ಕರ್ನಾಟಕ – ಕೇರಳ ಸಂಪರ್ಕಿಸುವ ರಸ್ತೆಗಳನ್ನು ಮಣ್ಣು ಮುಚ್ಚಿ ಬಂದ್ ಮಾಡಿದ ಕೇರಳ ಸರ್ಕಾರ
ಮಂಗಳೂರು, ಜುಲೈ 1: ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಕೇರಳ ಸರ್ಕಾರವು ಕರ್ನಾಟಕ ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನೂ ಮಣ್ಣು ಮುಚ್ಚಿ ಬಂದ್ ಮಾಡಿದೆ. ಕಾಸರಗೋಡು ಜಿಲ್ಲಾಡಳಿತವು ದಕ್ಷಿಣಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದಿಢೀರನೆ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಬೆರಿಪದವು, ಪಾದೆಕಲ್ಲು, ಮುಗುಳಿ ಹಾಗೂ ಪದ್ಯಾಣ ಮೊದಲಾದ ಕಡೆಗಳಿಂದ ದಕ್ಷಿಣಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.
ಕಾಸರಗೋಡು ಗಡಿಭಾಗದ ಜನರು ತಮ್ಮ ಕೆಲಸ ಕಾರ್ಯಗಳಿಗೆ ಇದೇ ರಸ್ತೆಯ ಮೂಲಕ ಮಂಗಳೂರನ್ನು ಸಂಪರ್ಕಿಸಬೇಕು ಆದರೆ ಕೇರಳ ಸರ್ಕಾರ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಹರಡುತ್ತಿರುವ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.