳು ನಕಲಿ ಮಿಲಿಟರಿ ಸಮವಸ್ತ್ರವನ್ನು ಧರಿಸಿ ಬಂದು ಹಿಂದೂಗಳನ್ನು ಅವರ ಮನೆಗಳಿಂದ ಹೊರಗೆಳೆದು, ಸಾಲಾಗಿ ನಿಲ್ಲಿಸಿ ಅವರ ಹಣೆಗೆ ಗುಂಡಿಟ್ಟು ಕೊಂದಿದ್ದಾರೆ.

ಈ ಹತ್ಯಾಕಾಂಡದಲ್ಲಿ ಬಲಿಯಾದವರು 11 ಪುರುಷರು, 11 ಮಹಿಳೆಯರು ಮತ್ತು 2 ಚಿಕ್ಕ ಮಕ್ಕಳು 65 ವರ್ಷ ವಯಸ್ಸಿನವರಿಂದ 2 ವರ್ಷ ವಯಸ್ಸಿನವರು ಪ್ರಾಣ ಕಳೆದುಕೊಂಡಿದ್ದಾರೆ.

ಒಟ್ಟಾರೆಗೆ The Kashmir Files ಚಿತ್ರದಲ್ಲಿ ತೋರಿಸಿರುವ ಚಿತ್ರಗಳು ನೈಜ ಘಟನೆಯಾದಾರಿತವಾಗಿವೆ ಎಂದು ಸಾಬೀತಾಗುತ್ತದೆ.

Tags: #Saaksha TVThe Kashmir Files
ShareTweetSendShare
Join us on:

Related Posts

slum-dog-movie-glimpse-tabu-gauri-hegde-vijay-sethupathi-puri-jagannadh

ವಿಜಯ್ ಸೇತುಪತಿ ಮತ್ತು ಪೂರಿ ಜಗನ್ನಾಥ್ ಅವರ ಬಹುನಿರೀಕ್ಷಿತ ಆಕ್ಷನ್-ಡ್ರಾಮಾ ‘ಸ್ಲಮ್ ಡಾಗ್’ ಚಿತ್ರದ ಹೊಸ ಗ್ಲಿಂಪ್ಸ್ ರಿಲೀಸ್;

by admin
August 11, 2026
0

ವಿಜಯ್ ಸೇತುಪತಿ ಮತ್ತು ಪೂರಿ ಜಗನ್ನಾಥ್ ಅವರ ಬಹುನಿರೀಕ್ಷಿತ ಆಕ್ಷನ್-ಡ್ರಾಮಾ 'ಸ್ಲಮ್ ಡಾಗ್' ಚಿತ್ರದ ಹೊಸ ಗ್ಲಿಂಪ್ಸ್ ರಿಲೀಸ್; ‌ಪವರ್‌ಫುಲ್ ಅಧಿಕಾರಿ 'ಗೌರಿ ಹೆಗ್ಡೆ' ಪಾತ್ರದಲ್ಲಿ ಟಬು!...

varamahalakshmi-vrata-ashtalakshmi-coin-remedy-for-wealth

ವರಮಹಾಲಕ್ಷ್ಮಿ ವ್ರತದ ದಿನದಂದು ಎಂಟು ಒಂದು ರೂಪಾಯಿ ನಾಣ್ಯಗಳನ್ನು ಇಟ್ಟು ಅಷ್ಟಲಕ್ಷ್ಮಿ ದೇವತೆಗಳ ಆಶೀರ್ವಾದವನ್ನು ಪಡೆಯುವ ಮೂಲಕ ಮಾಡಬಹುದಾದ ತಾಂತ್ರಿಕ ಪರಿಹಾರ.

by admin
August 11, 2026
0

ಅಷ್ಟ ಐಶ್ವರ್ಯ ಪಡೆಯಲು ತಾಂತ್ರಿಕ ಪರಿಹಾರ ಅಷ್ಟ ಲಕ್ಷ್ಮಿ ನಾಣ್ಯಗಳು ಶುಕ್ರವಾರ ಮಹಾಲಕ್ಷ್ಮಿ ದೇವಿಗೆ ಶುಭ ದಿನ. ಆ ಶುಕ್ರವಾರ ಬರುವ ಶುಕ್ರ ಹೊರೆಯ ಸಮಯದಲ್ಲಿ ನಾವು...

asthalakshmi-mantra-money-remedy-friday-astrology-tips

ಹಣ ಬರಮಾಡಿಕೊಳ್ಳುವ ಈ ಮಂತ್ರವನ್ನು 28-08-2026 ರಂದು 5 ಬಾರಿ ಪಠಿಸಿ. ಅದೃಷ್ಟದ ರಾಜಯೋಗದ ಹಣವು ನಿಮ್ಮ ಬಳಿ ಸೇರುತ್ತದೆ.

by admin
August 11, 2026
0

ಹಣ ಬರಮಾಡಿಕೊಳ್ಳುವ ಈ ಮಂತ್ರವನ್ನು 28-08-2026 ರಂದು 5 ಬಾರಿ ಪಠಿಸಿ. ಅದೃಷ್ಟದ ರಾಜಯೋಗದ ಹಣವು ನಿಮ್ಮ ಬಳಿ ಸೇರುತ್ತದೆ. 28-08-2026 ರಂದು ನಗದು ಅಗತ್ಯವನ್ನು ಪೂರೈಸಲು...

biscoff-swiggy-dineout-dm-a-lonely-cup-campaign-offers

by admin
August 11, 2026
0

ಒಂಟಿ ಕಾಫಿ ಕಪ್ ಫೋಟೋ ಕಳುಹಿಸಿ, ಆಕರ್ಷಕ ಗಿಫ್ಟ್ ಗೆಲ್ಲಿ: ಟೀ - ಕಾಫಿ ಪ್ರಿಯರಿಗಾಗಿ ವಿನೂತನ ಆಫರ್!  ಬೆಂಗಳೂರು: ಬಿಸಿ ಬಿಸಿ ಟೀ ಅಥವಾ ಕಾಫಿ...

ಆಗಸ್ಟ್ 13ರ ಕಾವೇರಿ ಹೋರಾಟದ ಬಂದ್‌ಗೆ ವಿಘ್ನ:  ಸಂಘಟನೆಗಳ  ಒಡಕಿನಿಂದ ಅತಂತ್ರವಾಯ್ತು ಕಾವೇರಿ ಹೋರಾಟ

ಆಗಸ್ಟ್ 13ರ ಕಾವೇರಿ ಹೋರಾಟದ ಬಂದ್‌ಗೆ ವಿಘ್ನ: ಸಂಘಟನೆಗಳ ಒಡಕಿನಿಂದ ಅತಂತ್ರವಾಯ್ತು ಕಾವೇರಿ ಹೋರಾಟ

by Shwetha
August 11, 2026
0

ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಆಗಸ್ಟ್ 13ರಂದು ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಈಗ ಅನಿಶ್ಚಿತತೆಯ ಸುಳಿಗೆ ಸಿಲುಕಿದೆ. ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram